ಇಂದು ಮೊದಲ ಹಂತದ ಮತದಾನ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ತಿಳಿಯಲು ಹೀಗೆ ಮಾಡಿ

WhatsApp Group Join Now
Telegram Group Join Now

ಲೋಕಸಭೆ ಚುನಾವಣೆ 2024ರ ಮೊದಲ ಹಂತದ ಮತದಾನವು ಇಂದು (ಏಪ್ರಿಲ್ 19) ನಡೆಯುತ್ತಿದೆ. ಹಂತ 1 ರ ಮತದಾನವು ಚುನಾವಣಾ ಆಯೋಗದ (EC) ಪ್ರಕಾರ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UTs) 102 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಹಂತ 1ರ ಮತದಾನವು ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆಯವರೆಗೆ ನಡೆಯಲಿದೆ.

 

ಮೊದಲ ಹಂತದ ಚುನಾವಣೆ ನಡೆಯಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೇರಿ ಸೇರಿ 21 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.

ಲೋಕಸಭೆ ಚುನಾವಣೆ 2024 ರ ಹಂತ 1 ರಲ್ಲಿ ನಿಮ್ಮ ಮತವನ್ನು ಚಲಾಯಿಸಲು, ಮತದಾರರು ತಮ್ಮ ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕು. ಹಾಗೇ ಮತ ಚಲಾಯಿಸಲು, ಮತದಾರರ ಗುರುತಿನ ಚೀಟಿಯೇ ಬೇಕಂತಿಲ್ಲ,

ನಿಮ್ಮ ಮತವನ್ನು ಚಲಾಯಿಸಲು ಕೆಳಗೆ ಪಟ್ಟಿ ಮಾಡಲಾದ ದಾಖಲೆಗಳಲ್ಲಿ ಒಂದನ್ನು ಕೊಂಡೊಯ್ಯಬಹುದು:

– ಪಾಸ್​ಪೋರ್ಟ್​
– ಆಧಾರ್ ಕಾರ್ಡ್
– ಪ್ಯಾನ್ ಕಾರ್ಡ್
-ಚಾಲನೆ ಪರವಾನಗಿ (ಲೈಸೆನ್ಸ್​)

ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಎಂಎನ್‌ಆರ್‌ಇಜಿಎ ಕಾರ್ಡ್‌ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಗುರುತಿನ ಚೀಟಿಗಳು ಮತ್ತು ಫೋಟೋ ಹೊಂದಿರುವ ಪಿಂಚಣಿ ಕಾರ್ಡ್‌ಗಳನ್ನು ಸಹ ಮಾನ್ಯವೆಂದು ಪರಿಗಣಿಸಲಾಗುತ್ತದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ತಿಳಿಯಲು ಹೀಗೆ ಮಾಡಿ

– https://voters.eci.gov.in/ ಗೆ ಹೋಗಿ ಮತ್ತು ಮೇಲಿನ ಬಲಭಾಗದಲ್ಲಿರುವ “ಸರ್ಚ್‌ ಇನ್‌ ಎಲೆಕ್ಟ್ರಾಲ್‌ ರೋಲ್” ಕ್ಲಿಕ್ ಮಾಡಿ
-ನಿಮ್ಮ ರಾಜ್ಯವನ್ನು ನಮೂದಿಸಿ ಮತ್ತು ಪರದೆಯ ಮೇಲೆ ತೋರಿಸಿರುವ ಫಾರ್ಮ್‌ನಲ್ಲಿ ಭಾಷೆಯನ್ನು ಆಯ್ಕೆಮಾಡಿ
– ನಿಮ್ಮ ಮೊದಲ ಹೆಸರು ಮತ್ತು ಉಪನಾಮವನ್ನು ಸೇರಿಸಿ; ನಿಮ್ಮ ಸಂಬಂಧಿಕರ ಮೊದಲ ಹೆಸರು ಮತ್ತು ಉಪನಾಮವನ್ನು ಸೇರಿಸಿ
-ನಿಮ್ಮ ಜನ್ಮ ದಿನಾಂಕ ಮತ್ತು ಲಿಂಗವನ್ನು ಸೇರಿಸಿ
-ನಿಮ್ಮ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಆಯ್ಕೆಮಾಡಿ; ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ
– ನಂತರ ಸರ್ಚ್‌ ಬಟನ್‌ ಒತ್ತಿರಿ
-ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದರೆ, ಅದು ನಿಮಗೆ ಕಾಣಿಸುತ್ತದೆ.

