ದಾವಣಗೆರೆ | ಮನೆಯಲ್ಲಿ ಕಳ್ಳತನ: ಆರೋಪಿ ಬಂಧನ

WhatsApp Group Join Now
Telegram Group Join Now

ದಾವಣಗೆರೆ: ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ₹5.51 ಲಕ್ಷ ಮೌಲ್ಯದ 90.4 ಗ್ರಾಂ ಚಿನ್ನದ ಆಭರಣ ಹಾಗೂ ₹ 4,000 ವಶಪಡಿಸಿಕೊಂಡಿದ್ದಾರೆ.

 

ಹೊಸದುರ್ಗದ ಸೆಂಟ್ರಿಂಗ್ ಕೆಲಸಗಾರ ಸೈಯ್ಯದ್ ಪಜಲ್(29) ಬಂಧಿತ. ಕೆಟಿಜೆ ನಗರದ 15ನೇ ಕ್ರಾಸ್‌ನಲ್ಲಿ ಪ್ರಮೀಳಾ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು.

 

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಜಯಕುಮಾರ ಎಂ. ಸಂತೋಷ ಹಾಗೂ ಮಂಜುನಾಥ ಜಿ. ಹಾಗೂ ನಗರ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ಕೆಟಿಜೆ ನಗರ ಠಾಣೆಯ ಎಸ್‌ಐ ಸುನಿಲ್ ಕುಮಾರ್ ಎಚ್.ಎಸ್. ಜಿಲ್ಲಾ ಪೊಲೀಸ್ ಕಚೇರಿಯ ಪಿಐ ಇಸ್ಮಾಯಿಲ್ ಬಿ. ಹಾಗೂ ಪಿಎಸ್‌ಐಗಳಾದ ಸಾಗರ ಅತ್ತರವಾಲಾ ಹಾಗೂ ಎನ್.ಆರ್ ಕಾಟೆ, ಸಿಬ್ಬಂದಿ ಶಂಕರ್ ಜಾಧವ್, ಪ್ರಕಾಶ ಟಿ., ಷಣ್ಮುಖ ಕೆ. ಎಂ.ಮಂಜಪ್ಪ, ಶಿವರಾಜ್ ಎಂ.ಎಸ್, ರಾಜನಾಗ ಜಿ.ಎನ್., ಎಎಸ್‌ಐ ಹಾಗೂ ಅಕ್ತರ್ ಎಸ್. ಎಂ., ವೀರೇಶ ವಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ ಹಾಗು ಶಾಂತ ಕುಮಾರ ಅವರ ತಂಡ ಬಂಧಿಸಿತ್ತು.

 

ಆರೋಪಿಯ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯ 2 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Back to top button