ಪೋಕ್ಸೋ ಕೇಸ್​ನಲ್ಲಿ ರಾಜ್ಯದ ಮತ್ತೊಬ್ಬ ಸ್ವಾಮೀಜಿ ಅರೆಸ್ಟ್..!

WhatsApp Group Join Now
Telegram Group Join Now

ತುಮಕೂರು: ಪೋಕ್ಸೋ ಪ್ರಕರಣದ ಅಡಿಯಲ್ಲಿ ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಮಂಜುನಾಥ ಸ್ವಾಮೀಜಿಯನ್ನು ಬಂಧಿಸಲಾಗಿದೆ.

ಕಳೆದ ಫೆಬ್ರುವರಿ 10 ರಂದು ತುಮಕೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ನಿನ್ನೆ ತಡರಾತ್ರಿ ಆರೋಪಿತ ಸ್ವಾಮೀಜಿಯನ್ನು ಅರೆಸ್ಟ್ ಮಾಡಿದ್ದಾರೆ.

ವಿದ್ಯಾಚೌಡೇಶ್ವರಿ ಮಠದಲ್ಲಿ ಅಭಿಲಾಷ್ ಮತ್ತು ಅಭಿಷೇಕ್ ಅನ್ನೋರ ಸ್ವಾಮೀಜಿ ಜೊತೆ ಸೇವೆ ಸಲ್ಲಿಸುತ್ತಿದ್ದರು. ಇವರಲ್ಲಿ ಅಭಿಷೇಕ್ ಎಂಬ ವ್ಯಕ್ತಿಗೆ ಸ್ವಾಮೀಜಿ ಜೊತೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಮಠವನ್ನು ತೊರೆದಿದ್ದರು. ಈ ಘಟನೆ ನಡೆದ ಬಳಿಕ ‘ಚರ್ಮ ರೋಗಕ್ಕೆ ಚಿಕಿತ್ಸೆ ಕೊಡುವ ನೆಪದಲ್ಲಿ ನನ್ನ ಬೆತ್ತಲೆ ವಿಡಿಯೋ ಮಾಡಿಕೊಂಡು ನನ್ನನ್ನು ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆಂದು ಆರೋಪಿಸಿ ಅಭಿಷೇಕ್ ಅಂಡ್ ಟೀಂ ವಿರುದ್ಧ ಸ್ವಾಮೀಜಿ ದೂರು ದಾಖಲಿಸಿದ್ದರು. (ಸ್ವಾಮೀಜಿಗಳ ಪರವಾಗಿ ಆಪ್ತ ಅಭಿಲಾಷ್ ದೂರು ಕೊಟ್ಟಿರುತ್ತಾರೆ) ಈ ಸಂಬಂಧ ಒಟ್ಟು 6 ಜನರ ಮೇಲೆ ಎಫ್​ಐಆರ್ ದಾಖಲಾಗಿತ್ತು.

ಪೊಲೀಸರು ಅಭಿಷೇಕ್ ಅಂಡ್ ಟೀಂ ಅನ್ನು ವಿಚಾರಣೆಗೆ ಒಳಪಡಿಸಿದೆ. ತೀವ್ರ ತನಿಖೆ ವೇಳೆ ಅಭಿಷೇಕ್, ಶ್ರೀಗಳ ವಿರುದ್ಧ ಪ್ರತಿಯಾಗಿ ದೂರು ನೀಡುತ್ತಾರೆ. ಸ್ವಾಮೀಜಿ ಮಠದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಜೊತೆಗೆ ವಿಚಾರಣೆ ವೇಳೆಯೂ ಶ್ರೀಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಅಭಿಷೇಕ್ ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ನಿನ್ನೆ ತಡರಾತ್ರಿ ಮಠಕ್ಕೆ ತೆರಳಿದ್ದಾರೆ. ಪರಿಶೀಲನೆ ಬಳಿಕ ಬಾಲಮಂಜುನಾಥ ಸ್ವಾಮೀಜಿ ಹಾಗೂ ಆತನ ಆಪ್ತ ಸಹಾಯಕ ಅಭಿಲಾಷ್ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿಕೊಂಡು ಬಂಧಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ತುಮಕೂರು ಎಸ್​ಪಿ ಅಶೋಕ್ ಕೆವಿ ನೇತೃತ್ವದಲ್ಲಿ ಸ್ವಾಮೀಜಿಯ ಬಂಧನ ಆಗಿದೆ, ತನಿಖೆ ತೀವ್ರಗೊಂಡಿದೆ.

WhatsApp Group Join Now
Telegram Group Join Now
Back to top button