ಹಾಲಿಗೆ ಕಾಫಿ ಪುಡಿ, ಮ್ಯಾಗಿ. ಇದೆಂಥಾ ಗೋಳು! ಹೇಗಪ್ಪಾ ತಿನ್ನೋದು? ಎಂದ ಗ್ರಾಹಕರು
ಹೊಸದಿಲ್ಲಿ: ನಮ್ಮ ಜನರು ಬೀದಿಬದಿ ವ್ಯಾಪಾರಿಗಳು ಮಾಡುವ ವಿಧವಿಧವಾದ ತಿಂಡಿ-ತಿನಿಸುಗಳನ್ನು ಬಲು ಇಷ್ಟಪಟ್ಟು ತಿನ್ನುತ್ತಾರೆ. ಹೆಚ್ಚಾಗಿ ಕಾಫಿ-ಟೀ, ಲಘು ಉಪಹಾರ, ಸ್ನ್ಯಾಕ್ಸ್, ಫಾಸ್ಟ್ಫುಡ್ ಹೀಗೆ ಬಗೆಬಗೆಯ ಆಹಾರಗಳನ್ನು ಸೇವಿಸುವ ಫುಡ್ ಪ್ರಿಯರು, ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೋವೊಂದನ್ನು ನೋಡಿ ಕಂಗಾಲಾಗಿದ್ದಾರೆ.
ಸಾಮಾನ್ಯವಾಗಿ ಜನರು ಬೀದಿಬದಿ ವ್ಯಾಪಾರಿಗಳು ಮಾಡುವ ಅಡುಗೆಯನ್ನು ಇಷ್ಟಪಡುವುದರ ಜತೆಗೆ ಅವರ ಹೊಸ ಟ್ರೆಂಡ್ಗಳನ್ನು ಮೆಚ್ಚಿ, ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ನಾನು ತಿಂದ ಈ ಆಹಾರ ತುಂಬ ಚೆನ್ನಾಗಿದೆ, ನೀವು ಕೂಡ ಒಮ್ಮೆ ಬಂದು ರುಚಿ ನೋಡಿ ಎಂದು ಹೋಟೆಲ್ ಹೆಸರು, ಸ್ಥಳವನ್ನು ತಿಳಿಸುತ್ತಾರೆ. ಆದರೆ, ಇಲ್ಲೊಬ್ಬ ವ್ಯಾಪಾರಿ ವಿಚಿತ್ರ ಪ್ರಯೋಗವೊಂದನ್ನುwer52 ಮಾಡಿ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಭಾರೀ ಟೀಕೆಗಳನ್ನು ಸ್ವೀಕರಿಸಿದ್ದಾರೆ.
ಕುದಿಯುತ್ತಿರುವ ಹಾಲಿಗೆ ಮ್ಯಾಗಿ ಹಾಕಿದ ಬೀದಿಬದಿ ವ್ಯಾಪಾರಿ, ಅದಕ್ಕೆ ಕಾಫಿ ಪುಡಿ ಬೆರೆಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು, ಇದು ‘ಅಪರಾಧ’ ಎಂದು ದೂರಿದ್ದಾರೆ. ಕಾಫಿ ಮತ್ತು ಹಾಲಿನೊಂದಿಗೆ ಮ್ಯಾಗಿ ನೂಡಲ್ಸ್ ಮಿಶ್ರಿಸಿದ ದೃಶ್ಯವನ್ನು ‘hnvstreetfood’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಫೆಬ್ರವರಿ 9ರಂದು ಅಪ್‌ಲೋಡ್ ಮಾಡಲಾದ ಈ ವಿಡಿಯೋದಲ್ಲಿ ಬೀದಿಬದಿ ವ್ಯಾಪಾರಿ ವಿಚಿತ್ರವಾದ ಖಾದ್ಯವನ್ನು ತಯಾರಿಸುತ್ತಿರುವುದನ್ನು ಕಾಣಬಹುದು.
ಬಾಣಲೆಯಲ್ಲಿ ಹಾಲು ಕುದಿಸಿ, ಅದಕ್ಕೆ ಮ್ಯಾಗಿ ನೂಡಲ್ಸ್ ಜತೆಗೆ ತರಕಾರಿಗಳು, ಮ್ಯಾಗಿ ಟೇಸ್ಟ್‌ಮೇಕರ್, ಕಾಫಿ ಪುಡಿ ಮತ್ತು ಅರಿಶಿನ ಪುಡಿ ಸೇರಿದಂತೆ ಇತರೆ ಪದಾರ್ಥಗಳನ್ನು ಬೆರೆಸಿದ್ದಾರೆ. ಈ ವಿಡಿಯೋ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ ಮತ್ತು 3,900ಕ್ಕೂ ಹೆಚ್ಚು ಕಮೆಂಟ್‌ಗಳನ್ನು ಪಡೆದುಕೊಂಡಿದೆ.