ಸಿನಿಮಾದಲ್ಲಿ 5 ಸೆಕೆಂಡ್‌ಗಳ ಅಭಿನಯದ ಅವಕಾಶ.. ರಾತ್ರೋರಾತ್ರಿ ಬದಲಾಯಿತು ಈ ಭಿಕ್ಷುಕನ ಬದುಕು

WhatsApp Group Join Now
Telegram Group Join Now

ಸಿನಿಮಾ ಕ್ಷೇತ್ರವೆಂದರೆ ಹಾಗೆಯೇ ಅಲ್ಲಿ ಒಮ್ಮೆ ಮಿಂಚಿದರೆ ಆತ/ ಆಕೆ ಸ್ಟಾರ್‌ ಆಗುತ್ತಾರೆ. ಆದರೆ ಈ ಸ್ಟಾರ್‌ ಗಿರಿ ಕೆಲವರಿಗ ದೀರ್ಘಾಕಾಲದವರೆಗೂ ಇರುತ್ತದೆ ಇನ್ನು ಕೆಲವರಿಗೆ ಅಲ್ಪಕಾಲ ಮಾತ್ರ ಇರುತ್ತದೆ. ಒಮ್ಮೆ ಯೋಚಿಸಿ ನೀವು ತುಂಬಾ ಬಡತನದಲ್ಲಿದ್ದರೆ ಅಥವಾ ನಿಮ್ಮಲ್ಲಿ ಒಂದು ಹೊತ್ತು ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದರೆ.

ಒಂದೇ ಅವಕಾಶ ಬಂದು ನಿಮ್ಮ ಜೀವನ ಸಂಪೂರ್ಣ ಬದಲಾದರೆ ಹೇಗೆ?

ಕೇಳಿದಾಗ ನಮ್ಮ ಜೀವನದಲ್ಲೂ ಈ ರೀತಿಯ ಅವಕಾಶ ನಮಗೆ ಬರಬೇಕೆನ್ನುವ ಯೋಚನೆಯೊಂದು ಒಂದು ಕ್ಷಣ ಬಂದು ಹೋಗುತ್ತದೆ. 2014 ರಲ್ಲಿ ಬಾಲಿವುಡ್‌ ನಲ್ಲಿ ರಾಜ್‌ ಕುಮಾರ್‌ ಹಿರಾನಿ ಅವರ ʼಪಿಕೆʼ ಎನ್ನುವ ಸಿನಿಮಾವೊಂದು ಬಂದಿತ್ತು. ಈ ಸಿನಿಮಾದಲ್ಲಿ ಆಮಿರ್‌ ಖಾನ್‌, ಅನುಷ್ಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ʼಪಿಕೆʼ ಎನ್ನುವ ಪಾತ್ರವನ್ನು ಆಮಿರ್‌ ಖಾನ್ ಮಾಡಿದ್ದರು. ನೀವು ಪಿಕೆ ಸಿನಿಮಾವನ್ನು ನೋಡಿದ್ದರೆ ಅದರಲ್ಲಿ ಹತ್ತಾರು ಹಾಸ್ಯ ಸನ್ನಿವೇಶವುಳ್ಳ ದೃಶ್ಯಗಳು ಬರುತ್ತದೆ. ಈ ಹತ್ತಾರು ದೃಶ್ಯದಲ್ಲಿ ಬ್ರಿಡ್ಜ್‌ ನಲ್ಲಿ ನಿಂತು ಭಿಕ್ಷೆ ಬೇಡುವ ವ್ಯಕ್ತಿಯೊಬ್ಬನ ದೃಶ್ಯವೂ ಬರುತ್ತದೆ.

ಈ ದೃಶ್ಯದಲ್ಲಿದ್ದಾತನ ಹೆಸರು ಹೆಸರು ಮನೋಜ್‌ ರಾಯ್.‌ ಇವರು ಜೀವನಕ್ಕಾಗಿ ನಿಜವಾಗಿಯೂ ಭಿಕ್ಷೆಯನ್ನೇ ಬೇಡುತ್ತಿದ್ದರು.

ಉತ್ತರ ಅಸ್ಸಾಂನ ಸೋನಿತ್‌ಪುರದಲ್ಲಿ ದಿನಗೂಲಿ ಮಾಡುವವರ ಮಗನಾಗಿರುವ ಮನೋಜ್‌ ರಾಯ್. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಜನ್ಮ ನೀಡಿದ ನಾಲ್ಕೇ ದಿನದಲ್ಲಿ ತಾಯಿ ತೀರಿಕೊಳ್ಳುತ್ತಾರೆ. ಆರಂಭದಲ್ಲಿ ಶಾಲೆಗೆ ಹೋಗುತ್ತಿದ್ದ ಮನೋಜ್‌ ಆ ಬಳಿಕ ಶಾಲೆಗೆ ಹೋಗುವುದನ್ನು ಅರ್ಧದಲ್ಲೇ ನಿಲ್ಲಿಸುತ್ತಾರೆ. ಜೀವನೋಪಾಯಕ್ಕಾಗಿ ಭಿಕ್ಷಾಟನೆಯನ್ನು ಆರಂಭಿಸುತ್ತಾರೆ.

