9.71 ಕೋಟಿ ರೂ. ವಂಚನೆ: 220 ಮಂದಿ ವಿರುದ್ಧ ದೂರು

WhatsApp Group Join Now
Telegram Group Join Now

ಮೈಸೂರು: ಬ್ಯಾಂಕ್ ಅಧಿಕಾರಿಗಳೇ ಸೇರಿಕೊಂಡು ಅರ್ಹತೆ ಇಲ್ಲದವರಿಗೆ 9.71 ಕೋಟಿ ರೂಪಾಯಿಗೆ ಸಾಲ ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಲಷ್ಕರ್ ಪೊಲೀಸ್ ಠಾಣೆಗೆ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್.ಡಿ. ಸುಂದರೇಶ್ ದೂರು ನೀಡಿದ್ದಾರೆ.

 

ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿರುವ ಎಸ್‌ಬಿಐ ನಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ನಕಲಿ ವಿಳಾಸ, ದಾಖಲೆ ಸೃಷ್ಟಿಸಿ ಬ್ಯಾಂಕಿನಿಂದ 9.71 ಕೋಟಿ ರೂಪಾಯಿ ಸಾಲ ನೀಡುವಲ್ಲಿ ಬ್ಯಾಂಕಿನ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಸಾಲ ಪಡೆದವರು ಸೇರಿ 220 ಮಂದಿ ವಿರುದ್ಧ ನೀಡಲಾಗಿದೆ.

 

ಸಾಲ ಪಡೆದುಕೊಳ್ಳಲು ವೇತನದ ಅರ್ಹತೆ ಇಲ್ಲದಿದ್ದರೂ ಸಿಬಿಲ್ ಸ್ಕೋರ್ ದಾಖಲಾತಿಗಳನ್ನು ತಿದ್ದಲಾಗಿದೆ. ಹೊರ ಊರಿನ ವಿಳಾಸವಿದ್ದರೂ ಮಧ್ಯವರ್ತಿಗಳು ಮತ್ತು ನೌಕರರ ಸಹಕಾರದೊಂದಿಗೆ ಸುಳ್ಳು ವಿಳಾಸ ಸೇರಿ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ವಂಚಿಸಲಾಗಿದೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
Back to top button