ಕೋವಿಡ್‌ ರೂಪಾಂತರಿ JN.1 ಲಕ್ಷಣಗಳೇನು? ಹೊಸ ಕೋವಿಡ್‌ ರೂಪಾಂತರಿ JN.1 ಲಕ್ಷಣಗಳನ್ನು ಈ ರೀತಿ ಗುರುತಿಸಲಾಗಿದೆ

WhatsApp Group Join Now
Telegram Group Join Now

ವದೆಹಲಿ: ಕೋವಿಡ್‌-19ನ ಹೊಸ ರೂಪಾಂತರಿ JN.1 ಆಂತಕ ಸೃಷ್ಟಿಸಿದೆ. ದೇಶದಲ್ಲಿ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಕಾಣುತ್ತಿದ್ದು, ಸದ್ಯ 1,970 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಅಲ್ಲದೆ ಈ ಹೊಸ ರೂಪಾಂತರಿಯಿಂದ ಕೇರಳದಲ್ಲಿ ಒಂದು ಸಾವು ಕೂಡ ಸಂಭವಿಸಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿ ನೀಡಿದ್ದು, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಇತರ ರೂಪಾಂತರಿ ತಳಿಗಳಿಗೆ ಹೋಲಿಸಿದರೆ JN.1 ಹೆಚ್ಚು ಹರಡಬಹುದು. ಹಬ್ಬಗಳು, ರಜಾದಿನಗಳಲ್ಲಿ ಜನರು ಒಟ್ಟಾಗಿ ಸೇರುವುದು ಹಾಗೂ ಲಸಿಕೆಗಳ ಲಭ್ಯತೆ ಕಡಿಮೆ ಇರುವುದರಿಂದ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಸಿಡಿಸಿ (ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ) ಹೇಳಿದೆ.

ಹೊಸ ಕೋವಿಡ್‌ ರೂಪಾಂತರಿ JN.1 ಲಕ್ಷಣಗಳನ್ನು ಈ ರೀತಿ ಗುರುತಿಸಲಾಗಿದೆ

  • ಕೋವಿಡ್‌ ಹೊಸ ರೂಪಾಂತರಿ ಲಕ್ಷಣಗಳು ಸೌಮ್ಯ ಮತ್ತು ಮಧ್ಯಮ ಹಂತದಲ್ಲಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ
  • ಜ್ವರ, ನೆಗಡಿ, ಗಂಟಲು ನೋವು, ತಲೆನೋವು ಕಾಣಿಸಿಕೊಳ್ಳುತ್ತದೆ
  • ಹೆಚ್ಚಿನ ರೋಗಿಗಳು ಉಸಿರಾಟದಲ್ಲಿ ಸಣ್ಣ ಪ್ರಮಾಣದ ಸಮಸ್ಯೆಗಳನ್ನು ಅನುಭವಿಸಬಹುದು, ಅದು ಸಾಮಾನ್ಯವಾಗಿ ನಾಲ್ಕರಿಂದ ಐದು ದಿನಗಳಲ್ಲಿ ಸುಧಾರಿಸುತ್ತದೆ.
  • ಹೊಸ ರೂಪಾಂತರಿ ವೈರಸ್‌ ಇದ್ದರೆ ಹಸಿವು ಆಗದಿರುವುದು ಮತ್ತು ವಾಕರಿಕೆಯ ಲಕ್ಷಣಗಳಿರುತ್ತವೆ.
  • ಅತಿಯಾದ ಸುಸ್ತು, ಸ್ನಾಯುಗಳಲ್ಲಿ ಬಳಲಿಕೆ ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ಗ್ಯಾಸ್ಟ್ರಿಕ್‌ ಮತ್ತು ಅಜೀರ್ಣದ ಸಮಸ್ಯೆ ಉಂಟಾಗಬಹುದು.

‌ಸದ್ಯ ಭಾರತದಲ್ಲಿ ಶೇ 90 ರಷ್ಟು ಕೋವಿಡ್‌ ಪ್ರಕರಣಗಳು ನಿಯಂತ್ರಣದ ಹಂತದಲ್ಲಿದೆ. ಹೀಗಾಗಿ ಲಕ್ಷಣಗಳು ಕಂಡುಬಂದರೆ ಮನೆಯಲ್ಲಿಯೇ ಐಸೋಲೇಟ್‌ ಆದರೆ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ಸಿಡಿಸಿ ಹೇಳಿದೆ.

WhatsApp Group Join Now
Telegram Group Join Now
Back to top button