ಭಾರತದ ಟಾಪ್ 10 ಶ್ರೀಮಂತ ನಟಿಯರ ಪಟ್ಟಿ ಇಲ್ಲಿದೆ ಮುಂದೆ ಓದಿ….
ಭಾರತೀಯ ಚಲನಚಿತ್ರೋದ್ಯಮವು ಅಸಾಧಾರಣವಾದ ಪ್ರತಿಭಾವಂತ ನಟ, ನಟಿಯರ ನೆಲೆಯಾಗಿದೆ. ದೇಶದೊಳಗೆ ಮಾತ್ರವಲ್ಲದೆ ಜಾಗತಿಕ ವೇದಿಕೆಯಲ್ಲೂ ಭಾರತದ ಚಲನಚಿತ್ರ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಈ ಜನಪ್ರಿಯತೆ ಅಧಿಕವಾಗುತ್ತಾ ಸಾಗಿದ್ದಂತೆ ನಟ, ನಟಿಯರ ಸಂಭಾವನೆಯೂ ಹೆಚ್ಚಾಗುತ್ತಾ ಸಾಗುತ್ತದೆ.
ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆಯುವ ಜೊತೆಗೆ, ಈ ಕಲಾವಿದರು ಗಮನಾರ್ಹವಾದ ಸಂಪತ್ತನ್ನು ಸಂಗ್ರಹಿಸಿದ್ದಾರೆ. ಉದ್ಯಮದಲ್ಲಿ ಮಹಿಳಾ ತಾರೆಗಳು ಸಮಾನವಾಗಿ ಪ್ರಭಾವಶಾಲಿಯಾಗಿದ್ದಾರೆ. ಐಷಾರಾಮಿ ಜೀವನಶೈಲಿಯನ್ನು ನಟಿಯರು ಹೊಂದಿದ್ದಾರೆ.
ಭಾರತದ ಟಾಪ್ 10 ಶ್ರೀಮಂತ ನಟಿಯರ ಪಟ್ಟಿ ಇಲ್ಲಿದೆ
1. ಐಶ್ವರ್ಯ ರೈ ಬಚ್ಚನ್ ಐಶ್ವರ್ಯ ರೈ ಬಚ್ಚನ್ ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಭಾರತೀಯ ನಟಿ. ವಿಶ್ವ ಸುಂದರಿ 1994 ರ ಸ್ಪರ್ಧೆಯ ವಿಜೇತೆ. ಭಾರತದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರಭಾವಿ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ನಿವ್ವಳ ಆದಾಯ – 800 ಕೋಟಿ ರೂಪಾಯಿಪ್ರತಿ ಚಿತ್ರಕ್ಕೆ ಸಂಭಾವನೆ – 10 ಕೋಟಿ ರೂಪಾಯಿಎಂಡೋರ್ಸ್‌ಮೆಂಟ್ ಶುಲ್ಕ – 6 ರಿಂದ 7 ಕೋಟಿ ರೂಪಾಯಿ ಟಿವಿ ಆಂಕರ್‌ನಿಂದ ಖಾಸಗಿ ಜೆಟ್ ವಿಮಾನ ಖರೀದಿಸುವರೆಗೆ ನಟಿ ನಯನತಾರಾ ಆಸ್ತಿ ಎಷ್ಟು ಗೊತ್ತಾ
2. ಪ್ರಿಯಾಂಕಾ ಚೋಪ್ರಾ ಜೋನಾಸ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಭಾರತೀಯ ನಟಿ ಮತ್ತು ನಿರ್ಮಾಪಕಿ. ವಿಶ್ವ ಸುಂದರಿ 2000 ಸ್ಪರ್ಧೆಯ ವಿಜೇತೆಯಾಗಿದ್ದಾರೆ. ಚೋಪ್ರಾ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. 2016 ರಲ್ಲಿ, ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ನಿವ್ವಳ ಆದಾಯ – 620 ಕೋಟಿ ರೂಪಾಯಿಪ್ರತಿ ಚಿತ್ರಕ್ಕೆ ಸಂಭಾವನೆ – 15 ರಿಂದ 40 ಕೋಟಿ ರೂಪಾಯಿಎಂಡೋರ್ಸ್‌ಮೆಂಟ್ ಶುಲ್ಕ – 5 ಕೋಟಿ ರೂಪಾಯಿ
