ಬೆಳಗಾವಿ; ಮರಕ್ಕೆ ಡಿಕ್ಕಿ ಹೊಡೆದ ಕಾರು: ಒಂದೇ ಕುಟುಂಬದ 6 ಜನ ದುರ್ಮರಣ

WhatsApp Group Join Now
Telegram Group Join Now

ಬೆಳಗಾವಿ:  ಮದುವೆ ಮುಗಿಸಿ ವಾಪಸ್‌ ಮನೆಗೆ ಬರುವಾಗ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು  ಒಂದೇ ಕುಟುಂಬದ 6 ಜನ ದಾರುಣವಾಗಿ ಮೃತಪಟ್ಟಿರುವ ಘಟನೆ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದಿದೆ.

ಶಾರುಖ್ ಪೆಂಡಾರಿ ( 30 ) ಇಕ್ಬಾಲ್ ಜಮಾದಾರ ( 50 ) ಸಾನಿಯಾ ಲಂಗೊಟಿ ( 37 ) ಉಮರ್ ಲಂಗೋಟಿ ( 17 ) ಶಬನಮ್ ಲಂಗೋಟಿ ( 37 ) ಪರಾನ್ ಲಂಗೋಟಿ ( 13 ) ಮೃತಪಟ್ಟದ್ದು ಇನ್ನುಳಿದ ಮೂವರುಗಂಭೀರವಾಗಿ ಗಾಯಗೊಂಡಿದ್ದಾರೆ. ಭೀಕರ ಅಪಘಾತ ಕಂಡು  ಸ್ಥಳೀಯರು ದಂಗಾಗಿದ್ದಾರೆ. ಮೃತರು ಧಾರವಾಡ ಮೂಲದವರು ಎನ್ನಲಾಗಿದೆ. ಮದುವೆ ಮುಗಿಸಿ ಮರಳಿ ಮನೆಗೆ ಹೋಗುವಾಗ ಸ್ವಿಫ್ಟ ಕಾರು ಚಾಲಕನ ನಿಯಂತ್ರನ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ 9 ಜನರ ಪೈಕಿ 6 ಜನರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಘಟನಾ ಸ್ಥಳಕ್ಕೆ ಎಸ್ಪಿ ಭೀಮಾಶಂಕರ ಗುಳೇದ ಅವರು ನಂದಗಡ ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

WhatsApp Group Join Now
Telegram Group Join Now
Back to top button