New Ration Card : ಜೂನ್ ತಿಂಗಳಿನಿಂದ ಈ ವರ್ಗದ ಜನರಿಗೆ ಪಡಿತರ ಕಾರ್ಡ್ ವಿತರಣೆ ಪ್ರಾರಂಭ!

WhatsApp Group Join Now
Telegram Group Join Now

ಎಪಿಎಲ್ ಪಡಿತರ ಚೀಟಿ (APL ration card) ತಿದ್ದುಪಡಿ ಹಾಗೂ ಅರ್ಜಿ (Application) ಆಹ್ವಾನಕ್ಕಾಗಿ ಕಾಯುತ್ತಿದ್ದೀರಾ? ಈ ನಿಮ್ಮ ಆಸೆ ಜೂನ್ ಮೊದಲ ವಾರದಲ್ಲಿ ಈಡೇರಲಿದೆ.

ಇಂದು ಎಲ್ಲರ ಮನೆಗಳಲ್ಲೂ ಪಡಿತರ ಚೀಟಿ ಗಳನ್ನು (Ration card) ಕಾಣಬಹುದು. ಪಡಿತರ ಚೀಟಿ ಒಂದು ಆಧಾರ್ ಆಧಾರಿತ ರಾಷ್ಟ್ರೀಯ ಪಡಿತರ ಕಾರ್ಡ್ ಪೋರ್ಟಬಿಲಿಟಿ (national ration card portability) ಯೋಜನೆಯಾಗಿದೆ.

ಭಾರತದೊಳಗಿರುವ ಎಲ್ಲಾ ಜನರಿಗೂ ಆಹಾರದ ಕೊರತೆಯನ್ನು ನೀಗಿಸುವ ಸಲುವಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಸಬ್ಸಿಡಿ (loan) ಆಹಾರ ಧಾನ್ಯವನ್ನು ಖರೀದಿಸಲು ಅರ್ಹರಾಗಿರುವ ಕುಟುಂಬಗಳಿಗೆ ಭಾರತದಲ್ಲಿ ರಾಜ್ಯ ಸರ್ಕಾರಗಳು ನೀಡುವ ಅಧಿಕೃತ ದಾಖಲೆಯಾಗಿದೆ. ಒಟ್ಟಾರೆ ಮೂರು ವಿಧಗಳ ಪಡಿತರ ಚೀಟಿಗಳನ್ನು ನಾವು ಕಾಣಬಹುದು.

ಮೊದಲನೆಯದಾಗಿ ಎಪಿಎಲ್ (APL) ಕಾರ್ಡ್, ಈ ಪಡಿತರ ಚೀಟಿಯ ಕಾರ್ಡ್ ನಲ್ಲಿ ಬಡತನ ರೇಖೆಗಳಿಂದ ಮೇಲಿರುವ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ
ಬಿಪಿಎಲ್ (BPL) ಕಾರ್ಡ್, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ (BPL card) ಅಡಿಯಲ್ಲಿ ಆಹಾರ ಧಾನ್ಯಗಳನ್ನು ಪಡೆಯಬಹುದು.

ಎಎವೈ (AAY), ಅಂತ್ಯೋದಯ ಅನ್ನ ಯೋಜನೆ (AAY) ಪಡಿತರ ಚೀಟಿಗಳನ್ನು ಬಡವರ ಕುಟುಂಬಗಳಿಗೆ ನೀಡಲಾಗುತ್ತದೆ.
“ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್” (one nation one ration card) ಇದರ ಅಡಿಯಲ್ಲಿ ಫಲಾನುಭವಿಗಳು ಭಾರತದಲ್ಲಿ ಎಲ್ಲಿ ಬೇಕಾದರೂ ಸಬ್ಸಿಡಿ(subsidy) ಆಹಾರವನ್ನು ಖರೀದಿಸಬಹುದು.

ಎಪಿಎಲ್ (APL)  :

ಈ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರವು ನಿಗದಿಪಡಿಸಿದ ಬಡತನ ಮಿತಿಗಿಂತ ಮೇಲಿರುವವರಿಗೆ ಆಹಾರ ಧಾನ್ಯಗಳನ್ನು ಪೂರೈಸುತ್ತದೆ. ಎಪಿಎಲ್ (APL) ಕಾರ್ಡ್ ಅಡಿಯಲ್ಲಿ ಅರ್ಹ  ಕುಟುಂಬಗಳು, ಪ್ರತಿ ಕುಟುಂಬಕ್ಕೆ 10kg ನಿಂದ 20kg ಆಹಾರ ಧಾನ್ಯಗಳಗಳನ್ನು ಮಾಸಿಕ ಹಂಚಿಕೆಯಲ್ಲಿ ಪಡೆಯುತ್ತವೆ.

