ರಾಜ್ಯದ ಬಗ್ಗೆ ಮತ್ತೊಂದು ಸ್ಪೋಟಕ ಭವಿಷ್ಯ ಕೋಡಿಮಠ ಶ್ರೀ

WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ ಬಗ್ಗೆ ಈ ಹಿಂದೆ ಅನೇಕ ರೀತಿಯ ಭವಿಷ್ಯವನ್ನು ಕೋಡಿಮಠದ ಶ್ರೀಗಳು ಹೇಳಿದ್ದರು. ಇದೀಗ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದ್ದಾರೆ. ಅದೇ ಯುಗಾದಿ ನಂತ್ರ ಒಳ್ಳೆಯ ಮಳೆಯಾಗಿ ಬೆಳೆ ಬಂದ್ರೇ, ಧಾರ್ಮಿಕ ಮುಖಂಡನ ಸಾವು ಕೂಡ ಆಗಲಿದೆ ಎಂಬುದಾಗಿದೆ. ಯುಗಾದಿ ಕಳೆದ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದರು.

ಇನ್ನು ಇದೇ ವೇಳೆ ರಾಜ್ಯ ರಾಜಕೀಯ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ, ಇನ್ನ ಸಾಕಷ್ಟು ಸಮಯವಿದೆ ಎಂದರು.

ಈ ಕುರಿತಂತೆ ಕೆಲವು ದಿನಗಳ ಹಿಂದೆ ಕೋಲಾರದ ಮಾಲೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದಂತ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿಯವರು, ರಾಜ್ಯದಲ್ಲಿ ಯುಗಾದಿ ಕಳೆದ ನಂತ್ರ, ಒಳ್ಳೆ ಬೆಳೆ, ಮಳೆಯಾಗುವ ಲಕ್ಷಣಗಳಿವೆ ಎಂದಿದ್ದಾರೆ.

ಬೆಂಕಿ ಹಾವಳಿ, ನೀರಿನ ಹಾವಳಿ ಹೆಚ್ಚಾಗುತ್ತೆ, ಯುದ್ದ‌ ಆಗುತ್ತೆ. ಅನೇಕ‌ ಸಾವು ನೋವುಗಳು ಆಗುತ್ತೆ ಎಂದರು. ಜಾಗತಿಕ ಮಟ್ಟದಲ್ಲಿ ಮತಾಂದತೆ ಹೆಚ್ಚಾಗುತ್ತದೆ. ಕೆಲವೊಂದು ಕಡೆ ಬಾಂಬ್ ಸ್ಫೋಟ, ಭೂಕಂಪ ಆಗುತ್ತೆ. ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಸ್ಫೋಟಕ ಭವಿಷ್ಯ ನುಡಿದರು.

ಇದೇ ವೇಳೆಯಲ್ಲಿ ಗ್ಯಾರೆಂಟ್ ಗಳಿಂದ‌ ಸರ್ಕಾರ ನಡೆಯುತ್ತಿದ್ದೀಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನನ್ನಗಿಂತ ನಿಮಗೆ ಚೆನ್ನಾಗಿ ಗೊತ್ತು. ರಾಷ್ಟ್ರ ರಾಜಕಾರಣ ಸಹ ಯುಗಾದಿ ಮೇಲೆ ಗೊತ್ತಾಗುತ್ತದೆ. ಯುಗಾದಿ ನಂತರ‌ ಭವಿಷ್ಯ ಬರುವುದು. ಒಂದು ತಿಂಗಳು ಕಳೆದ ಮೇಲೆ ಮಳೆ, ಬೇಳೆ, ರಾಜಕೀಯ, ದುಡಿಮೆ, ವ್ಯಾಪಾರ ಎಲ್ಲಾ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Back to top button