650 ಕೋಟಿ ರೂ. ಭ್ರಷ್ಟಾಚಾರ : 28 ಅಧಿಕಾರಿಗಳ ಅಮಾನತು

WhatsApp Group Join Now
Telegram Group Join Now

ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆ ನವೀಕರಣ ಕಾಮಗಾರಿಯಲ್ಲಿ ನಡೆದ 650 ಕೋಟಿ ರೂ. ಅಷ್ಟಾಚಾರ ಪ್ರಕರಣದಲ್ಲಿ ಮೂರು ಉಪ ವಿಭಾಗಗಳ ಇಂಜಿನಿಯರಿಂಗ್ ಮತ್ತು ಇತರೆ ಅಧಿಕಾರಿಗಳನ್ನು ಒಳಗೊಂಡ 28 ಮಂದಿಯನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ.

2009 ರಿಂದ 2011 ರ ಅವಧಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ನವೀಕರಣ ಕಾಮಗಾರಿ ನಡೆಸಲಾಗಿತ್ತು.402 ಕೋಟಿ ರೂ. ಕಾಮಗಾರಿಗಳಿಗೆ ಸಂಬಂಧಿಸಿದಂತೆ 1283 ಕೋಟಿ ರೂ. ಮೊತ್ತವನ್ನು ಗುತ್ತಿಗೆದಾರರು ಕ್ಲೇಮ್ ಮಾಡಿದ್ದಾರೆ.

ಈ ಸಂಬಂಧ 13 ಪ್ರಕರಣಗಳನ್ನು ಜಲಸಂಪನ್ಮೂಲ ಇಲಾಖೆ ವಿಚಕ್ಷಣ ದಳ ತನಿಖೆ ನಡೆಸಿದ್ದು, 650 ಕೋಟಿ ರೂ. ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ಇಂಜಿನಿಯರ್ ಗಳು, ಕಚೇರಿ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸೇರಿ ನಕಲಿ ಬಿಲ್ ಸೃಷ್ಟಿಸಿ ಅವ್ಯವಹಾರದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಗೊತ್ತಾಗಿದೆ.

ಪ್ರಕರಣ ಸಂಬಂಧ ಹಾಲಿ ಕರ್ತವ್ಯದಲ್ಲಿರುವ 28 ಇಂಜಿನಿಯರ್ ಮತ್ತು ಕಚೇರಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ನಿವೃತ್ತ ಹಾಗೂ ನಿಧನರಾದ 18 ಅಧಿಕಾರಿಗಳ ವಿರುದ್ಧವೂ ಕೋರ್ಟ್ ನಲ್ಲಿ ದಾವೆ ಹೂಡಲು ಜಲ ಸಂಪನ್ಮೂಲ ಇಲಾಖೆ ಕ್ರಮಕೈಗೊಂಡಿದೆ.

WhatsApp Group Join Now
Telegram Group Join Now
Back to top button