ಹೊಸ ಅರ್ಜಿಗಳಿಗೆ (for new application) ಆಹ್ವಾನವನ್ನು ಹಾಗೂ ತಿದ್ದುಪಡಿಯನ್ನು ಕಳೆದ ಒಂದೂವರೆ ವರ್ಷಗಳಿಂದ ತಡೆಹಿಡಿಯಲಾಗಿತ್ತು.  ಇತ್ತೀಚಿಗೆ ರಾಜ್ಯ ಸರ್ಕಾರ ಎಪಿಎಲ್ ಪಡಿತರ ಚೀಟಿ (APL ration card) ಪಡೆಯಲು ಅರ್ಜಿ ಆಹ್ವಾನಗಳ ಬಗ್ಗೆ  ಹೇಳುತ್ತಲೇ ಇತ್ತು. ಆದರೆ ಇಂದು ಆಹಾರ ಇಲಾಖೆ ಮಾಡಿರುವ ನಿರ್ಧಾರದ ಅಡಿಯಲ್ಲಿ ಜೂನ್ (june) ತಿಂಗಳ ಮೊದಲ ವಾರದಲ್ಲಿ ಎಪಿಎಲ್ ಕಾರ್ಡ್ ಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಅಂದರೆ ಲೋಕಸಭಾ ಚುನಾವಣೆ(lokh sabha election)ಯ ನಂತರ ಮತ್ತೆ ಎಪಿಎಲ್ ಪಡಿತರ ಚೀಟಿ ವಿತರಣೆಗೆ ಮತ್ತೆ ಚಾಲನೆ ದೊರೆಯುತ್ತಿರುವುದುತ್ತಿರುವುದು ಅರ್ಹ ಕುಟುಂಬಗಳಿಗೆ ಖುಷಿ ವಿಚಾರ ಇದಾಗಿದೆ. ತಡೆ ಹಿಡಿಯಲು ಕಾರಣ ಏನು? ಹಾಗೂ ಹೊಸ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಸ್ಥಗಿತಗೊಂಡಿದ್ದ ಕಾರಣ?

ಕಳೆದ ಒಂದೂವರೆ ವರ್ಷಗಳ ಹಿಂದೆ ಅಂದರೆ 2023ರ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ (Vidhan sabha election) ನಡೆದಿತ್ತು. ಈ ಚುನಾವಣೆಗೆ ತಯಾರಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಪಡಿತರ ಚೀಟಿಗಳ ವಿತರಣೆ ಮತ್ತು ಹೊಸ ಅರ್ಜಿಗಳು ಹಾಗೂ ತಿದ್ದುಪಡಿ ಕೆಲಸಗಳನ್ನು ಸ್ಥಗಿತಗಿತಗೊಳಿಸಲಾಗಿತ್ತು. ಇನ್ನು ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದ ಕಾರಣ ಅಷ್ಟೇನೂ ಗಮನವನ್ನು ಕೊಡಲಿಲ್ಲ. ಆದರೆ ಜನಗಳ ಒತ್ತಾಸೆಯ ಮೇರೆಗೆ ಮತ್ತೆ ಅರ್ಜಿ ಆಹ್ವಾನಿಸಲು ಮುಂದಾಗಿದೆ.

