APMC (ಎಪಿಎಂಸಿ) ಪೊಲೀಸರಿಂದ ಬೈಕ್ ಕಳ್ಳನ ಬಂಧನ
ಬೆಳಗಾವಿ: ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ ಎಪಿಎಂಸಿ ಪೊಲೀಸರು ಆರೋಪಿತರನ್ನು ಬಂಧಿಸಿ 4 ಬೈಕ್ ಜಪ್ತು ಮಾಡಿದ್ದಾರೆ.
ಸದಾಶಿವ ನಗರ, ಖಡೇಬಜಾರಗಳಲ್ಲಿ ನಿಲ್ಲಿಸಿದ ಮೋಟರ್ ಸೈಕಲ್‌ಗಳ ಕಳ್ಳತನ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿ ಇಂತಹ ಮೋಟರ್ ಸೈಕಲ್ ಕಳ್ಳರನ್ನು ಪತ್ತೆ ಮಾಡಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿತ್ತು.
ಅದರಂತೆ ಎಪಿಎಂಸಿ ಹಾಗೂ ಅವರ ತಂಡ ಸೂಕ್ಷ್ಮ ಮಾಹಿತಿ ಕಲೆ ಹಾಕಿ ದಿನಾಂಕ ಮಾರ್ಚ್ 28 ರಂದು ಸಂಶಯದ ಆರೋಪಿತನಾದ ಸಂಜು ಮಲ್ಲಪ್ಪ ಮೇಕಳಿ (24) ಸಾ|| ಬೆನಕನಹೊಳಿ ತಾ || ಹುಕ್ಕೇರಿ ಇವನನ್ನು ವಶಕ್ಕೆ ಪಡೆದುಕೊಂಡು ಅವರಿಂದ ಅಕಿ ರೂ. 1,35,೦೦೦/- ಮೌಲ್ಯದ ೦4 ಮೋಟಾರು ಸೈಕಲ್‌ಗಳನ್ನು (3-ಹಿರೋ ಹೊಂಡಾ ಸ್ಪೆಂಡರ್, 1-ಡಿಓ ಸ್ಕೂಟರ್) ಜಪ್ತ ಪಡಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ಈ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸಿ, ಮೋಟರ್ ಸೈಕಲ್ ಜಪ್ತಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಎಪಿಎಂಸಿ ಠಾಣೆಯ ಪಿಐ, ಪಿಎಸ್‌ಐ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಡಿಸಿಪಿ (ಕಾ&ಸು), ಡಿಸಿಪಿ (ಅ&ಸಂ), ಬೆಳಗಾವಿ ನಗರ ಶ್ಲಾಘಿಸಿದ್ದಾರೆ.