ಬೆಳಗಾವಿ: ‘ಜೈ ಮಹಾರಾಷ್ಟ್ರ ‘ಎಂದು ಬರೆದ ಎಂಇಎಸ್ ನಾಯಕ ಶುಭಂ ಶಳಕೆ ಸೇರಿ ಮೂವರ ಬಂಧನ:
ಬೆಳಗಾವಿಯಲ್ಲಿ ಕುಸ್ತಿ ಅಖಾಡದಲ್ಲೂ ಕುಸ್ತಿಪಟುವೋರ್ವ ‘ಜೈ ಮಹಾರಾಷ್ಟ್ರ’ ಎಂದಿದ್ದ. ಈ ವೇಳೆ ಉದ್ಯಮಿ ಶ್ರೀಕಾಂತ್ ದೇಸಾಯಿ ಕುಸ್ತಿಪಟುಗೆ ಬುದ್ಧಿವಾದ ಹೇಳಿ ‘ಜೈ ಕರ್ನಾಟಕ ಹೇಳುವಂತೆ’ ಸಲಹೆ ನೀಡಿದ್ದರು. ಇದನ್ನು ವಿರೋಧಿಸಿ ಕಾರ್ಖಾನೆ ಮೇಲೆ ದಾಳಿ ನಡೆಸಿ ಫ್ಲೆಕ್ಸ್ ಹರಿದಿದ್ದರು. ಇದೀಗ ಈ ನಾಡದ್ರೋಹಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ, : ನಾಡದ್ರೋಹಿ ಎಂಇಎಸ್ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಂತೆ ಇತ್ತೀಚೆಗೆ ‘ಜೈ ಮಹಾರಾಷ್ಟ್ರ’ ಎಂದು ಬರೆದು ಪುಂಡಾಟಿಕೆ ಮೆರೆದಿದ್ದವರನ್ನ ಬೆಳಗಾವಿಯ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ. ಎಂಇಎಸ್ನ ಶುಭಂ ಶಳಕೆ ಸೇರಿ ಮೂವರು ಎರಡು ದಿನಗಳ ಹಿಂದೆ ಉದ್ಯಮಿ ಶ್ರೀಕಾಂತ್ ದೇಸಾಯಿ ಎಂಬುವವರ ಕಾರ್ಖಾನೆ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದರು. ಈ ಹಿನ್ನಲೆ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇದೀಗ ಮೂವರನ್ನು ಬಂಧಿಸಲಾಗಿದೆ.
ಕುಸ್ತಿ ಅಖಾಡದಲ್ಲಿ ‘ಜೈ ಮಹಾರಾಷ್ಟ್ರ’ ಎಂದಿದ್ದ ಕುಸ್ತಿಪಟು
ಬೆಳಗಾವಿಯಲ್ಲಿ ಕುಸ್ತಿ ಅಖಾಡದಲ್ಲೂ ಕುಸ್ತಿಪಟುವೋರ್ವ ‘ಜೈ ಮಹಾರಾಷ್ಟ್ರ’ ಎಂದಿದ್ದ. ಈ ವೇಳೆ ಉದ್ಯಮಿ ಶ್ರೀಕಾಂತ್ ದೇಸಾಯಿ ಕುಸ್ತಿಪಟುಗೆ ಬುದ್ಧಿವಾದ ಹೇಳಿ ‘ಜೈ ಕರ್ನಾಟಕ ಹೇಳುವಂತೆ’ ಸಲಹೆ ನೀಡಿದ್ದರು. ಇದನ್ನು ವಿರೋಧಿಸಿ ಕಾರ್ಖಾನೆ ಮೇಲೆ ದಾಳಿ ನಡೆಸಿ ಫ್ಲೆಕ್ಸ್ ಹರಿದಿದ್ದರು. ಅಷ್ಟೇ ಅಲ್ಲ, ಫ್ಲೆಕ್ಸ್ ಹರಿದು ಜೈ ಮಹಾರಾಷ್ಟ್ರ ಎಂದು ಗೋಡೆ ಬರಹ ಕೂಡ ಬರೆದಿದ್ದರು. ಇತ್ತ ಭಾಷಾ ವೈಷಮ್ಯ ಭಿತ್ತುವ ನಿಟ್ಟಿನಲ್ಲಿ ಶುಭಂ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೂಡಲೇ ಎಚ್ಚೆತ್ತ ಡಿಸಿಪಿ ರೋಹನ್ ಜಗದೀಶ್ ಸೂಚನೆ ಮೇರೆಗೆ ಮೂವರು ನಾಡದ್ರೋಹಿಗಳನ್ನ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.