ದೇಶದ ಉತ್ತಮ ಭವಿಷ್ಯ ಹಾಗೂ ಭದ್ರತೆಗಾಗಿ ಬಿಜೆಪಿಗೆ ಬೆಂಬಲಿಸಿ: ಜಗದೀಶ್ ಶೆಟ್ಟರ್
ದೇಶದ ಉತ್ತಮ ಭವಿಷ್ಯ ಹಾಗೂ ಭದ್ರತೆಗಾಗಿ ಬಿಜೆಪಿಗೆ ಬೆಂಬಲಿಸಿ: ಜಗದೀಶ್ ಶೆಟ್ಟರ್
ಬೆಳಗಾವಿ: ದಿನದ 24 ಗಂಟೆ ದೇಶದಲ್ಲಿ ಮೋದಿಯವರು ಕೆಲಸ ಮಾಡಿದ್ದಾರೆ ಹಾಗೂ ಮೋದಿಯವರ ದೂರ ದೃಷ್ಟಿ ದೇಶದ ಚಿತ್ರಣವನ್ನೆ ಬದಲಾವಣೆ ಮಾಡಿದೆ ಹಾಗಾಗಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲು ನನ್ನನ್ನು ಗೆಲ್ಲಿಸಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮನವಿ ಮಾಡಿದರು.
ನಗರದ ಕೆಎಲ್ಇ ಶೇಷದ್ರಿ ಕಾಲೇಜಿನಲ್ಲಿ ಲೋಕಸಭಾ ಚುನಾವಣೆ ನಿಮಿತ್ಯ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಗುಜರಾತ್ ಮಾಡೆಲ್ ಮೂಲಕ ಮೋದಿಯವರು ದೇಶದಲ್ಲಿ ಮನೆ ಮಾತಾಗಿದ್ದಾರೆ ಅಂತಹ ವ್ಯಕ್ತಿ 2014 ರಲ್ಲಿ ಪ್ರಧಾನಿ ಆದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಲೋಕಸಭಾ ಚುನಾವಣೆಗೆ ಬಹಳಷ್ಟು ಸ್ಥಾನಮಾನ ಇದೆ. ದೇಶದ ಭದ್ರತೆ, ದೇಶದ ಭವಿಷ್ಯ ನಿರ್ಧಾರ ಮಾಡುವ ಚುನಾವಣೆ ಎಂದರೆ ಅದು ಲೋಕಸಭಾ ಚುನಾವಣೆ, ಮೋದಿಯವರು ತಮ್ಮ ಆಡಳಿತ ಅವಧಿಯಲ್ಲಿ ಒಂದೆ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ಮಾಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದ್ದಾರೆ. ಹಿಂದಿನ ಯುಪಿಯ ಸರ್ಕಾರದಲ್ಲಿ 2ಜಿ ಹಗರಣ ಸೇರಿದಂತೆ ಅನೇಕ ಹಗರಣಗಳು ಬೆಳಕಿಗೆ ಬಂದವವು, ಲಕ್ಷಾಂತರ ಕೋಟಿಯ ಹಗರಣಗಳ ತನಿಖೆ ಇಂದು ನಡೆಯುತ್ತಿದೆ. ಆದರೆ 10 ವರ್ಷದ ಆಡಳಿತದಲ್ಲಿ ಮೋದಿಯವರು ಒಂದೆ ಒಂದು ಭ್ರಷ್ಟಾಚಾರ ಇಲ್ಲದೆ ಆಡಳಿತ ಮಾಡಿದ್ದಾರೆ ಎಂದು ತಳಿಸಿದರು.
ಹಿಂದಿನ ಸರ್ಕಾರದಲ್ಲಿ 100 ರೂಪಾಯಿ ಜನರಿಗೆ ಬಿಡುಗಡೆ ಆದರೆ ಫಲಾನುಭವಿಗೆ ಕೇವಲ 15 ರೂಪಾಯಿ ತಲುಪತ್ತಿತ್ತು. ಅಷ್ಟೊಂದು ಹಗರಣ ನಡೆಯುತ್ತಿತ್ತು. ಆದರೆ ಮೊದಿಯವರು ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ, ಭ್ರಷ್ಟಾಚಾರ ಕೊನೆಗಾಣಿಸಿದರು. ಕೃಷಿ ಸಮ್ಮಾನ್ ಯೋಜನೆ ಅಡಿ ವರ್ಷಕ್ಕೆ 6 ಸಾವಿರ ರೂ. ನೇರವಾಗಿ ರೈತರ ಖಾತೆಗೆ ಬರುತ್ತಿದೆ. ಇದರಲ್ಲಿ ಒಂದೆ ಒಂದು ರೂ. ಸೋರಿಕೆ ಆಗುವುದಿಲ್ಲ. ಜನಧನ ಖಾತೆ ಮೂಲಕ ಬಡ ವ್ಯಕ್ತಿ ಕೂಡಾ ಉಚಿತವಾಗಿ ಖಾತೆ ತೆರೆಯಲು ಅವಕಾಶ ನೀಡದ್ದು ಮೋದಿಯವರು. ದೇಶದಲ್ಲಿ ಸದಾ ಕಾಲ ಶಾಂತಿಯುತ ವಾತಾವರಣ ನಿರ್ಮಾಣವಾಗಿರಲು ಮೋದಿಯವರ ಆಡಳಿತ ಮುಖ್ಯವಾಗಿದೆ. ಹೀಗಾಗಿ ಮೇ 7 ರಂದು ಕಮಲ ಚಿಹ್ನೆಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಜಗದೀಶ್ ಶೆಟ್ಟರ್ ಅವರು ಮನವಿ ಮಾಡಿದರು.