ಕಾಂಗ್ರೆಸ್ ಸರ್ಕಾರ  ಪಡಿತರ ಚೀಟಿಗಳ ಬಗ್ಗೆ ಗಮನ ಕೊಡದಿರುವ ಕಾರಣವೇನು?:

ನಿಮಗೆ ತಿಳಿದಿರುವ ಹಾಗೆ ಚುನಾವಣೆಗೆ ಮುನ್ನವೇ  ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು (five guaranty scheme’s) ಘೋಷಣೆ ಮಾಡಿತ್ತು. ಇನ್ನು ಈ ಐದು ಗ್ಯಾರಂಟಿಗಳನ್ನು ಜನರು ಪಡೆಯಬೇಕೆಂದರೆ ರೇಷನ್ ಕಾರ್ಡ್ ಕಡ್ಡಾಯವಾಗಿತ್ತು. ಇನ್ನು ಈ ರಾಜ್ಯ ಸರ್ಕಾರದ ಐದು ಗ್ಯಾರೆಂಟಿಗಳ ಪ್ರಯೋಜನವನ್ನು ಪಡೆಯಬೇಕೆಂಬ ಹಂಬಲದೊಂದಿಗೆ ಜನರು ಹೊಸದಾಗಿ ಅರ್ಜಿ ಸಲ್ಲಿಸುತ್ತಾರೆ ಎಂದು ತಿಳಿದು ಅರ್ಜಿ ಆಹ್ವಾನಕ್ಕೆ ಪೋರ್ಟಲ್ ಓಪನ್ ಮಾಡಲಿಲ್ಲ.

ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ 2023-24 ನೇ ಸಾಲಿನಲ್ಲಿ ಸರ್ಕಾರ ಹಲವು ಬಾರಿ ರೇಷನ್ ಕಾರ್ಡ್ (ration card) ತಿದ್ದುಪಡಿಗೆ ಅವಕಾಶವನ್ನು ನೀಡಿತ್ತು. ಆದರೆ ಅರ್ಜಿ ಸಲ್ಲಿಸಲು ಸರ್ವರ್‌ ಸಮಸ್ಯೆಯಿಂದ ಅರ್ಹತೆ ಇದ್ದ ಕುಟುಂಬಗಳಿಗೆ ತಿದ್ದುಪಡಿಗೆ ಅವಕಶ ಸಿಗಲಿಲ್ಲ. ಆದ್ದರಿಂದ ಜೂನ್ 4 ರಂದು ಬರುವ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಚುನಾವಣಾ ನಿರ್ಬಂಧಗಳನ್ನು ತೆಗೆದು ಹಾಕಲಾಗುತ್ತದೆ. ತದ ನಂತರ ಅಂದರೆ ಜೂನ್ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ಎಪಿಎಲ್ ಪಡಿತರ ಚೀಟಿಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ.

ಹೊಸ ಎಪಿಎಲ್ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

 

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮೊದಲಿಗೆ ಅಧಿಕೃತ ವೆಬ್ಸೈಟ್  ಗೆ (website) ಭೇಟಿನೀಡುವುದು.
https://nfsa.gov.in/portal/apply_ration_card
ನಂತರ ಮುಖಪುಟದಲ್ಲಿ ಕಾಣುವ ಇ ಸೇವೆ  (e service) ಎಂಬ ಬಟನ್ ಕ್ಲಿಕ್ ಮಾಡಬೇಕು.
ಮುಂದುವರೆದು ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ ಎಂಬ ಆಯ್ಕೆ ಯನ್ನು ಕ್ಲಿಕ್ ಮಾಡಬೇಕು.
ನಂತರ ನಿಮ್ಮ ಕುಟುಂಬದ ಆದಾಯದ ಮೇಲೆ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಅರ್ಜಿಯಲ್ಲಿ ಮನೆ ಯಜಮಾನಿಯ ವಿವರದಿಂದ ನಿಮ್ಮ ಕುಟುಂಬದ ಸದಸ್ಯರ ಆಧಾರ್ ಕಾರ್ಡ್, ಅವರ ವಯಸ್ಸು ಹಾಗೂ ಇನ್ನಿತರ ಮಾಹಿತಿಗಳನ್ನು  ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ಗಮನಿಸಿ (notice) :

ರೇಷನ್‌ ಕಾರ್ಡ್‌ನ ಸ್ಥತಿ ತಿಳಿಯಲು ಈ ವೆಬ್‌ಸೈಟ್‌ಗೆ ಭೇಟಿ ನೀಡಿ  https://ahara.kar.nic.in/WebForms/Show_RationCard.aspx
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಂಬಂಧಿಸಿದ ಮಾಹಿತಿಗಳಿಗೆ https://ahara.kar.nic.in/Home/EServices ಭೇಟಿ ನೀಡಿ.

ದಯವಿಟ್ಟು ಗಮನಿಸಿ:  https://aradhanasamaya.com  ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now
Back to top button