ಮೋದಲ ಬಾರಿಗೆ ಖಾನಾಪೂರ ತಾಲೂಕಿನ ಎಲ್ಲ ಅದಿಕಾರಿಗಳ ಸಭೆ ನಡೆಸಿ ಕಾಮಗಾರಿಗಳ ಬಗ್ಗೆ ವಿಚಾರಿಸಿದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

WhatsApp Group Join Now
Telegram Group Join Now

*ಮೋದಲ ಬಾರಿಗೆ ಖಾನಾಪೂರ ತಾಲೂಕಿನ ಎಲ್ಲ ಅದಿಕಾರಿಗಳ ಸಭೆ ನಡೆಸಿ ಕಾಮಗಾರಿಗಳ ಬಗ್ಗೆ ವಿಚಾರಿಸಿದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ*

 

ಖಾನಾಪೂರ ತಾಲೂಕಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಉತ್ತರ ಕನ್ನಡದ ನೂತನವಾಗಿ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಗಮಿಸಿ ತಾಲೂಕಿನ ಎಲ್ಲ ಅದಿಕಾರಿಗಳ ಸಭೆ ನಡೆಸಿದರು

 

ಆದರಿಲ್ಲಿ ತಾಲೂಕಿನ ಮೂಲಭೂತ ಸೌಕರ್ಯಗಳಾದ ರಸ್ತೆ ನೀರು ಪರಿಸರ ಇನ್ನಿತರ ಕಾಮಗಾರಿಗಳ ಕುರಿತು ಚರ್ಚಿಸಿ ಮುಂದಿನ ದಿನಗಳಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು

 

ಕಳೆದ 20 ವರ್ಷಗಳಿಂದ ಆಡಳಿತ ಮಾಡಿದ ಸಂಸದರಾದ ಅನಂತಕುಮಾರ್ ಹೆಗಡೆಯವರು ಚುಣಾವಣೆ ಸಂಧರ್ಭದಲ್ಲಿ ಮಾತ್ರ ಕಾಣಿಸುತ್ತಿದ್ದು ತಾಲೂಕಿನಲ್ಲಿ ಯಾವುದೆ ಅಭಿವೃದ್ಧಿ ಮಾಡಿಲ್ಲ ಆದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಸದರಾಗಿ ಮೋದಲ ಬಾರಿಗೆ ತಾಲೂಕಿಗೆ ಆಗಮಿಸಿ ಸಮಸ್ಯೆಗಳನ್ನ ಆಲಿಸುತ್ತಿರುವದಕ್ಕೆ ಮತದಾರರ ಮನಸ್ಸಿನಲ್ಲಿ ತಾಲೂಕಿನ ಅಭಿವೃದ್ಧಿಗೆ ಸ್ರಮಿಸಬಹುದೆಂದು ಆಶಾಭಾವನೆ ಮೂಡಿಸಿದೆ

 

ನಂತರ ಅಂಬೇಡ್ಕರ್ ಪುತ್ಥಳಿ ಬಸವೆಶ್ವರ ಪುತ್ಥಳಿ ಚೌರಾಸಿ ಮಂದಿರಕ್ಕೆ ನಮಸ್ಕರಿಸಿ ಶಿವ ಸ್ಮಾರಕದಲ್ಲಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕರ್ತರಿಂದ ಸತ್ಕಾರ ಸಮಾರಂಭ ನಡೆಯಿತು

 

ವರದಿ ,:ಜ್ಯೋತಿಬಾ ಬೆಂಡಿಗೇರಿ

WhatsApp Group Join Now
Telegram Group Join Now
Back to top button