ಜನಸೇವೆ ಮಾಡಲು ಒಂದು ಅವಕಾಶ ನೀಡಿ: ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮನವಿ

ಜುಗೂಳ, ಶಿರಗುಪ್ಪಿ, ಕಾಗವಾಡ, ಉಗಾರ ಬಿ.ಕೆ. ಐನಾಪುರ, ಮೋಳೆ ಗ್ರಾಮಗಳಲ್ಲಿ ಜರುಗಿದ ಕಾರ್ಯಕರ್ತರ ಸಭೆ

WhatsApp Group Join Now
Telegram Group Join Now

ಬೆಳಗಾವಿ: ಚಿಕ್ಕೋಡಿ ಲೋಕಸಭೆ ಚುನಾವಣೆಗೆ ಮೇ.07 ರಂದು  ನಡೆಯಲಿರುವ ಮತದಾನದಲ್ಲಿ ನನ್ನ ಕ್ರಮ ಸಂಖ್ಯೆ 2ಕ್ಕೆ ಮತ ನೀಡುವ ಮೂಲಕ ಜನ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಚಿಕ್ಕೋಡಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮನವಿ ಮಾಡಿದರು.

 

ಚಿಕ್ಕೋಡಿ ಲೋಕಸಭೆಯ  ಕಾಗವಾಡ ವಿಧಾನಸಭಾ ಕ್ಷೇತ್ರದ ಜುಗೂಳ, ಶಿರಗುಪ್ಪಿ, ಕಾಗವಾಡ, ಉಗಾರ ಬಿ.ಕೆ. ಐನಾಪುರ, ಮೋಳೆ ಗ್ರಾಮಗಳಲ್ಲಿ ಜರುಗಿದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಮಹಿಳೆಯರ ಸಂಕಷ್ಟ ಅರಿತು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಪ್ರತಿಯಾಗಿ ಮಹಿಳೆಯರು ಈ ಬಾರಿಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ನನಗೆ ಮತ ನೀಡಬೇಕು. ಕಾಂಗ್ರೆಸ್‌ ಪುರುಷರಿಗೆ ಮಾತ್ರವಲ್ಲದೇ ಮಹಿಳೆಯರಿಗೂ ಟಿಕೆಟ್‌ ನೀಡಿ ಸ್ತ್ರೀಯರ ಪರವಾಗಿ ನಿಂತಿದೆ.  ಮುಖ್ಯವಾಗಿ ನಾನು ಕೂಡಾ ನಿಮ್ಮ ಕಷ್ಟದಲ್ಲಿ ಭಾಗಿಯಾಗುತ್ತೇನೆ. ಯಾವುದೇ‌ ಅನುಮಾನ ಬೇಡ. ಹಾಗಾಗಿ ಕಾಂಗ್ರೆಸ್ ಬೆಂಬಲಿಸಿರಿ. ಸ್ವಸಹಾಯ ಸಂಘಗಳಿಗೆ ನನ್ನ ಹೊಸ ಯೋಜನೆಗಳಿವೆ. ಆರ್ಥಿಕವಾಗಿ ನಾನು ಮಹಿಳೆಯರನ್ನು ಬಲಪಡಿಸಲು ಕ್ರಮ ಕೈಗೊಳ್ಳಲಿದ್ದೇನೆ. ಹಾಗಾಗಿ ನನ್ನನ್ನು ಗೆಲ್ಲಿಸಲ್ಲಿಸಿ ಎಂದು ಮನವಿ ಮಾಡಿದರು.

 

 

ಚಿಕ್ಕೋಡಿ ಲೋಕಸಭೆಯ ಹಿಂದಿನ ಹಾಲಿ ಸಂಸದರಾದ ಅಣ್ಣಾಸಾಬ್ ಜೊಲ್ಲೆ ಅವರು ನಿಮ್ಮ ಕಷ್ಟ ಕಾಲದಲ್ಲಿ ಸ್ಪಂದಿಸಿಲ್ಲ. ಇನ್ನು ರಾಜದ 25 ಸಂಸದರು ರಾಜ್ಯಕ್ಕೆ ಬರಬೇಕಾದ ಅನುದಾನದ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಲಿಲ್ಲ. ಆದ್ದರಿಂದ ಚಿಕ್ಕೋಡಿ ಲೋಕಸಭೆಯಿಂದ ನನಗೆ ಒಂದೇ ಒಂದು ಅವಕಾಶ ನೀಡಿದರೆ, ನಿಮ್ಮ ಪರವಾಗಿ ನಾನು ಸಂಸತ್ತಿನಲ್ಲಿ ಧ್ವನಿ ಎತ್ತಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದ ಅವರು, ಈ ಭಾಗದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಸಿಎಂ ಸಿದ್ದರಾಮಯ್ಯ, ತಂದೆ, ಸಚಿವರಾದ ಸತೀಶ್ ಜಾರಕಿಹೊಳಿಯವರು, ಶಾಸಕರಾದ ರಾಜು ಕಾಗೆಯವರು ಸೇರಿದಂತೆ ಎಲ್ಲಾ ಶಾಸಕರ ಸಲಹೆ, ಸೂಚನೆಗಳನ್ನು ಪಡೆದು ಅಭಿವೃದ್ಧಿಯ ಹೊಳೆ ಹರಿಸುತ್ತೇನೆಂದು ಭರವಸೆ ನೀಡಿದರು.

