ನರೇಗಾ ಯೋಜನೆಯಲ್ಲಿ 150 ಕೋಟಿ ರೂಪಾಯಿ ಅಕ್ರಮ : ಪ್ರಕರಣಕ್ಕೆ ಸಂಬಂಧಿಸಿದಂತೆ 32 ಪಿಡಿಒಗಳು ಅಮಾನತು

WhatsApp Group Join Now
Telegram Group Join Now

ರಾಯಚೂರು: ನರೇಗಾ ಯೋಜನೆಯಲ್ಲಿ 150 ಕೋಟಿ ರೂಪಾಯಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ 32 ಪಿಡಿಒಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೊಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು.ಲೆಕ್ಕಪರಿಶೋಧನೆಯ ವೇಳೆ 150 ಕೋಟಿ ಅಕ್ರಮ ನಡೆದಿದೆ ಎಂಬುದು ಬಯಲಾಗಿತ್ತು.

ದೇವದುರ್ಗ ತಾಲೂಕು ಪಂಚಾಯ್ತಿ ವ್ಯಾಕ್ತಿಯಲ್ಲಿ 2020ರಿಂದ 2023ವರೆಗೆ ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬುದು ಮೂರು ವರ್ಷಗಳ ಬಳಿಕ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ತುಕಾರಾಂ ಇದೀಗ ರಾಯಚೂರಿನ 32 ಪಿಡಿಒ ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

WhatsApp Group Join Now
Telegram Group Join Now
Back to top button