ಟಿಕೆಟ್‌ಗಾಗಿ ಮುಂದುವರೆದ ಫೈಟ್ ; ಈ 19 ಕ್ಷೇತ್ರಗಳಲ್ಲಿ ಯಾರಾಗಲಿದ್ದಾರೆ ಅಭ್ಯರ್ಥಿ?

WhatsApp Group Join Now
Telegram Group Join Now
ಬೆಂಗಳೂರು, ಮಾರ್ಚ್‌ 08: ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯ ಬಳಿಕ ಎರಡನೇ ಪಟ್ಟಿ ಬಿಡುಗಡೆ ಸಜ್ಜಾಗಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ಮೊದಲ ಪಟ್ಟಿ ಬಿಡುಗಡೆಗೆ ಸರ್ಕಸ್‌ ಮುಂದುವರೆಸಿದೆ. ಇನ್ನೂ ಕಾಂಗ್ರೆಸ್‌ ನ 28 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಟಿಕೆಟ್‌ ಫೈನಲ್‌ ಆಗಿದ್ದು, ಉಳಿದ ಕ್ಷೇತ್ರಗಳ ಅಭ್ಯರ್ಥಿಯೇ ದೊಡ್ಡ ತಲೆನೋವಾಗಿದೆ.ಈಗಾಗಲೇ ಶೀಘ್ರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ಘೋಷಣೆ ಮಾಡಲಿದೆ ಎಂದು ತಿಳಿದು ಬಂದಿದ್ದು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಗುರುವಾರ ನವ ದೆಹಲಿಯಲ್ಲಿ ಸಭೆ ನಡೆಸಲಾಗಿದೆ.
ಕರ್ನಾಟಕದ 14 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿ 9 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.ಕರ್ನಾಟಕದ ಅಭ್ಯರ್ಥಿಗಳ ಪೈಕಿ ಎರಡು ಹಂತದಲ್ಲಿ ಟಿಕೆಟ್‌ ಘೋಷಣೆಯಾಗಲಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಗೆ ಪಟ್ಟಿಯನ್ನ ಕಳುಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಚರ್ಚೆ ನಡೆಸಿ ಒಂದು ಹಂತದ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಈ ಪಟ್ಟಿಯ ಬಗ್ಗೆ ಹೈಕಮಾಂಡ್‌ನಲ್ಲಿ ಜೊತೆಗೆ ಗುರುವಾರ ನಡೆದ ಸಭೆಯಲ್ಲಿ ಚರ್ಚೆಯಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್‌ ಮಾಡಲಾಗಿದೆ.ಕಾಂಗ್ರೆಸ್‌ ಹೈಕಮಾಂಡ್‌ ನಲ್ಲಿ ಅಂತಿಮವಾದ ಅಭ್ಯರ್ಥಿಗಳ ಪಟ್ಟಿ!ಬೆಂಗಳೂರು ಗ್ರಾಮಾಂತರ – ಡಿ.ಕೆ.

ಸುರೇಶ್‌ಬೆಂಗಳೂರು ಕೇಂದ್ರ – ಎನ್‌.ಎ. ಹ್ಯಾರಿಸ್‌ತುಮಕೂರು – ಮುದ್ದಹನುಮೇಗೌಡಚಿತ್ರದುರ್ಗ – ಚಂದ್ರಪ್ಪಕೋಲಾರ – ಕೆ.ಎಚ್‌. ಮುನಿಯಪ್ಪಮಂಡ್ಯ – ಸ್ಟಾರ್‌ ಚಂದ್ರು (ವೆಂಕಟರಾಮಣೇಗೌಡ)ಮೈಸೂರು – ಎಂ. ಲಕ್ಷ್ಮಣ್‌ಬೀದರ್‌ – ರಾಜಶೇಖರ್‌ ಪಾಟೀಲ್‌ಕಲಬುರಗಿ – ರಾಧಾಕೃಷ್ಣ ಈ ಕ್ಷೇತ್ರದಲ್ಲಿ ಟಿಕೆಟ್‌ ಗಾಗಿ ಆಕಾಂಕ್ಷಿಗಳು ಫೈಟ್?‌ಬೆಂಗಳೂರು ಉತ್ತರ – ಪ್ರೊ.

