ಬಿಗ್ ಶಾಕ್ 8 ಹಾಲಿ ಸಂಸದರಿಗೆ ; ಕೈತಪ್ಪಿದ ಬಿಜೆಪಿ ಟಿಕೆಟ್

WhatsApp Group Join Now
Telegram Group Join Now

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟವಾಗಿದ್ದು, ರಾಜ್ಯದ ಒಟ್ಟು 8 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ.

ಹಾಲಿ ಸಂಸದರಾದ ಡಿ.ವಿ.ಸದಾನಂದಗೌಡ, ಪ್ರತಾಪ್ ಸಿಂಹ, ಸಂಗಣ್ಣ ಕರಡಿ, ಶಿವಕುಮಾರ್ ಉದಾಸಿ, ಜಿ.ಎಸ್.ಬಸವರಾಜ್, ನಳೀನ್ ಕುಮಾರ್ ಕಟೀಲ್, ಶ್ರೀನಿವಾಸ್ ಪ್ರಸಾದ್, ದೇವೇಂದ್ರಪ್ಪ ಅವರಿಗೆ ಟಿಕೆಟ್ ಮಿಸ್ ಆಗಿದೆ.

ಡಿ.ವಿ.ಸದಾನಂದಗೌಡ ಬದಲಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.

ಪ್ರತಾಪ್ ಸಿಂಹ ಬದಲಾಗಿ ಮೈಸೂರು-ಕೊಡಗು ಕ್ಷೇತ್ರಕ್ಕೆ ಯದುವೀರ್ ಒಡೆಯರ್
ನಳೀನ್ ಕುಮಾರ್ ಕಟೀಲ್ ಬದಲು ದಕ್ಷಿಣ ಕನ್ನಡ ಕ್ಷೇತ್ರಕ್ಕೆ ಬ್ರಿಜೇಶ್ ಚೌಟಾ

ದೇವೇಂದ್ರಪ್ಪ ಬದಲು ಬಳ್ಳಾರಿಯಿಂದ ಬಿ.ಶ್ರೀರಾಮುಲು
ಶಿವಕುಮಾರ್ ಉದಾಸಿ ಬದಲು ಹಾವೇರಿಯಿಂದ ಬಸವರಾಜ್ ಬೊಮ್ಮಾಯಿ
ಜಿ.ಎಸ್.ಬಸವರಾಜ್ ಬದಲು ತುಮಕೂರಿನಿಂದ ವಿ.ಸೋಮಣ್ಣ
ಸಂಗಣ್ಣ ಕರಡಿ ಬದಲು ಕೊಪ್ಪಳದಿಂದ ಡಾ.ಬಸವರಾಜ್ ಕ್ಯಾವಟರ್
ವಿ.ಶ್ರೀನಿವಾಸ್ ಪ್ರಸಾದ್ ಬದಲು ಚಾಮರಾಜನಗರದಿಂದ ಎಸ್ ಬಾಲರಾಜುಗೆ ಟಿಕೆಟ್ ನೀಡಲಾಗಿದೆ.

WhatsApp Group Join Now
Telegram Group Join Now
Back to top button