ಪತ್ನಿ ಹಿಂದೆ ಬಿದ್ದಿ ಪೊಲಿ ಪೊಲೀಸಪ್ಪನ ವಿರುದ್ಧ ಕಮೀಷನರ್ ಗೆ ದೂರು ಕೊಟ್ಟ ಪತಿ

WhatsApp Group Join Now
Telegram Group Join Now

ಬೆಳಗಾವಿ: ಪತ್ನಿ ಹಿಂದೆ ಬಿದ್ದಿ ಪೊಲಿ ಪೊಲೀಸಪ್ಪನ ವಿರುದ್ಧ ಆಕೆಯ ಪತಿ  ಕಮೀಷನರ್ ಗೆ ದೂರು ಕೊಟ್ಟ ಘಟನೆ ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಠಾಣೆಯೊಂದರಲ್ಲಿ ನಡೆದಿದೆ.

ವಿವಾಹಿತ ಮಹಿಳೆಯೊಂದಿಗೆ ಹಿರೇಬಾಗೇವಾಡಿ ಪೊಲೀಸ್‌ ಠಾಣೆಯ ಅವಿವಾಹಿತ ಪೇದೆಯೋರ್ವ ( ಕಾನ್ಸಟೇಬಲ್ ) ಅಸಭ್ಯವಾಗಿ ನಡೆದುಕೊಂಡಿದ್ದು, ಆತನ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಮಹಿಳೆ ಪತಿ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದು, ಈ ದೂರಿನನ್ವಯ ಪೊಲೀಸ್‌ ಆಯುಕ್ತರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಳಗಾವಿ ಗ್ರಾಮೀಣ ಎಸಿಪಿಗೆ ಸೂಚನೆ ನೀಡಿದ್ದಾರೆ.

ಹಿರೇಬಾಗೇವಾಡಿ ಪೊಲೀಸ್‌ ಠಾಣೆಯ ಅವಿವಾಹಿತ ಪೇದೆ ಮಡ್ಡೇಪ್ಪ ಮಂಟೂರ ಎಂಬಾತ ಈ ಹಿಂದೆ ಹಲಗಾ ಗ್ರಾಮದ ಬೀಟ್‌ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ಈ ವೇಳೆ ಅಲ್ಲಿಯೇ ಇದ್ದ ದಾಬಾ ಮಾಲೀಕನೊಂದಿಗೆ ಪರಿಚಯವಾಗಿದ್ದಾನೆ. ಬಿಟ್ ಪೊಲೀಸ್ ಆಗಿದ್ದರಿಂದ ಅಲ್ಲಿಯೇ ಊಟ ಮಾಡಿ ವಿಶ್ರಾಂತಿ ಪಡೆಯಲು ಆರಂಭಿಸಿದ್ದಾನೆ.

ಬಳಿಕ ಈ ಪೊಲಿ ಪೊಲೀಸಪ್ಪ ದಾಬಾ ಮಾಲೀಕನ ಪತ್ನಿಯೊಂದಿಗೆ ಸ್ನೇಹ ಬೆಳೆಸಿ ಅನುಚಿತವಾಗಿ ವರ್ತನೆ ನಡೆಸಿದ್ದಾನೆ. ಈ ವಿಚಾರವಾಗಿ ನೊಂದ ವ್ಯಕ್ತಿ ಠಾಣೆಗೆ ತೆರಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಈ ವೇಳೆ ಅಧಿಕಾರಿಗಳು ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡು ಬುದ್ದಿಮಾತು ಹೇಳಿದ್ದಾರೆ. ಆದರೂ ತನ್ನ ಹಳೆಯ ಚಾಳಿ ಬೀಡದ ಪೇದೆ ತನ್ನ ದುರ್ಬುದ್ದಿಯನ್ನು ಮುಂದುವರಿಸಿದ್ದರಿಂದ ಮಹಿಳೆಯ ಪತಿ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾನೆ.

WhatsApp Group Join Now
Telegram Group Join Now
Back to top button