ರಾಜೀವ್‌ ಗೌಡ – ನಾರಾಯಣ ಸ್ವಾಮಿ, ಮೀನಾಕ್ಷಿ ಕೃಷ್ಣಬೈರೇಗೌಡಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ, ರಮೇಶ್‌ ಕುಮಾರ್‌ಚಿಕ್ಕಬಳ್ಳಾಪುರ – ರಕ್ಷಾರಾಮಯ್ಯ, ವೀರಪ್ಪ ಮೊಯ್ಲಿ, ಶಿವಶಂಕರ ರೆಡ್ಡಿಚಾಮರಾಜನಗರ – ಎಚ್‌.ಸಿ. ಮಹದೇವಪ್ಪ, ಸುನಿಲ್‌ ಬೋಸ್‌, ದರ್ಶನ್‌ ಧ್ರುವನಾರಾಯಣಹಾಸನ – ಶ್ರೇಯಸ್‌ ಪಟೇಲ್‌, ಬಾಗೂರು ಮಂಜುನಾಥ್ಉಡುಪಿ- ಚಿಕ್ಕಮಗಳೂರು – ಜಯಪ್ರಕಾಶ್‌ ಹೆಗ್ಡೆಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್‌, ಆರ್‌.ವಿ. ದೇಶಪಾಂಡೆಬೆಳಗಾವಿ – ಸತೀಶ್‌ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ, ಮೃಣಾಲ್‌‌ ಹೆಬ್ಬಾಳ್ಕರ್‌ಹುಬ್ಬಳ್ಳಿ- ಧಾರವಾಡ – ರಜತ ಉಳ್ಳಾಗಡ್ಡಿಮಠ್‌, ವಿನಯ್ ಕುಲಕರ್ಣಿ, ಶಿವಲೀಲಾ ಕುಲಕರ್ಣಿಹಾವೇರಿ – ಸಲೀಂ ಅಹಮದ್‌, ಡಿ.ಆರ್‌. ಪಾಟೀಲ್‌ಕೊಪ್ಪಳ – ಅಮರೇಗೌಡ ಬೈಯಾಪುರ, ರಾಜಶೇಖರ್‌ ಹಿಟ್ನಾಲ್‌ರಾಯಚೂರು- ಕುಮಾರ ನಾಯಕ, ರವಿ ಪಾಟೀಲ್‌ ನಾಯಕಬಳ್ಳಾರಿ – ನಾಗೇಂದ್ರ, ವಿ.ಎಸ್‌. ಉಗ್ರಪ್ಪ, ವೆಂಕಟೇಶ್‌ ಪ್ರಸಾದ್‌ಬಾಗಲಕೋಟೆ – ವೀಣಾ ಕಾಶಪ್ಪನವರ್‌, ಆನಂದ್‌ ನ್ಯಾಮಗೌಡ, ಅಜೇಯ್‌ ಕುಮಾರ್‌ ಸರನಾಯಕ್‌ವಿಜಯಪುರ – ರಾಜು ಅಲಗೂರು, ಕಾಂತ ನಾಯಕ್‌ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್, ಮಧು ಬಂಗಾರಪ್ಪದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ, ಬಿ.ಜಿ. ವಿನಯ್ ಕುಮಾರ್ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ/ ಲಕ್ಷ್ಮಣ್ ರಾವ್ ಚಿಂಗಳೆದಕ್ಷಿಣ ಕನ್ನಡ- ವಿನಯದ ಕುಮಾರ್ ಸೊರಕೆ, ರಮಾನಾಥ್ ರೈ, ಪದ್ಮರಾಜ್

WhatsApp Group Join Now
Telegram Group Join Now
Back to top button