ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಕಾರ್ಯಾಚರಣೆ ಶುರು

ಬೆಳಗಾವಿಯಲ್ಲಿ ಅನ್ಯಭಾಷಿಕ ಫಲಕ ತೆರವುಗೊಳಿಸಿದ ಪಾಲಿಕೆ ಅಧಿಕಾರಿಗಳು

WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಕಾರ್ಯಾಚರಣೆ ಶುರುವಾಗಿದ್ದು, ಇಂದು ಬೆಳ್ಳಂ ಬೆಳಗ್ಗೆ ಪಾಲಿಕೆ ಅಧಿಕಾರಿಗಳ ತಂಡ ನಗರದ ವಿವಿಧೆಡೆ ಸುತ್ತಾಡಿ, ಅನ್ಯಭಾಷಿಕ ಫಲಕಗಳನ್ನು ತೆರವುಗೊಳಿದರು.

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಪಿ‌ ಎನ್ ಲೋಕೇಶ್ ಅವರ ಕನ್ನಡದ ಇಚ್ಛಾಶಕ್ತಿಯ ಪರಿಣಾಮ ಬೆಳಗಾವಿಯಲ್ಲಿ ಕನ್ನಡದ ಅನುಷ್ಠಾನಕ್ಕೆ ಚಾಲನೆ ಸಿಕ್ಕಿದೆ. ಕಳೆದ ದಿನಗಳಿಂದ ಹಿಂದೆ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಬೆಳಗಾವಿಯಲ್ಲಿ ಕರವೇ ರಾಜ್ಯಕಾರ್ಯಕಾರಿಣಿ ಸಭೆ ನಡೆಸಿ,ಕನ್ನಡ ನಾಮಫಲಕ ಕಡ್ಡಾಯದ ಕುರಿತು ಗಡುವು ನೀಡಿ ಬೆಂಗಳೂರಿಗೆ ತೆರಳುತ್ತಿದ್ದಂತೆಯೇ ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಕಾರ್ಯಾಚರಣೆ ಶುರುವಾಗಿದೆ. ಪಾಲಿಕೆ ಆಯುಕ್ತ ಪಿ.ಎನ್ ಲೋಕೇಶ್ ಅವರ ಸೂಚನೆ ಮೇರೆಗೆ ಪಾಲಿಕೆ ಆರೋಗ್ಯಾಧಿಕಾರಿ ಸಂಜೀವ ನಾಂದ್ರೆ ನೇತ್ರತ್ವದ ತಂಡ ಇಂದು ಅನ್ಯಭಾಷಿಕ ಫಲಕಗಳನ್ನು ಗುರುತಿಸಿ ಅಂಗಡಿ ಮಾಲೀಕರಿಗೆ ಕನ್ನಡ ನಾಮಫಲಕ ಅಳವಡಿಸುವ ಎಚ್ಚರಿಕೆ ನೀಡಿದೆ. ಕನ್ನಡ ನಾಮಫಲಕ ಅಳವಡಿಸದಿದ್ದರೆ ಅಂಗಡಿಯ ಲೈಸನ್ಸ್ ರದ್ದು ಗೊಳಿಸುವ ಎಚ್ಚರಿಕೆ ನೀಡಲಾಗಿದೆ.

ರಾಜ್ಯ ಸರ್ಕಾರದ ಆದೇಶದಂತೆ ಅಂಗಡಿ-ಮುಂಗಟ್ಟು, ಮಾಲ್‌ಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ 60% ಕನ್ನಡ ಭಾಷೆ ಬಳಸುವಂತೆ ನೀಡಲಾಗಿದ್ದ ಗಡುವು ಇಂದಿಗೆ ಕೊನೆಗೊಳ್ಳಲಿದೆ. ರಾಜ್ಯದ ವಿವಿಧೆಡೆ ಸಂಪೂರ್ಣವಾಗಿ ನಿಯಮ ಪಾಲನೆಯಾಗದ ಕಾರಣ ಕಡ್ಡಾಯ ಕನ್ನಡ ನಾಮಫಲಕ ಅಳವಡಿಸಲು ಅಂಗಡಿ ಮಾಲೀಕರಿಗೆ ಸರ್ಕಾರ ಕಾಲಾವಕಾಶ ನೀಡಿತ್ತು. ಇನ್ಮುಂದೆ ನಿಯಮ ಪಾಲಿಸದಿದ್ದರೆ ವ್ಯಾಪಾರಸ್ಥರ ಲೈಸನ್ಸ್ ರದ್ದುಪಡಿಸುವ ಕ್ರಮ ಅನುಸರಿಸಬೇಕು ಎಂದು ಕನ್ನಡಪರ ಹೋರಾಟಗಾರರು ಈಗಾಗಲೇ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now
Back to top button