ಕಿಡ್ನಾಪ್ ಕೇಸ್ನಲ್ಲಿ ರೇವಣ್ಣಗೆ ಸಿಗದ ರಿಲೀಫ್! 7 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್
ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಪೆನ್ ಡ್ರೈವ್ ಕೇಸ್ನಲ್ಲಿ ಸಂತ್ರಸ್ತ ಮಹಿಳೆಯನ್ನ ಕಿಡ್ನಾಪ್ (Kidnap Case) ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಹೆಚ್ ಡಿ ರೇವಣ್ಣ (HD Revanna) ಎಸ್ಐಟಿ ಕಸ್ಟಡಿ ಅಂತ್ಯವಾದ ಹಿನ್ನಲೆಯಲ್ಲಿ ಬುದವಾರ ಅವರನ್ನು ಮತ್ತೆ ಜನಪ್ರತಿನಿಧಿ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು.
ರೇವಣ್ಣ ಪರ ವಕೀಲರ ವಾದ ಮತ್ತು ಎಸ್ಐಟಿ ವಾದವನ್ನು ಆಲಿಸಿದ ನ್ಯಾಯಧೀಶ ರವೀಂದ್ರ ಬಿ ಕಟ್ಟಿಮನಿ ರೇವಣ್ಣರನ್ನ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಂದರೆ ಇನ್ನೂ 6 ದಿನ ಮಾಜಿ ಸಚಿವ ರೇವಣ್ಣ ಪರಪ್ಪನ ಅಗ್ರಹಾರದಲ್ಲೇ ಕಳೆಯಬೇಕಿದೆ.
ಕಸ್ಟಡಿ ವಿಚಾರಣೆ ವೇಳೆ ರೇವಣ್ಣ ತಮ್ಮ ಪ್ರಶ್ನೆಗೆ ಸರಿಯಾಗಿ ಸ್ಪಂಧಿಸಿಲ್ಲ, ಬಹುತೇಕ ಪ್ರಶ್ನೆಗಳಿಗೆ ಉತ್ತರವನ್ನೇ ನೀಡಿಲ್ಲ. ಒಂದು ವೇಳೆ ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯವನ್ನು ನಾಶ ಪಡಿಸುವ ಸಾಧ್ಯತೆ ಇದೆ. ಹಾಗಾಗಿ ಜಾಮೀನು ನೀಡದೆ , ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದೆ. ಎಸ್ಐಟಿ ಮನವಿ ಮೇರೆಗೆ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.
ನ್ಯಾಯಾಂಗ ಬಂಧನಕ್ಕೆ ನೀಡದಂತೆ ರೇವಣ್ಣಪರ ವಕೀಲ ಮನವಿ
ರೇವಣ್ಣ ಪರ ವಕೀಲ ಎಸ್ಐಟಿ ಮನವಿ, ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಯಾವುದೇ ಆರೋಪಗಳಿಲ್ಲ. ರೇವಣ್ಣ ಸಾಹೇಬರು ಹೇಳಿದ್ದಾರೆ ಎನ್ನುವ ಆರೋಪ ಮಾತ್ರ ಇದೆ. ಈಗಾಗಲೇ ಮೂರು ದಿನಗಳ ಸತತ ವಿಚಾರಣೆ ನಡೆಸಲಾಗಿದೆ. ಹೀಗಾಗಿ ನ್ಯಾಯಾಂಗ ಬಂಧನಕ್ಕೆ ನೀಡದೇ ಬಿಡುಗಡೆ ಮಾಡಲು ರೇವಣ್ಣ ಪರ ವಕೀಲರ ಮನವಿ ಮಾಡಿದರು.
ಆದರೆ ಎಸ್ಐಟಿ ಪರ ವಕೀಲ ಎಸ್ ಪಿಪಿ ಜಗದೀಶ್ , ವಿಚಾರಣೆ ವೇಳೆ ರೇವಣ್ಣ ನಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಪ್ರಮುಖ ಆರೋಪಿ ಇನ್ನೂ ಸಿಕ್ಕಿಲ್ಲ, ಅಲ್ಲದೆ ಎಸ್ಐಟಿ ತನಿಖೆ ಇನ್ನೂ ಮುಂದುವರಿದಿದೆ ಎಂದು ವಾದಿಸಿದರು.
ಅನಾರೋಗ್ಯವಿದ್ದರೂ ವಿಚಾರಣೆಗೆ ಭಾಗಿ
ಪೊಲೀಸ್ ಕಸ್ಟಡಿಯಲ್ಲಿ ತೊಂದೆರೆಯಾಗಿದೆ ಎಂದು ಜಡ್ಜ್ ರೇವಣ್ಣಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೇವಣ್ಣ. ನನಗೆ ಅನಾರೋಗ್ಯವಿದ್ದರು ವಿರಣೆಗೆಚಾ ಭಾಗಿಯಾಗಿದ್ದೇನೆ. ಮೂರು ರಾತ್ರಿ ನಿದ್ದೆ ಮಾಡಿಲ್ಲ, ತನಿಖೆ ಮುಕ್ತಾಯವಾಗಿದೆ ಅಂತಾ ನಿನ್ನೆ ಹೇಳಿದ್ದರು. ಅದರೆ ಇವತ್ತು ಮತ್ತೆ ಎರಡು ಗಂಟೆ ವಿಚಾರಣೆ ಮಾಡಿದ್ದಾರೆ. ನಾನು ತಪ್ಪೆ ಮಾಡದೇ ಒಪ್ಪಿಕೋ ಅಂದರೇ ಹೇಗೆ? ನನಗೆ ಸತತವಾಗಿ ಹೊಟ್ಟೆ ನೋವು ಎಂದು ಹೇಳಿಕೊಂಡರೂ ಆಸ್ಪತ್ರೆಗೆ ದಾಖಲು ಮಾಡಿಲ್ಲ. ಇವರು ರಾಜಕೀಯ ಪ್ರೇರಿತವಾಗಿ ಬಂಧನ ಮಾಡಿದ್ದಾರೆ ಎಂದು ನ್ಯಾಯಾದೀಶರ ಮುಂದೆ ಹೇಳಿಕೊಂಡಿದ್ದಾರೆ.
ನಾಳೆ ಜಾಮೀನು ಅರ್ಜಿ ವಿಚಾರಣೆ
ಇದೇ ಪ್ರಕರಣದಲ್ಲಿ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಒಂದು ವೇಳೆ ನಾಳೆ ಜಾಮೀನು ಸಿಗದಿದ್ದರೆ ರೇವಣ್ಣ ಇನ್ನೂ 7 ದಿನ ಪರಪ್ಪನ ಅಗ್ರಹಾರದಲ್ಲೇ ಕಳೆಯಬೇಕಾಗುತ್ತದೆ. ಕೋರ್ಟ್ ನ್ಯಾಯಾಂಕ ಬಂಧನಕ್ಕೆ ಒಪ್ಪಿಸಿದ ನಂತರ ಪೊಲೀಸರು ಬಿಗಿ ಭದ್ರತೆಯಲ್ಲಿ ರೇವಣ್ಣರನ್ನ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯುತ್ತಿದ್ದಾರೆ.