Fake soap powder: ನೀವು ಮನೆಗೆ ತರೋ ಸೋಪ್ ಪೌಡರ್ ಒರಿಜಿನಲ್ಲಾ? – ನಕಲಿ ರಿನ್, ಸರ್ಫ್, ವೀಲ್ ಪೌಡರ್ ದಂಧೆ ಬಯಲು!
ಬೆಂಗಳೂರು : ಪ್ರತಿಷ್ಠಿತಿ ಕಂಪನಿಗಳ ಸೋಪ್ ಪೌಡರ್ ಬ್ರಾಂಡ್ ಗಳನ್ನು ನಕಲಿ (Fake soap powder) ಮಾಡಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಬೆಂಗಳೂರು ಪೊಲೀಸರು (Bengaluru Police) ಬಯಲಿಗೆಳೆಯುವಲ್ಲಿ ಸಫಲವಾಗಿದ್ದಾರೆ. ಹಿಂದೂಸ್ತಾನ್ ಯುನಿಲಿವರ್ (Hindustan Unilever) ಕಂಪನಿಯು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡಿದ್ದ ಮಲ್ಲೇಶ್ವರ ಪೊಲೀಸ್ ಠಾಣೆ (Malleshwar police Station) ಪೊಲೀಸರು ಈ ದಂಧೆಯ ಹಿಂದೆ ಬಿದ್ದಿದ್ದರು.
ಮಲ್ಲೇಶ್ವರ ಪ್ರದೇಶದಲ್ಲಿ ಕಿರಾಣಿ ಅಂಗಡಿಗಳಿಗೆ ನೂರಾರು ಕೆಜಿ ನಕಲಿ ಸೋಪ್ ಪೌಡರುಗಳು ಸರಬರಾಜು ಆಗುತ್ತಿದ್ದು, ಈ ಹಿಂದೆ ಬಲುದೊಡ್ಡ ಜಾಲವೊಂದು ಕಾರ್ಯನಿರ್ವಹಿಸುತ್ತಿರುವ ಅನುಮಾನ ವ್ಯಕ್ತವಾಗಿತ್ತು.
ಮಾದನಾಯಕನ ಹಳ್ಳಿಯಲ್ಲಿರುವ ಫ್ಯಾಕ್ಟರಿಯೊಂದರ ಮೇಲೆ ದಾಳಿ ಮಾಡಿರುವ ಪೊಲೀಸರು 20 ಲಕ್ಷ ರೂ. ಮೌಲ್ಯದ ರಿನ್, ಸರ್ಫ್ ಮತ್ತು ವೀಲ್ ಪೌಡರ್ ಪ್ಯಾಕೆಟ್ ಗಳನ್ನು ಹಾಗೂ 15 ಲಕ್ಷ ರೂ. ಮೌಲ್ಯದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅರ್ಜುನ್ ಜೈ ನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.