ವಾಹನ ಸವಾರರ ಗಮನಕ್ಕೆ : ಮೇ.31 ರೊಳಗೆ ಈ ಕೆಲಸ ಮಾಡದಿದ್ರೆ 500-1000 ದಂಡ ಫಿಕ್ಸ್..!
ಬೆಂಗಳೂರು : ವಾಹನಗಳಿಗೆ ‘ HSRP’ ನಂಬರ್ ಪ್ಲೇಟ್ ಅಳವಡಿಸಲು ಅವಧಿ ವಿಸ್ತರಣೆ ಮಾಡಲಾಗಿದ್ದು ಮೇ.31 ಕೊನೆಯ ದಿನಾಂಕವಾಗಿದೆ. ಮೇ.31 ರೊಳಗೆ HSRP’ ನಂಬರ್ ಪ್ಲೇಟ್ ಅಳವಡಿಸದಿದ್ರೆ ದಂಡ ಬೀಳುವುದು ಫಿಕ್ಸ್.
ಹೌದು, ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ವಾಹನಗಳ ಸುರಕ್ಷತೆಗಾಗಿ ಈ ಪ್ಲೇಟ್ ಅಳವಡಿಕೆಯನ್ನ ಕಡ್ಡಾಯ ಮಾಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್‌ಎಸ್‌ಆರ್ಪಿ) ಅಳವಡಿಸುವುದು ಕಡ್ಡಾಯವಾಗಿದೆ.
ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿ ಮಾಡಿಸಿದ್ದ ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (HSRP) ಅವಳಡಿಕೆ ಕಡ್ಡಾಯ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಫೆಬ್ರವರಿ 17ರೊಳಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸುವಂತೆ ಡೆಡ್ ಲೈನ್ ನೀಡಿತ್ತು. ನಂತರ ಮೇ.31 ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ.
HSRP ಅಳವಡಿಕೆಗೆ ಈಗಾಗಲೇ ಎರಡು ಬಾರಿ ಗುಡುವು ವಿಸ್ತರಿಸಲಾಗಿದೆ. ಈ ಹಿಂದೆ 2023ರ ನವೆಂಬರ್ 13ರೊಳಗೆ HSRP ಅಳವಡಿಕೆಗೆ ಗಡುವು ನೀಡಲಾಗಿತ್ತು. ಆಗ ಕೇವಲ 30,000 ವಾಹನಗಳ ಮಾಲೀಕರು ಮಾತ್ರ ನೋಂದಣಿ ಮಾಡಿಕೊಂಡಿದ್ದರಿಂದ ಫೆಬ್ರವರಿ 17ರ ವರೆಗೆ ಗಡುವನ್ನು ವಿಸ್ತರಿಸಲಾಯಿತು. ಆ ವೇಳೆಗೆ 18 ಲಕ್ಷ ವಾಹನಗಳು ಮಾತ್ರ HSRP ಅಳವಡಿಕೆ ಮಾಡಿಕೊಂಡಿದ್ದವು. ಮೇ 31ರವರೆಗೆ HSRP ಅಳವಡಿಕೆ ಗಡುವು ವಿಸ್ತರಿಸಲಾಗಿದೆ. ನಿಗದಿತ ಗಡುವಿನೊಳಗೆ HSRP ಅಳವಡಿಸದಿದ್ದರೆ ಮತ್ತೊಮ್ಮೆ ಗಡುವು ವಿಸ್ತರಿಸಬಹುದು. ಗಡುವು ವಿಸ್ತರಿಸದಿದ್ದರೆ HSRP ಇಲ್ಲದ ವಾಹನಗಳಿಗೆ 500 ರಿಂದ 1000 ರೂ. ದಂಡ ವಿಧಿಸಲಾಗುವುದು ಎನ್ನಲಾಗಿದೆ.
ಹೆಚ್‌ಎಸ್‌ಆರ್ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡಲು ಆನ್ಲೈನ್ ಮೂಲಕ ನೋಂದಣಿ ಮಾಡಿಸಬೇಕಾಗಿದ್ದು, ಈ ಸಮಯದಲ್ಲಿ ತಾಂತ್ರಿಕ ತೊಂದರೆಗಳು ಉಂಟಾದರೆ ಅದನ್ನು ಬಗೆಹರಿಸಲು ಸಹಾಯವಾಣಿಯನ್ನು ಸಾರಿಗೆ ಇಲಾಖೆ ಆರಂಭಿಸಿದೆ. ವಾಹನ ಮಾಲೀಕರು ಬೆಳಗ್ಗೆ 10 ರಿಂದ ಸಂಜೆ 5.30ರ ತನಕ ಸಹಾಯವಾಣಿ ಸಂಖ್ಯೆ 9449863429/26 ಸಂಖ್ಯೆಗೆ ಕರೆ ಮಾಡಬಹುದು. ವೆಬ್ ಸೈಟ್ https://transport.karnataka.gov.in?utm_source=DH-MoreFromPub&utm_medium=DH-app&utm_campaign=DH ಅಥವ www.siam.in ಗೆ ಭೇಟಿ ನೀಡಿ ವಾಹನಗಳಿಗೆ ಹೆಚ್‌ಎಸ್‌ಆರ್ಪಿ ನಂಬರ್ ಪ್ಲೇಟ್ ನೋಂದಣಿ ಮಾಡಿಕೊಳ್ಳಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.