11 ಗಂಟೆತನಕ ದೇಶಾದ್ಯಂತ ಎಷ್ಟು ಪರ್ಸೆಂಟ್ ಮತದಾನವಾಯ್ತು? ಚುನಾವಣೆಗೆ ಜನರ ಸ್ಪಂದನೆ ಹೇಗಿದೆ?

WhatsApp Group Join Now
Telegram Group Join Now

ಬೆಂಗಳೂರು: ಇಂದು ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ, 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯುತ್ತಿದ್ದು, (Lok Sabha Election Second Phase Voting) ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

 

ಈತನ್ಮಧ್ಯೆ ಬೆಳಗ್ಗೆ 11 ಗಂಟೆ ತನಕ ದೇಶಾದ್ಯಂತ ಉತ್ತಮ ಮಟ್ಟದಲ್ಲಿ ಮತದಾನ ನಡೆದಿದ್ದು, ತ್ರಿಪುರಾದಲಿ 36.42% ಮತದಾನವಾಗಿದೆ. ಛತ್ತೀಸ್‌ಗಢ- 35.47% ವೋಟಿಂಗ್ ಆಗಿದ್ದು, ಮಣಿಪುರದಲ್ಲಿ 33.22%, ಪಶ್ಚಿಮ ಬಂಗಾಳ- 31.25%, ಮಧ್ಯ ಪ್ರದೇಶ- 28.15% ಮತ್ತು ಅಸ್ಸಾಂನಲ್ಲಿ 27.43% ಮತದಾನವಾಗಿದೆ.

ಇನ್ನು, ರಾಜಸ್ಥಾನದಲ್ಲಿ 26.84%, ಜಮ್ಮು ಮತ್ತು ಕಾಶ್ಮೀರದಲ್ಲಿ 26.61%, ಕೇರಳ- 25.61%, ಉತ್ತರ ಪ್ರದೇಶ- 24.31%, ಕರ್ನಾಟಕ- 22.34%, ಬಿಹಾರ- 21.68% ಮತ್ತು ಮಹಾರಾಷ್ಟ್ರದಲ್ಲಿ 18.83% ಮತದಾನವಾಗಿದೆ. ದೇಶಾದ್ಯಂತ ಮತಗಟ್ಟೆಗಳಲ್ಲಿ ಜನರು ಬಿಸಿಲನ್ನೂ ಲೆಕ್ಕಿಸದೆ ತಮ್ಮ ಹಕ್ಕು ಚಲಾಯಿಸಲು ಮುಂದೆ ಬಂದಿದ್ದಾರೆ.

ಇಂದು ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ, 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯುತ್ತಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇಂದು ಬೆಳಗ್ಗಿನಿಂದಲೇ ಮತದಾನ ಆರಂಭವಾಗಿದ್ದು, ಜನರು ಬಿರುಸಿನಿಂದ ಮತದಾನ ಮಾಡಲು ಮತಗಟ್ಟೆ ಕೇಂದ್ರಗಳಿಗೆ ಬರುತ್ತಿದ್ದಾರೆ.

ಯಾವ ರಾಜ್ಯಗಳಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ?

ಕೇರಳದ ಎಲ್ಲಾ 20 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲಿ 14, ರಾಜಸ್ಥಾನದಲ್ಲಿ 13, ಉತ್ತರ ಪ್ರದೇಶದಲ್ಲಿ 8, ಮಹಾರಾಷ್ಟ್ರದಲ್ಲಿ 8, ಅಸ್ಸಾಂನಲ್ಲಿ 5, ಬಿಹಾರದಲ್ಲಿ 5, ಛತ್ತೀಸ್‌ಗಢದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 3 ಮತ್ತು ತ್ರಿಪುರಾ, ಮಣಿಪುರ ಮತ್ತು ಜಮ್ಮುವಿನ ತಲಾ ಒಂದು ಸ್ಥಾನ ಸೇರಿದಂತೆ 88 ಲೋಕಸಭಾ ಸ್ಥಾನಗಳಿವೆ. ಮತ್ತು ಕಾಶ್ಮೀರದಲ್ಲಿ ಮತದಾನ ನಡೆಯುತ್ತಿದೆ.

ಚುನಾವಣಾ ಕ್ಷೇತ್ರದ ಪ್ರಮುಖ ಮುಖ ಯಾರು?

ಕೇರಳದ ವಯನಾಡ್‌ನಿಂದ ರಾಹುಲ್ ಗಾಂಧಿ, ತಿರುವನಂತಪುರದಿಂದ ಕಾಂಗ್ರೆಸ್‌ನ ಶಶಿ ತರೂರ್, ಮಥುರಾದಿಂದ ಹೇಮಾ ಮಾಲಿನಿ, ರಾಜನಂದಗಾಂವ್‌ನಿಂದ ಭೂಪೇಶ್ ಬಾಘೇಲ್, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ. ಸುರೇಶ್ ಮತ್ತು ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ಸೇರಿದಂತೆ ಪ್ರಮುಖರು ಸ್ಪರ್ಧಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆ ಬಿರುಸಿನಿಂದ ಸಾಗಿದೆ ಅಂತ ಹೇಳಬಹುದು. ಬೆಳಗ್ಗೆಯಿಂದಳೇ ಸರತಿ ಸಾಲಿನಲ್ಲಿ ನಿಂತು ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ 9 ಗಂಟೆವರೆಗೂ 12.75% ರಷ್ಟು ಮತದಾನ‌ ಆಗಿದೆ.

WhatsApp Group Join Now
Telegram Group Join Now
Back to top button