ಕಾರ್ಮಿಕರಿಗೆ ಕೀಟ್ ವಿತರಿಸಿದ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್

WhatsApp Group Join Now
Telegram Group Join Now

ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ ಅವರು ಸರ್ಕಾರದ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಕಿಟ್ ಗಳನ್ನು ಕಾರ್ಮಿಕರಿಗೆ ವಿತರಿಸಿದರು.

ಗುರುವಾರ ಸಂಜೆ ಬೆಳಗಾವಿಯ ಉತ್ತರ ಶಾಸಕ ಆಸೀಫ್ ಸೇಠ್ ಅವರು ಸರ್ಕಾರದ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಕಿಟ್ ಗಳನ್ನು ಇಲೆಕ್ಟ್ರಿಷಿಯನ್ಸ್, ಪ್ಲಂಬರ್ಸ್ ಮತ್ತು ಮೇಸ್ತ್ರಿ ಸೇರಿದಂತೆ ಇನ್ನುಳಿದ ಕಾರ್ಮಿಕರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಕಿಟಗಳನ್ನು ಪಡೆದ ಕಾರ್ಮಿಕರು ಶಾಸಕ ಆಸೀಫ್ ಸೇಠ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಬಡ ಕಾರ್ಮಿಕರು ವೃತ್ತಿಗೆ ಬೇಕಾದ ಕಿಟಗಳನ್ನು ಖರೀದಿಸಲು ಆಗುವುದಿಲ್ಲ. ಅವರ ಅನುಕೂಲ ಮತ್ತು ಸುರಕ್ಷತೆಗಾಗಿ ಸರ್ಕಾರ ಕಾರ್ಮಿಕ ಇಲಾಖೆಯ ಮೂಲಕ ಕಿಟ್ ಗಳನ್ನು ವಿತರಿಸುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಸರ್ಕಾರದ ಕಾರ್ಮಿಕ ಇಲಾಖೆಯ ಸೌಲಭ್ಯಗಳು ಎಲ್ಲ ಕಾರ್ಮಿಕರಿಗೂ ಸಿಗುವಂತಾಗಬೇಕು. ಕಾರ್ಮಿಕ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮತ್ತು ತಾವೂ ಸದಾಸಿದ್ಧರಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕಾರ್ಮಿಕರು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇನ್ನುಳಿದವರು ಭಾಗಿಯಾಗಿದ್ಧರು.

WhatsApp Group Join Now
Telegram Group Join Now
Back to top button