ಧಾರವಾಡ ಸಮೀಪದ ಗುಳೇದಕೊಪ್ಪ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಮನೆಮಾಡಿದ ಆತಂಕ
ಧಾರವಾಡ ಸಮೀಪದ ಗುಳೇದಕೊಪ್ಪ ಗ್ರಾಮದಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಇಷ್ಟು ದಿನ ರಾಜ್ಯ ರಾಜಧಾನಿ ಹಾಗೂ ತುಮಕೂರು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ಧಾರವಾಡ ಜಿಲ್ಲೆಯಲ್ಲೂ ಕಾಣಿಸಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದಲ್ಲಿ ಜನರಲ್ಲಿ ಚಿರತೆಯ ಓಡಾಟ ದ ವಿಡಿಯೋ ಭಯ ಹುಟ್ಟಿಸಿದೆ. ಧಾರವಾಡ ಜಿಲ್ಲೆಯ ಗಡಿ ಭಾಗ ಗ್ರಾಮವಾದ ಗುಳೇದಕೊಪ್ಪ ಹಾಗೂ ಮದಿಕೊಪ್ಪ ನಡುವೆ ಮೂರು ಚಿರತೆಗಳು ರೈತರ ಕಣ್ಣಿಗೆ ಬಿದ್ದಿವೆ.
ಹಳೇ ತೆಗೂರು, ಗುಳೇದಕೊಪ್ಪ, ಮದಿಕೊಪ್ಪ ಭಾಗದಲ್ಲಿ ಚಿರತೆಗಳು ಓಡಾಡುತ್ತಿರುವದನ್ನು ಗ್ರಾಮಸ್ಥರು ಖಾತ್ರಿ ಪಡಿಸಿದ್ದು, ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಗ್ರಾಮಸ್ಥರು ಆತಂಕಗೊಂಡಿದ್ದಾರೆ.
Follow Us