3. ದೀಪಿಕಾ ಪಡುಕೋಣೆ ದೀಪಿಕಾ ಪಡುಕೋಣೆ ಹಿಂದಿ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುವ ಭಾರತೀಯ ನಟಿ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಷ್ಟ್ರದ ಅತ್ಯಂತ ಜನಪ್ರಿಯ ವ್ಯಕ್ತಿಗಳ ಪಟ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೈಮ್ಸ್‌ನ 2018 ರಲ್ಲಿ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ನಿವ್ವಳ ಆದಾಯ – 500 ಕೋಟಿ ರೂಪಾಯಿಪ್ರತಿ ಚಿತ್ರಕ್ಕೆ ಸಂಭಾವನೆ – 15 ರಿಂದ 30 ಕೋಟಿ ರೂಪಾಯಿಎಂಡೋರ್ಸ್‌ಮೆಂಟ್ ಶುಲ್ಕ – 7 ರಿಂದ 10 ಕೋಟಿ ರೂಪಾಯಿ ಶೀಘ್ರದಲ್ಲೇ ವಿವಾಹವಾಗಲಿರುವ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಅವರ ನಿವ್ವಳ ಆಸ್ತಿ ಮೌಲ್ಯ ತಿಳಿಯಿರಿ
4. ಕರೀನಾ ಕಪೂರ್ ಖಾನ್ ಕರೀನಾ ಕಪೂರ್ ಖಾನ್ ಹಿಂದಿ ಚಲನಚಿತ್ರ ನಟಿಯಾಗಿದ್ದು, ನಟರಾದ ರಣಧೀರ್ ಕಪೂರ್ ಮತ್ತು ಬಬಿತಾರ ಪುತ್ರಿಯಾಗಿದ್ದಾರೆ. ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.ನಿವ್ವಳ ಆದಾಯ – 440 ಕೋಟಿ ರೂಪಾಯಿಪ್ರತಿ ಚಿತ್ರಕ್ಕೆ ಸಂಭಾವನೆ – 8 ರಿಂದ 18 ಕೋಟಿ ರೂಪಾಯಿಎಂಡೋರ್ಸ್‌ಮೆಂಟ್ ಶುಲ್ಕ – 3 ರಿಂದ 4 ಕೋಟಿ ರೂಪಾಯಿ
5. ಅನುಷ್ಕಾ ಶರ್ಮಾ ಅನುಷ್ಕಾ ಶರ್ಮಾ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2018 ರ ಹೊತ್ತಿಗೆ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. 2012 ರಿಂದ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ನಲ್ಲಿ ಕಾಣಿಸಿಕೊಂಡಿದ್ದಾರೆ. ನಿವ್ವಳ ಆದಾಯ – 255 ಕೋಟಿ ರೂಪಾಯಿಪ್ರತಿ ಚಿತ್ರಕ್ಕೆ ಸಂಭಾವನೆ – 12 ರಿಂದ 15 ಕೋಟಿ ರೂಪಾಯಿಎಂಡೋರ್ಸ್‌ಮೆಂಟ್ ಶುಲ್ಕ – 8 ರಿಂದ 10 ಕೋಟಿ ರೂಪಾಯಿ
6. ಮಾಧುರಿ ದೀಕ್ಷಿತ್ ಮಾಧುರಿ ದೀಕ್ಷಿತ್ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಭಾರತೀಯ ಚಿತ್ರರಂಗದ ಪ್ರಮುಖ ನಟಿಯಾಗಿದ್ದು, 70 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಸೌಂದರ್ಯ, ನೃತ್ಯ ಕೌಶಲ್ಯ ಮತ್ತು ನಟನೆಗೆ ಹೆಸರುವಾಸಿಯಾಗಿದ್ದಾರೆ. ನಿವ್ವಳ ಆದಾಯ – 250 ಕೋಟಿ ರೂಪಾಯಿಪ್ರತಿ ಚಿತ್ರಕ್ಕೆ ಸಂಭಾವನೆ – 4 ರಿಂದ 5 ಕೋಟಿ ರೂಪಾಯಿಎಂಡೋರ್ಸ್‌ಮೆಂಟ್ ಶುಲ್ಕ – 8 ಕೋಟಿ ರೂಪಾಯಿ
7. ಕತ್ರಿನಾ ಕೈಫ್ ಕತ್ರಿನಾ ಕೈಫ್ ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಬ್ರಿಟಿಷ್ ನಟಿ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಮೂರು ಫಿಲ್ಮ್‌ಫೇರ್ ನಾಮಿನೇಷನ್ ಜೊತೆಗೆ ನಾಲ್ಕು ಸ್ಕ್ರೀನ್ ಪ್ರಶಸ್ತಿಗಳು ಮತ್ತು ನಾಲ್ಕು ಝೀ ಸಿನಿ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಐಟಂ ಸಾಂಗ್‌ಗಳಿಗೆ, ನೃತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ನಿವ್ವಳ ಆದಾಯ – 235 ಕೋಟಿ ರೂಪಾಯಿಪ್ರತಿ ಚಿತ್ರಕ್ಕೆ ಸಂಭಾವನೆ – 10 ರಿಂದ 12 ಕೋಟಿ ರೂಪಾಯಿಎಂಡೋರ್ಸ್‌ಮೆಂಟ್ ಶುಲ್ಕ – 6 ರಿಂದ 7 ಕೋಟಿ ರೂಪಾಯಿ