ಬಳಿಕ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು, ದೇಶದ ರಕ್ಷಣಾ ವಲಯದಲ್ಲಿ ಸದ್ಯದ ಉತ್ಪಾದನೆ 70% ಇದೆ. ಬುಲೆಟ್ ಪ್ರೂಫ್, ಲೈವ್ ಜಾಕೆಟ್ ಗಳು ಕೂಡಾ ದೇಶದಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದೆ. ಈ ಹಿಂದೆ ನಮ್ಮ ನಾಯಕರು ಸರಿ ಇರಲಿಲ್ಲ. ಅವರಿಗೆ ಆಮದು ಮಾಡಿಕೊಳ್ಳುವುದು ಅಷ್ಟೇ ಗೊತ್ತಿತ್ತು. ಈ ಹಿಂದೆ ಸೋರ್ಸ್ ಇದ್ದರು ನಮಗೆ ಉತ್ಪಾದನೆ ಮಾಡಲು ಆಗಿಲ್ಲ. ಕ್ರೋಡ್ ಆಯಿಲ್ ನಾವು 100% ಆಮದು ಮಾಡಿಕೊಳ್ಳುತ್ತೇವೆ. ನಮ್ಮಲ್ಲಿ ಸಕ್ಕರೆ ಉತ್ಪಾದನೆ ಆರಂಭ ಆಗಿ 100 ವರ್ಷ ಆಯ್ತು, ನಮ್ಮ ಜಿಲ್ಲೆಯಲ್ಲಿ 28 ಸಕ್ಕರೆ ಕಾರ್ಖಾನೆಗಳಿವೆ. ಸಕ್ಕರೆ ಬೈ ಪ್ರೋಡೆಕ್ಟ್ ಎಥೆನಾಲ್. ನಾನು ನ್ಯಾಷನಲ್ ಶುಗರ್ ಫೆಡ್ರೆಶನ್ ಉಪಾಧ್ಯಕ್ಷ ಇದ್ದೆ, ಇಥೇನಾಲ್ ಉತ್ಪಾದನೆಗೆ ನಾವು 25 ವರ್ಷ ಹೋರಾಟ ಮಾಡಿದ್ದೇವೆ. 10% ಎಥೆನಾಲ್ ಪೆಟ್ರೋಲ್ ನಲ್ಲಿ ಸೇರಿಸಬಹುದು. ಆದರೆ ಈ ಹಿಂದೆ ಇದಕ್ಕೆ ಅನುಮತಿ ಸಿಗಲಿಲ್ಲ. ಆದರೆ ಮೋದಿಯವರು ಪ್ರಧಾನಿ ಆದ ಬಳಿಲ ಸಕ್ಕರೆ ಉದ್ಯಮದಲ್ಲಿ ಎಥೆನಾಲ್ ಉತ್ಪಾದನೆಗೆ ಉತ್ತೇಜನ ನೀಡಿದರು. ಎಥೆನಾಲ್ ಉತ್ಪಾದನೆಗೆ ಎಲ್ಲಾ ಸಕ್ಕರೆ ಕಾರ್ಖಾನೆಗೆ ಪರವಾನಿಗೆ ಮೋದಿಯವರು ನೀಡಿದರು. ಪೆಟ್ರೋಲಿಯಂ ನಲ್ಲಿ ಇಥಾನಲ್ 10% ದಿಂದ 20% ಸೇರಿಸಬಹುದಾದ ಶಕ್ತಿ ನಮ್ಮಲ್ಲಿ ಬಂದಿದೆ ಎಂದರು.
ಕೇಂದ್ರ ಸಚಿವ ನೀತಿನ್ ಗಡ್ಕರಿ ಅವರು ಹೇಳಿದಂತೆ ಇಥಾನಾಲ್ ನ 100 ಪೆಟ್ರೋಲ್ ಬಂಕ್ಸ್ ಆರಂಭ ಆಗಲಿದೆ. ಮೋದಿಯವರು ಆಡಳಿತದಲ್ಲಿ ಕರ್ನಾಟಕದಲ್ಲಿಯೇ ಅತೀ ಬಡವರು 2.5 ಕೋಟಿ ಜನ ಮಧ್ಯಮ ವರ್ಗಕ್ಕೆ ಬಂದಿದ್ದಾರೆ. ದೇಶದಲ್ಲೇ 16 ಕೋಟಿ ಜನ ಮಧ್ಯಮ ವರ್ಗಕ್ಕೆ ಬಂದಿದ್ದಾರೆ. ಹಾಗಾಗಿ ಮತ್ತೊಮ್ಮೆ ದೇಶದಲ್ಲಿ ಮೋದಿ ಸರ್ಕಾರ ಯಾಕೆ ಬೇಕು ಎಂದು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮೋದಿಯವರ ಕಾರ್ಯಕ್ರಮ ಮನೆ ಮನೆಗೆ ಮುಟ್ಟಬೇಕು. ಹೆಚ್ಚಿನ ಮತ ಜಗದೀಶ್ ಶೆಟ್ಟರ್ ಅವರಿಗೆ ನೀಡಿ ಗೆಲ್ಲಿಸಬೇಕು. ಜಗದೀಶ್ ಶೆಟ್ಟರ್ ಅವರು ತುಂಬಾ ನುರಿತ ವ್ಯಕ್ತಿ ಅವರು ಲೋಕಸಭೆಗೆ ಹೊದರೆ ಬೆಳಗಾವಿ ಜನರಿಗೆ ಅನೂಕುಲ ಆಗಲಿದೆ ಎಂದು ಹೇಳಿದರು.
ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ್, ಶೇಷಾದ್ರಿ ಕಾಲೇಜಿನ ಪ್ರಾಂಶುಪಾಲ ಎಸ್ ಎ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.