 

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಹಿಂದೆ ಯಾವ ಸರ್ಕಾರಗಳು ನೀಡದಂತಹ ಸೌಲಭ್ಯ ನೀಡುವ ಮೂಲಕ ರಾಜ್ಯದ ಪ್ರತಿಯೊಬ್ಬ ಪ್ರಜೆಗಳಿಗೂ ಸರ್ಕಾರದ ಒಂದಿಲ್ಲೊಂದು ಸೌಲಭ್ಯ ತಲುಪುವಂತೆ ಮಾಡಿದ್ದು, ಸರ್ಕಾರದ ಸಾಧನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್ ಪಕ್ಷ ಮಹಿಳೆಯರು, ಬಡವರು, ದೀನದಲಿತರು ಹಾಗೂ ರೈತರ ಪರವಾದ ಪಕ್ಷವಾಗಿದೆ. ಅವರೆಲ್ಲರ ಅನುಕೂಲಕ್ಕಾಗಿ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೇ ಕೆಲವು ಶ್ರೀಮಂತ ಉದ್ಯಮಿಗಳ ಪರವಾಗಿದ್ದಾರೆ. ಆಹಾರ ಉತ್ಪಾದನೆಗೆ ಬೆಂಬಲ ಬೆಲೆಗೆ ದೆಹಲಿಯಲ್ಲಿ ಅನ್ನದಾತರು ಪ್ರತಿಭಟಿಸಿದ್ದರೂ ಅವರ ಬಗ್ಗೆ ಅನುಕಂಪ ತೋರುತ್ತಿಲ್ಲ ಎಂದು ಆರೋಪಿಸಿದರು.

 

 

ನಾನು ಎಂಬಿಎ ಪದವಿ ಪಡೆದಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡಿದ್ದೇನೆ. ತಂದೆಯವರ ಬೈ ಇಲೆಕ್ಸೆನ್ ನಲ್ಲಿ ನನ್ನ ಸಹೋದರ ರಾಹುಲ್, ನಾನು ಪ್ರಚಾರ ಮಾಡಿದ ಅನುಭವ ಇದೆ. ಆದರೆ  ಇದು ನನ್ನ ಮೊದಲ ಚುನಾವಣೆ ಆಗಿದ್ದರಿಂದ ನಿವೆಲ್ಲರೂ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಆರ್ಶೀವದಿಸಿ ಎಂದು ಮನವಿ ಮಾಡಿದರು.

 

ಈ ವೇಳೆ ಶಾಸಕ ರಾಜು ಕಾಗೆ ಮಾತನಾಡಿ, ಸ್ವಾತ್ಯಂತ್ರ ಬಂದು 77 ವರ್ಷ ಕಳೆದಿವೆ.  ಕಾಂಗ್ರೆಸ್‌ ಸರ್ಕಾರ 65 ವರ್ಷಗಳ ಕಾಲ ಸತತ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಶಾಶ್ವತ ನೆಲೆಯುರುವಂತೆ ಮಾಡಿದೆ. ಆದರೆ ಬಿಜೆಪಿ ಸರ್ಕಾರ ಬರಿ 10 ವರ್ಷ ಅಧಿಕಾರ ನಡೆಸಿ ನಾವೇ ಎಲ್ಲ ಅಭಿವೃದ್ಧಿ ಮಾಡಿದ್ಧೇವೆ ಎಂಬ ಪೊಳ್ಳು ಭಾಷಣಗಳನ್ನು ಮಾಡುತ್ತಿದ್ದಾರೆ. ಮತದಾರರು ಸಿಎಂ ಸಿದ್ದರಾಮಯ್ಯ ನೇತೃತ್ವದ  ಕಾಂಗ್ರೆಸ್‌  ಸರ್ಕಾರ ಜನಪರ ಕೆಲಸ ಮಾಡಿದೆ.  ಆದ್ದರಿಂದ  ಪಕ್ಷ ಮಾಡಿದ ಅಭಿವೃದ್ದಿ ಕೆಲಸಗಳನ್ನು ನೋಡಿ  ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಬೇಕು ಎಂದ ಅವರು, ಕಾಂಗ್ರೆಸ್‌ ಪಕ್ಷ ಬಡ ಜನರಿಗೆ, ರೈತಾಪಿ ಜನರಿಗೆ ಹಾಗೂ ಮಹಿಳೆರಿಗೋಸ್ಕರ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಯೊಜನೆ ತಂದ ಕೈ ಪಕ್ಷಕ್ಕೆ ಮತ ನೀಡಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

