ಖಾನಾಪುರ ತಾಲೂಕಿನ ಗಣೆಬೈಲ್ ಟೋಲ್ ನಾಕಾ ಕಾರ್ಮಿಕರ ಬೆನ್ನಿಗೆ ನಿಂತ ಸಮಾಜ ಸೇವಕ ಜ್ಯೋತಿಬಾ ಭೆಂಡಿಗೆರಿ

WhatsApp Group Join Now
Telegram Group Join Now

ಗಣೆಬೈಲ್ ಟೋಲ್ ನಾಕಾ ಕಾರ್ಮಿಕರ ಬೆನ್ನಿಗೆ ನಿಂತ ಸಮಾಜ ಸೇವಕ ಜ್ಯೋತಿಬಾ ಭೆಂಡಿಗೆರಿ

ಖಾನಾಪುರ ತಾಲೂಕಿನ ಗಣೇಬೈಲ್ ಬಳ್ಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ NH 748 ಗೆ ಟೋಲಗೆ ಹಣ್ಣ ಸಂಗ್ರಹಿಸಲು ರಾಜಸ್ಥಾನ ಮೂಲದ ರಿಷಿರಾಜ್ ಸಿಂಘ ರಾಥೋಡ *RSR* ಸಂಸ್ಥೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಟೆಂಡರ್ ನೀಡಿ ಟೋಲ್ ಹಣ್ಣ ಸಂಗ್ರಹಿಸುವ ಜವಾಬ್ದಾರಿ ನೀಡಿದೆ ಆದರೆ ಟೋಲ್ ಸಂಗ್ರಹಿಸುವ ಕಾರ್ಮಿಕರ ಗೊಳ್ಳೂ ಚಿಂತಾಜನಕ ವಾಗಿದೆ.

ಯಾವದೇ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಕಾಯ್ದೆ ಪ್ರಕಾರ ವೇತನ ಹಾಗೂ ಇತರೆ ಸೌಲಭ್ಯಗಳು ದೊರೆಯಬೇಕು. ಆದರೆ ಇಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ
ರಾಜ್ಯಸ್ಥಾನ್ ಮೂಲದ ರಿಷಿರಾಜ್ ಸಿಂಘ ರಾಥೋಡ *RSR* ಸಂಸ್ಥೆ ನಿಯಮವನ್ನು ಗಾಳಿಗೆ ತೂರಿ ವಂಚಿಸುತ್ತಿದೆ ಇದನ್ನು ಪ್ರಶ್ನಿಸಿ ಸಮಾಜ ಸೇವಕ ಜ್ಯೋತಿಬಾ ಬೆಂಡಿಗೇರಿ ಇವರು ಸಹಾಯಕ ಕಾರ್ಮಿಕ ಆಯುಕ್ತರು ಬೆಳಗಾವಿ ವಿಭಾಗ ಬೆಳಗಾವಿ ಇವರ ಮೊರೆ ಹೋಗಿದ್ದಾರೆ ಕಾನೂನು ಕ್ರಮ ಜರುಗಿಸುವರಿಗು ಹೋರಾಟ ನಡೆಸುವುದಾಗಿ ಎಚ್ಚರಿಸಿದರು .

ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳಿಗೂ ಕೂಡ ಮನವಿ ಸಲಿಸಿದಾರೆ ಅಧಿಕಾರಿಗಳು ಕಾರ್ಮಿಕ ಹಿತ ಕಾಪಾಡಲು ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳಬೇಕಾಗಿದೆ.

ವರದಿ ಜ್ಯೋತಿಬಾ ಬೆಂಡಿಗೇರಿ

WhatsApp Group Join Now
Telegram Group Join Now
Back to top button