ಜೆಡಿಎಸ್ ಮುಖಂಡ ಫೈಜುಲ್ಲಾ ಮಾಡಿವಾಲೆ ನಿಧನ

WhatsApp Group Join Now
Telegram Group Join Now

ಬೆಳಗಾವಿ; ಜೆಡಿಎಸ್ ಮುಖಂಡ ಫೈಜುಲ್ಲಾ ಮಾಡಿವಾಲೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬಹಳ ವರ್ಷದಿಂದ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಮಾಡಿವಾಲೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಆಪ್ತರಾಗಿದ್ದರು. ಬುಧವಾರ ಸಂಜೆ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಕೊನೆಯುಸಿರೆಳೆದಿದ್ದಾರೆ.

ಮುಸ್ಲಿಂ ಸಮಾಜದ ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸ್ನೇಹಪರ ಸಂಬಂಧ ಹೊಂದಿದ್ದರು.

WhatsApp Group Join Now
Telegram Group Join Now
Back to top button