ಸಲಾರ್ ಮುಂದೆ ಡಲ್ ಆಯ್ತಾ ‘ಡಂಕಿ’? ಶಾರುಖ್ ಸಿನಿಮಾ ಮೊದಲ ದಿನದ ಕಲೆಕ್ಷನ್ ಎಷ್ಟು?

WhatsApp Group Join Now
Telegram Group Join Now

ಡಂಕಿ ನೋಡಿದ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಕೆಲವರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಮೊದಲ ದಿನ 100 ಕೋಟಿ ಗಳಿಸುತ್ತೆ ಎನ್ನುವ ನಿರೀಕ್ಷೆ ಇತ್ತು. ಶಾರುಖ್ ಸಿನಿಮಾ ಮೊದಲ ದಿನ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

 ಪಠಾಣ್, ಜವಾನ್ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿತ್ತು.

ಡಂಕಿ ಸಿನಿಮಾ ಬಗ್ಗೆಯೂ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಶಾರುಖ್ ಕ್ಲಾಸ್ ಮ್ಯೂವಿ ಮೊದಲ ದಿನ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿಲ್ಲ.


ಇತ್ತ ಪ್ರಭಾಸ್ ಸಲಾರ್ ಸಿನಿಮಾ ಅಬ್ಬರ ಜೋರಾಗಿದೆ. ಮೊದಲ ದಿನ ಶಾರುಖ್ ಸಿನಿಮಾ ಕಲೆಕ್ಷನ್ ಡಲ್ ಆಗಿದೆ. 30 ಕೋಟಿ ಕಲೆಕ್ಷನ್​ ಮಾಡಿದ್ದು ತೀರ ಕಡಿಮೆ ಅನಿಸುತ್ತಿದೆ ಎನ್ನಲಾಗ್ತಿದೆ. ಬಿಗ್ ಸ್ಟಾರ್ ಶಾರುಖ್​ ಹವಾ ಕೊಂಚ ಇಳಿದಿದೆ.


ಸಲಾರ್ ಸಿನಿಮಾ ಅಬ್ಬರ ಹೆಚ್ಚಾಗಿದ್ದು, ಪ್ರಭಾಸ್ ಸಿನಿಮಾ ಮುಂದೆ ಶಾರುಖ್​ ಡಂಕಿ ಸಿನಿಮಾ ಡಲ್​ ಆಗಿರುವಂತೆ ಕಾಣ್ತಿದೆ. ಕ್ರಿಸ್ಮಸ್​ ರಜೆ ಹಿನ್ನೆಲೆ ಶಾರುಖ್​ ಡಂಕಿ ಕಲೆಕ್ಷನ್ ಹೆಚ್ಚುವ ಸಾಧ್ಯತೆ ಕೂಡ ಇದೆ.


‘ಡಂಕಿ’ ಸಿನಿಮಾದಲ್ಲಿ ಬೇರೆ ದೇಶಕ್ಕೆ ಅಕ್ರಮ ಪ್ರವೇಶದ ಕುರಿತ ಸಿನಿಮಾ ಆಗಿದೆ. ಸಿನಿಮಾದ ಎಲ್ಲಾ ಪಾತ್ರಗಳು ಬೇರೆ ದೇಶಕ್ಕೆ ಹೋಗಲು ಪ್ರಯತ್ನದಲ್ಲಿ ಏನೆಲ್ಲಾ ಮಾಡುತ್ತಾರೆ ಎಂಬುದರ ಸುತ್ತ ಇಡೀ ಕಥೆ ಸುತ್ತುತ್ತದೆ.


ಈ ಚಿತ್ರದ ಕಥೆಯನ್ನು ಆಧರಿಸಿಯೇ ಸಿನಿಮಾ ಡಂಕಿ ಎಂದು ಹೆಸರಿಡಲಾಗಿದೆ. ಯಾವುದೇ ದೇಶಕ್ಕೆ ಅಕ್ರಮವಾಗಿ ಅಂದರೆ ವೀಸಾ ಅಥವಾ ಪಾಸ್ಪೋರ್ಟ್ ಇಲ್ಲದೆ ಪ್ರವೇಶಿಸುವುದನ್ನು ‘ಡಂಕಿ’ ಎಂದು ಕರೆಯಲಾಗುತ್ತದೆ.


ದೇಶದೊಳಗೆ ಪ್ರವೇಶಿಸಲು ಬಳಸುವ ಅಕ್ರಮ ಮಾರ್ಗವನ್ನು ಡಂಕಿ ಮಾರ್ಗ ಎಂದು ಕರೆಯಲಾಗುತ್ತದೆ. ಅನೇಕ ದೇಶಗಳು ಈ ಡಂಕಿ ಮಾರ್ಗಗಳನ್ನು ಹೊಂದಿದ್ದು, ಜನರು ಅಕ್ರಮವಾಗಿ ಪ್ರಯಾಣಿಸುತ್ತಾರೆ. ಅಕ್ರಮವಾಗಿ ಬೇರೆ ದೇಶಗಳಿಗೆ ಜನರನ್ನು ಸಾಗಿಸುವ ‘ಡಂಕಿ’ ವ್ಯಾಪಾರ ಭಾರತದ ಹಲವು ರಾಜ್ಯಗಳಲ್ಲಿ ಜೋರಾಗಿಯೇ ನಡೆಯುತ್ತಿದೆ. ಅದಕ್ಕಾಗಿಯೇ ಶಾರುಖ್ ಖಾನ್ ಅವರ ಚಿತ್ರಕ್ಕೆ ಡಂಕಿ ಎಂದು ಹೆಸರಿಡಲಾಗಿದೆ.

WhatsApp Group Join Now
Telegram Group Join Now
Back to top button