ಚುನಾವಣೆ ನಡೆಯಲಿರುವ ಲೋಕಸಭಾ ಕ್ಷೇತ್ರಗಳು

ತಮಿಳುನಾಡು: ತಿರುವಳ್ಳೂರ್, ಚೆನ್ನೈ ಉತ್ತರ, ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ಶ್ರೀಪೆರಂಬದೂರ್, ಕಾಂಚೀಪುರಂ, ಅರಕ್ಕೋಣಂ, ವೆಲ್ಲೂರು, ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ಅರಣಿ, ವಿಲುಪ್ಪುರಂ, ಕಲ್ಲಕುರಿಚಿ, ಸೇಲಂ, ನಾಮಕ್ಕಲ್, ಈರೋಡ್, ತಿರುಪ್ಪೂರ್, ನೀಲಗಿರಿ, ಕೊಯಮತ್ತೂರು, ಪೊಲ್ಲಾಚಿ, ದಿಂಡಿಗಲ್ ಕರೂರ್, ತಿರುಚಿರಾಪಳ್ಳಿ, ಪೆರಂಬಲೂರು, ಕಡಲೂರು, ಚಿದಂಬರಂ, ಮೈಲಾಡುತುರೈ, ನಾಗಪಟ್ಟಿಣಂ, ತಂಜಾವೂರು, ಶಿವಗಂಗಾ, ಮಧುರೈ, ಥೇಣಿ, ವಿರುಧುನಗರ, ರಾಮನಾಥಪುರಂ, ತೂತುಕ್ಕುಡಿ, ತೆಂಕಶಿ, ತಿರುನೆಲ್ವೇಲಿ, ಕನ್ನಿಯಾಕುಮಾರಿ ಸೇರಿವೆ.

 

ಅಸ್ಸಾಂ: ದಿಬ್ರುಗಢ್, ಜೋರ್ಹತ್, ಕಾಜಿರಂಗ, ಲಖಿಂಪುರ, ಸೋನಿತ್ಪುರ್

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ರಾಜಸ್ಥಾನ: ಗಂಗಾನಗರ, ಬಿಕಾನೇರ್, ಚುರು, ಜುಂಜುನು, ಸಿಕರ್, ಜೈಪುರ ಗ್ರಾಮಾಂತರ, ಜೈಪುರ, ಅಲ್ವಾರ್, ಭರತ್‌ಪುರ, ಕರೌಲಿ-ಧೋಲ್‌ಪುರ್, ದೌಸಾ, ನಾಗೌರ್

ಮಧ್ಯಪ್ರದೇಶ: ಛಿಂದ್ವಾರಾ, ಬಾಲಾಘಾಟ್, ಜಬಲ್ಪುರ್, ಮಂಡ್ಲಾ, ಸಿಧಿ, ಶಹದೋಲ್

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶ ಪಶ್ಚಿಮ, ಅರುಣಾಚಲ ಪ್ರದೇಶ ಪೂರ್ವ

ಉತ್ತರ ಪ್ರದೇಶ: ಸಹರಾನ್ಪುರ್, ಕೈರಾನಾ, ಮುಜಾಫರ್ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ, ಪಿಲಿಭಿತ್

ಮಹಾರಾಷ್ಟ್ರ: ಚಂದ್ರಾಪುರ, ಭಂಡಾರಾ-ಗೊಂಡಿಯಾ, ರಾಮ್‌ಟೆಕ್, ನಾಗ್ಪುರ, ಗಡ್ಚಿರೋಲಿ-ಚಿಮುರ್

ಬಿಹಾರ: ಔರಂಗಾಬಾದ್, ಗಯಾ, ಜಮುಯಿ, ನವಾಡ

ಜಮ್ಮು ಮತ್ತು ಕಾಶ್ಮೀರ: ಉಧಂಪುರ

ಉತ್ತರಾಖಂಡ: ಹರಿದ್ವಾರ, ತೆಹ್ರಿ ಗರ್ವಾಲ್, ಗರ್ವಾಲ್, ಅಲ್ಮೋರಾ, ನೈನಿತಾಲ್

ಪಶ್ಚಿಮ ಬಂಗಾಳ: ಕೂಚ್‌ಬೆಹಾರ್, ಅಲಿಪುರ್‌ದುವಾರ್ಸ್, ಜಲ್ಪೈಗುರಿ

ಮಣಿಪುರ: ಒಳ ಮಣಿಪುರ, ಹೊರ ಮಣಿಪುರ

ಛತ್ತೀಸ್‌ಗಢ: ಬಸ್ತಾರ್

ಲಕ್ಷದ್ವೀಪ: ಲಕ್ಷದ್ವೀಪ

ಮೇಘಾಲಯ: ಶಿಲ್ಲಾಂಗ್, ತುರಾ

ಮಿಜೋರಾಂ: ಮಿಜೋರಾಂ

ನಾಗಾಲ್ಯಾಂಡ್: ನಾಗಾಲ್ಯಾಂಡ್

ಪುದುಚೇರಿ: ಪುದುಚೇರಿ

ಸಿಕ್ಕಿಂ: ಸಿಕ್ಕಿಂ

ತ್ರಿಪುರ: ತ್ರಿಪುರ ಪಶ್ಚಿಮ

WhatsApp Group Join Now
Telegram Group Join Now
Back to top button