Abhishek Bacchan- Aishwarya Rai: ದೂರವಾಗಿದ್ರೂ ಇನ್ನೂ ಡಿವೋರ್ಸ್ ನೀಡದಿರಲು ನಿಜವಾದ ಕಾರಣವೇನು ಗೊತ್ತಾ?

WhatsApp Group Join Now
Telegram Group Join Now

ಒಂದೊಮ್ಮೆ ಬಾಲಿವುಡ್’ನ ಪವರ ಕಪಲ್ ಎಂದೇ ಪರಿಗಣಿಸಲ್ಪಟ್ಟಿದ್ದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಇದೀಗ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂದ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಆದರೆ ಅಷ್ಟಕ್ಕೂ ಈ ಜೋಡಿ ಡಿವೋರ್ಸ್ ಪಡೆಯಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ.

ಅಂದಹಾಗೆ ಕೆಲದಿನಗಳ ಹಿಂದೆ ಐಶ್ವರ್ಯಾ ರೈ, ಅಭಿಷೇಕ್ ಮನೆಬಿಟ್ಟು ಹೊರಬಂದಿದ್ದರು. ಇದೀಗ ಬೇರೆ ಬೇರೆಯಾಗಿಯೇ ಜೀವನ ನಡೆಸುತ್ತಿದ್ದಾರೆ, ಹೀಗಿದ್ದರೂ ಕೂಡ ಇವರಿಬ್ಬರು ಇನ್ನೂ ಡಿವೋರ್ಸ್ ಪಡೆದುಕೊಂಡಿಲ್ಲ. ಇದಕ್ಕೆ ಅಸಲಿ ಕಾರಣವೇನು ಎಂಬುದು ಸದ್ಯಕ್ಕೆ ಇರುವ ಪ್ರಶ್ನೆ.

ವರದಿಗಳ ಪ್ರಕಾರ, ಗಂಡನ ಮನೆ ಬಿಟ್ಟು ಪ್ರತ್ಯೇಕವಾಗಿ ಐಶ್ವರ್ಯಾ ವಾಸಿಸುತ್ತಿದ್ದಾರೆ. ಆದರೆ ಡಿವೋರ್ಸ್ ಕೊಡಲು ಸಿದ್ಧರಿಲ್ಲವಂತೆ, ಇದಕ್ಕೆ ಕಾರಣ ದುಡ್ದು. ತಿಂಗಳಿಗೆ ಇಂತಿಷ್ಟು ಜೀವನಾಂಶದ ಜೊತೆಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡಬೇಕಾಗಬಹುದು ಎಂಬ ಆಲೋಚನೆಯಿಂದ ಡಿವೋರ್ಸ್ ನೀಡುತ್ತಿಲ್ಲ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇವು ಎಷ್ಟರ ಮಟ್ಟಿಗೆ ನಿಜ ಎಂಬುದು ಸ್ಪಷ್ಟವಿಲ್ಲ.

ಒಂದು ವೇಳೆ ವಿಚ್ಛೇದನ ನೀಡಿದರೆ, ಪತಿಯ ಸಂಬಳದ 25 ಶೇಕಡ ಹಣ ಪತ್ನಿಗೆ ನೀಡಬೇಕು. ಅಭಿಷೇಕ್ ವಿಚಾರಕ್ಕೆ ಬಂದರೆ, ಅವರ ಆದಾಯ ಎರಡು ಕೋಟಿ. ಅಂದರೆ ತಿಂಗಳಿಗೆ 40 ಲಕ್ಷ ನೀಡಬೇಕು. ಜೊತೆಗೆ ಅಮಿತಾಬ್ ಆಸ್ತಿಯಲ್ಲೂ ಐಶ್ವರ್ಯಾಗೆ ಪಾಲು ನೀಡಬೇಕಾಗುತ್ತದೆ.

WhatsApp Group Join Now
Telegram Group Join Now
Back to top button