ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರಾದೇಶಿಕ ಆಯುಕ್ತರ ಕಛೇರಿಯ ಮುಂದೆ ಸ್ಥಾಪಿಸುವವಂತೆ ಒತ್ತಾಯ

WhatsApp Group Join Now
Telegram Group Join Now

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರಾದೇಶಿಕ ಆಯುಕ್ತರ ಕಛೇರಿಯ ಮುಂದೆ ಸ್ಥಾಪಿಸುವವಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲಿಸಿದರು.

ಹಲವು ದಶಕಗಳ ಹಿಂದೆ ಜಿಲ್ಲಾಧಿಕಾರಿಗಳ ಕಛೇರಿಯ ಹಿಂದಿನ ಬದಿಯಲ್ಲಿ ಸರಕಾರದಿಂದ ಸ್ಥಾಪಿತಗೊಂಡ ಏಕೈಕ ಸಂಗೊಳ್ಳಿ ರಾಯಣ್ಣ ಪ್ರತಿಮೆಯಾಗಿದೆ. ಪಕ್ಕದಲ್ಲಿ ಜಿಲ್ಲಾ ಪಂಚಾಯತಿ ಕಟ್ಟಡವು ಸ್ಥಳಾಂತರಗೊಂಡ ಪರಿಣಾಮ ಈ ಸ್ಥಳವು ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಸರಕಾರದಿಂದ, ಗಣ್ಯರಿಂದ ಹಾಗೂ ಸಂಘ, ಸಂಸ್ಥೆಗಳಿಂದ ದೊರೆಯಬೇಕಾದ ಗೌರವಗಳು ರಾಯಣ್ಣನಿಗೆ ಸಿಗುತ್ತಿಲ್ಲ.

ದೇಶದ ಸ್ವಾಭಿಮಾನವನ್ನು ಉಳಿಸುವಗೋಸ್ಕರ ರಾಣಿ ಚನ್ನಮ್ಮಳು 1824 ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಥ್ಯಾಕರೆಯನ್ನು ಸೋಲಿಸಿದ ಸವಿನೆನಪಿಗಾಗಿ ರಾಜ್ಯ ಸರಕಾರ ಈ ವರ್ಷ ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಯನ್ನು ಆಚರಿಸುತ್ತಿದೆ. ಇಂತಹ ಶುಭ ಸಂದರ್ಭದಲ್ಲಿ ಚೆನ್ನಮ್ಮಳ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಗೌರವ ಕೊಡುವುದು ಅತಿಪ್ರಮುಖವಾಗಿದೆ. ಕಾರಣ ಜಿಲ್ಲಾಧಿಕಾರಿಗಳು ರಾಯಣ್ಣ ರಸ್ತೆಗೆ ಹೊಂದಿಕೊಂಡಿರುವ ಜಿಲ್ಲಾಡಳಿತದ ಕೇಂದ್ರ ಬಿಂದುವಾದ, ಅತಿ ಪ್ರಮುಖವಾದ ಪ್ರಾದೇಶಿಕ ಆಯುಕ್ತರ ಕಛೇರಿ ಎದುರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸ್ಥಳಾಂತರಿಸುವ ಮುಖಾಂತರ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ” ಗೌರವವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
Back to top button