8. ಆಲಿಯಾ ಭಟ್ ಆಲಿಯಾ ಭಟ್ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ಮೂಲದ ಬ್ರಿಟಿಷ್ ನಟಿ. ಮಹಿಳಾ ಪ್ರಧಾನ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಈ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಐದು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. 2014 ರಿಂದ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಿವ್ವಳ ಆದಾಯ – 229 ಕೋಟಿ ರೂಪಾಯಿಪ್ರತಿ ಚಿತ್ರಕ್ಕೆ ಸಂಭಾವನೆ – 10 ರಿಂದ 15 ಕೋಟಿ ರೂಪಾಯಿಎಂಡೋರ್ಸ್‌ಮೆಂಟ್ ಶುಲ್ಕ – 2 ಕೋಟಿ ರೂಪಾಯಿ
9. ಶ್ರದ್ಧಾ ಕಪೂರ್ ಶ್ರದ್ಧಾ ಕಪೂರ್ ಒಬ್ಬ ಭಾರತೀಯ ನಟಿಯಾಗಿದ್ದು, ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ಕಪೂರ್ 2014 ರಿಂದ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಶಕ್ತಿ ಕಪೂರ್ ಮಗಳಾದ ಶ್ರದ್ಧಾ ತೀನ್ ಪತ್ತಿ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಿವ್ವಳ ಆದಾಯ – 123 ಕೋಟಿ ರೂಪಾಯಿಪ್ರತಿ ಚಿತ್ರಕ್ಕೆ ಸಂಭಾವನೆ – 7 ರಿಂದ 15 ಕೋಟಿ ರೂಪಾಯಿಎಂಡೋರ್ಸ್‌ಮೆಂಟ್ ಶುಲ್ಕ – 1.6 ಕೋಟಿ ರೂಪಾಯಿ
10. ನಯನತಾರಾ ಟಾಪ್ 10 ಶ್ರೀಮಂತ ಭಾರತೀಯ ನಟಿಯರಲ್ಲಿ ಕಾಣಿಸಿಕೊಂಡಿರುವ ಏಕೈಕ ದಕ್ಷಿಣ ಭಾರತದ ನಟಿ ನಯನತಾರಾ ಆಗಿದ್ದಾರೆ. ನಯನತಾರಾ ಒಬ್ಬ ಭಾರತೀಯ ನಟಿ, ಇವರು ಪ್ರಧಾನವಾಗಿ ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. 2018 ರ ಫೋರ್ಬ್ಸ್ ಇಂಡಿಯಾ “ಸೆಲೆಬ್ರಿಟಿ 100” ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ದಕ್ಷಿಣ ಭಾರತೀಯ ನಟಿಯಾಗಿದ್ದಾರೆ. ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತೀಯ ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್ ಎಂದು ಜನಪ್ರಿಯವಾಗಿದ್ದಾರೆ. ನಿವ್ವಳ ಆದಾಯ – 100 ಕೋಟಿ ರೂಪಾಯಿಪ್ರತಿ ಚಿತ್ರಕ್ಕೆ ಸಂಭಾವನೆ – 10 ರಿಂದ 11 ಕೋಟಿ ರೂಪಾಯಿಎಂಡೋರ್ಸ್‌ಮೆಂಟ್ ಶುಲ್ಕ – 5 ಕೋಟಿ ರೂಪಾಯಿ
Follow Us