ಮಠಾಧೀಶರ ಆಶೀರ್ವಾದ ಪಡೆದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್

WhatsApp Group Join Now
Telegram Group Join Now

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ತಾಲ್ಲೂಕಿನ ವಿವಿಧ ಮಠಗಳಿಗೆ ತೆರಳಿ ಮಠಾಧೀಶರ ಆಶೀರ್ವಾದ ಪಡೆದರು.

ಸ್ವರ್ಣವಲ್ಲಿ ಮಹಾಸಂಸ್ಥಾನಕ್ಕೆ ಭೇಟಿ ನೀಡಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಕೆಪಿಸಿಸಿ ವಕ್ತಾರ ದೀಪಕ್ ದೊಡ್ಡೂರು, ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ರಮೇಶ ದುಬಾಶಿ, ಶ್ರೀಪಾದ ಹೆಗಡೆ ಕಡವೆ ಹಾಗೂ ಪ್ರಮುಖರು ಇದ್ದರು.

 

ಬಳಿಕ ಸೋಂದಾದ 1008 ಭಗವಾನ್ ನೇಮಿನಾಥ ಸ್ವಾಮಿ ಹಾಗೂ ಆಮ್ರ ಕೂಷ್ಮಾಂಡಿನಿ ಅಮ್ಮನವರ ಬಸದಿಗೆ ಭೇಟಿ ನೀಡಿ ದರ್ಶನ ಪಡೆದ ಅವರು, 108ನೇ ಅಮೋಘಕೀರ್ತಿ ಮಹಾರಾಜ ಹಾಗೂ 108ನೇ ಅಮೋಲ್ ಕೀರ್ತಿ ಮಹಾರಾಜರ ಆಶೀರ್ವಾದ ಪಡೆದರು. ನಂತರ ಸ್ವಾದಿ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಅವರನ್ನು ಭೇಟಿಯಾದ ಅವರು ಆಶೀರ್ವಾದ ಪಡೆದರು.

WhatsApp Group Join Now
Telegram Group Join Now
Back to top button