ಭಿಕ್ಷೆಗಾಗಿ ಮನೋಜ್‌ ದೆಹಲಿಗೆ ತೆರಳಿ, ಜಂತರ್ ಮಂತರ್ ಸ್ಥಳದಲ್ಲಿ ಭಿಕ್ಷೆ ಬೇಡಲು ಆರಂಭಿಸುತ್ತಾರೆ. ಕಣ್ಣು ಕಾಣದ ಕುರುಡರಂತೆ ನಿಂತುಕೊಂಡು ಭಿಕ್ಷೆ ಬೇಡಲು ಶುರು ಮಾಡುತ್ತಾರೆ. ಆದರೆ ಒಂದು ದಿನ ಇಬ್ಬರು ವ್ಯಕ್ತಿಗಳು ಬಂದು, ನಿನಗೆ ನಟನೆ ಬರುತ್ತದೆಯೇ? ಒಂದು ವೇಳೆ ನಾವು ಹೇಳಿದಾಗೆ ನೀನು ನಟಿಸಿದರೆ ನಿನಗೆ ದಿನಕ್ಕೆ ಎರಡು ಹೊತ್ತು ಊಟವನ್ನು ನೀಡುತ್ತೇವೆ ಎಂದೇಳಿ 20 ರೂಪಾಯಿ ಕೊಟ್ಟು, ಚೀಟಿವೊಂದರಲ್ಲಿ ಫೋನ್‌ ನಂಬರ್‌ ನೀಡಿ ತೆರಳುತ್ತಾರೆ. ಆ ನಂಬರ್ ಗೆ ಕರೆ ಮಾಡಿದಾಗ ನೆಹರೂ ಸ್ಟೇಡಿಯಂಗೆ ಬರುವಂತೆ ಚಿತ್ರತಂಡ ಹೇಳುತ್ತದೆ.

ಚೀಟಿಯಲ್ಲಿ ಹೇಳಿದ ವಿಳಾಸಕ್ಕೆ ತೆರಳಿದಾಗ, ಅಲ್ಲಿ ಮನೋಜ್‌ ರಂತೆ ಏಳು ಮಂದಿ ಭಿಕ್ಷುಕರು ಇದ್ದರು. ಅವರೊಂದಿಗೆ ಅಡಿಷನ್‌ ನೀಡಬೇಕಾಗಿತ್ತು. ಅಲ್ಲಿ ಎಲ್ಲರೂ ಕುರುಡರಂತೆ ಇದ್ದರು, ಮತ್ತೆ ಅವರಿಗೆ ಸಿನಿಮಾದ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ.

ಅಡಿಷನ್‌ ಗಾಗಿ ಮನೋಜ್‌ ಮತ್ತು ಇತರ ಭಿಕ್ಷುಕರು ಫೈವ್‌ ಸ್ಟಾರ್‌ ಹೊಟೇಲ್‌ ನಲ್ಲಿ ಇರಬೇಕಾಗುತ್ತದೆ. ಈ ಅನುಭವ ಮನೋಜ್‌ ಅವರಿಗೆ ಸ್ವರ್ಗದಂತೆ ಇತ್ತು. ಪಾತ್ರಕ್ಕಾಗಿ ಆಯ್ಕೆಯಾದ ಬಳಿಕ ತನ್ನ ಗ್ರಾಮಕ್ಕೆ ಮನೋಜ್‌ ಮರಳುತ್ತಾರೆ. ಈ ವೇಳೆ ಅವರಿಗೆ ಊರವರಿಂದ ಅದ್ಧೂರಿ ರಾಜಾ ಮಾರ್ಯಾದೆ ಸಿಗುತ್ತದೆ. ಐದೇ ಐದು ಸೆಕೆಂಡ್‌ ಗಳ ಪಾತ್ತವನ್ನು ಮನೋಜ್‌ ಸಿನಿಮಾದಲ್ಲಿ ಮಾಡುತ್ತಾರೆ.

ಈ ಸಿನಿಮಾದಲ್ಲಿನ ಅವರ ನಟನೆಯ ಬಳಿಕ ಮನೋಜ್‌ ಅವರ ಜೀವನವೇ ಬದಲಾಗುತ್ತದೆ. ಅವರು ಭಿಕ್ಷಾಟನೆ ಬಿಟ್ಟು, ಉದ್ಯೋಗವನ್ನು ಪಡೆಯುತ್ತಾರೆ. ಈಗ ಮನೋಜ್ ಫೇಸ್ ಬುಕ್ ಖಾತೆ ಹೊಂದಿದ್ದು, ಹಳ್ಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತನಗೂ ಒಬ್ಬಳು ಗೆಳತಿ ಇದ್ದಾಳೆ ಎಂದು‌ ಅವರು ಹೇಳಿಕೊಂಡಿದ್ದಾರೆ. ಈಗ ಅವರು ಅಸ್ಸಾಂನ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.

ಆಮಿರ್ ಖಾನ್ ಪಾತ್ರದ ಪಿಕೆ ಸೇತುವೆಯ ಮೂಲಕ ನಡೆದುಕೊಂಡು ಹೋಗುವಾಗ, ಅವನು ಕೈಯಲ್ಲಿ ಹಣದ ಬಟ್ಟಲಿನೊಂದಿಗೆ ನಿಂತಿದ್ದ ಭಿಕ್ಷುಕನನ್ನು ನೋಡುತ್ತಾನೆ ಮತ್ತು ಅದರಿಂದ ಕೆಲವು ನೋಟುಗಳನ್ನು ತೆಗೆದುಕೊಳ್ಳುತ್ತಾನೆ. ಈ ಭಿಕ್ಷುಕ ಕುರುಡನಾಗಿರುತ್ತಾನೆ. ಈ ಪಾತ್ರವನ್ನೇ ಮನೋಜ್‌ ಮಾಡಿದ್ದರು.

WhatsApp Group Join Now
Telegram Group Join Now
Back to top button