 


 

ಚಿಕ್ಕ ವಯಸ್ಸಿನಲ್ಲೇ ಡೊಡ್ಡ ಜವಾಬ್ದಾರಿ: ಅತಿ ಚಿಕ್ಕ ವಯಸ್ಸಿನಲ್ಲೇ ನಾವೇಲ್ಲ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ದೊಡ್ಡ  ಜವಾಬ್ದಾರಿಯನ್ನು ಅವರ ಮೇಲೆ ಹಾಕಿದ್ದೇವೆ.  ನನಗಿಗ 70 ವರ್ಷ ಆದರೂ ಕೂಡಾ ಪಾರ್ಲಿಮೆಂಟ್ನಲ್ಲಿ ಮಾತನಾಡುವ ಶಕ್ತಿ ನನಗಿಲ್ಲ.  ಈಗ ಚಿಕ್ಕ ವಯಸ್ಸಿನಲ್ಲಿ ನಮ್ಮ ಪಕ್ಷ ಪ್ರಿಯಂಕಾಗೆ ದೊಡ್ಡ ಜವಾಬ್ದಾರಿ ನೀಡದೆ. ಆದ್ದರಿಂದ ಮತದಾರರು ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಶಕ್ತಿ ತುಂಬವ ಕೆಲಸ ಎಲ್ಲ ಮತದಾರರು ಮಾಡಬೇಕು ಎಂದು ಮನವಿ ಮಾಡಿದ ಅವರು,

 

ಮೋದಿಯ ಅಚ್ಚೆ ದಿನ ಬರಲೇ ಇಲ್ಲ: ಪ್ರಧಾನಿ ಮೋದಿಯವರು  ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15  ಲಕ್ಷ ರೂ. ನೀಡುವುದಾಗಿ  2014 ರಲ್ಲಿ ಭರವಸೆ ನೀಡಿದರು, ಇಲ್ಲಿವರೆಗೂ ನೈಯಾ ಪೈಸೆ ಬಂದಿಲ್ಲ, ಮೋದಿ ಪತ್ರಿ ಭಾರಿ ಭಾಷಣದಲ್ಲಿ ಅಚ್ಚೆ ದಿನ ಆಯೇಗಾ ಎಂದು ಸುಳ್ಳು ಭಾಷಣ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ.  ಮೋದಿ ಅವರು ಹೇಳಿದ ಒಂದು ಕಾರ್ಯವನ್ನು ಇನ್ನುವರೆಗೂ ಮಾಡಿಲ್ಲ.  ಅಲ್ಲದೇ ಹಿಂದೂ ಮುಸ್ಲಿಂಗಳಲ್ಲಿ  ಜಗಳ ಹಚ್ಚುವ ಕೆಲಸ ಮೋದಿ ಮಾಡುತ್ತಿದ್ದಾರೆ. ಇಂಥಹ ಮೋದಿಯವರಿಗೆ ಮತದಾರರು ತಕ್ಕ ಪಾಠ ಕಲಿಸಲು ಮುಂದಾಗಬೇಕು ಎಂದರು.

 

 

ಇದಕ್ಕೂ ಮೊದಲು  ಜುಗುಳ ಗ್ರಾಮದಲ್ಲಿರುವ ಪ್ರಸಿದ್ಧ ದರ್ಗಾಕ್ಕೆ ಶಾಸಕರು ಹಾಗೂ ಹಿರಿಯರಾದ  ರಾಜು ಕಾಗೆ ಅವರ ಜೊತೆಗೆ  ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಭೇಟಿ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಗೆ ಆಗಮಿಸಿದ  ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಗ್ರಾಮದ ಮಹಿಳೆಯರು ಆರತಿ ಎತ್ತಿ ಹೂಮಾಲೆ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.  ಈ ವೇಳೆ ವಿಜಯ ಅಕ್ಕಿವಾಟೆ, ರೂಪಾ ಕಾಂಬಳೆ, ಹುದ್ದಾರ್ ಗೌಡರು, ಉತ್ತಮ ಪಾಟೀಲ್, ದಿಗ್ವಿಜಯ ಪವಾರ್ ದೇಸಾಯಿ, ದೇವೇಂದ್ರ ಕಾಕಾ, ಮಹಾದೇವ ತುಬಶೆಟ್ಟಿ ಸೇರಿದಂತೆ ಹಲವರು ಇದ್ದರು.

WhatsApp Group Join Now
Telegram Group Join Now
Back to top button