ಆನೆ ಬಂದಿದೆ ಆನೆ, ಬೆಳಗಿನ ಜಾವ, ಬೆಳಗಾವಿ ಮಹಾನಗರದ ಬಡಾವಣೆಗೆ ನುಗ್ಗಿದ ಕಾಡಾನೆ…!

WhatsApp Group Join Now
Telegram Group Join Now

ಬೆಳಗಾವಿ- ಇಂದು ಬೆಳ್ಳಂ ಬೆಳಗ್ಗೆ ಕಾಡಾನೆಯೊಂದು ಬೆಳಗಾವಿ ಮಹಾನಗರದ ಬಡಾವಣೆಗೆ ನುಗ್ಗಿದ ಘಟನೆ ಬೆಳಗಾವಿಯ ಬಾಕ್ಸೈಟ್ ರಸ್ತೆಯ ಬಸವ ಕಾಲನಿಯಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ ಕಾಡಾನೆ, ಬೆಳಗಾವಿಯ ಬಸವ ಕಾಲೋನಿಯಲ್ಲಿ ಕಾಣಿಸಿಕೊಂಡಾಗ,ಅಲ್ಲಿಯ ಕೆಲವರಿಗೆ ಖುಷಿ,ಇನ್ನು ಕೆಲವರಿಗೆ ಹೆದರಿಕೆ, ಆನೆ ಬಂದಿದೆ ಆನೆ,ಎನ್ನುವ ಸುದ್ದಿ ಹರಡಿ ಅಲ್ಲಿ ನೂರಾರು ಜನ ಸೇರಿದ್ರು.ಸೆಲ್ಫಿ,ಮೋಬೈಲ್ ಶೂಟೀಂಗ್ ಮಾಡಿ ಅಲ್ಲಿಯ ಜನ ಎಂಜಾಯ್ ಮಾಡಿದ್ರು.

ಕಾಡಾನೆ ಬಡಾವಣೆಗೆ ಬಂತಲ್ಲ ಎಂದು ಅಲ್ಲಿಯ ಕೆಲವು ಜನ ಹೆದರಿ ಫಾರೆಸ್ಟ್ ಆಫೀಸರುಗಳಿಗೆ ಫೋನ್ ಮಾಡಿದ್ರು ಆನೆ ಬಂದಿರುವ ಬಗ್ಗೆ ಮಾಹಿತಿ ನೋಡಿದ್ರು..

ತಮ್ಮ ಮನೆಯ ಅಂಗಳದಲ್ಲಿ,ಹಿತ್ತಲಲ್ಲಿ ಆನೆ ಓಡಾಡುತ್ತಿರುವದನ್ನು ನೋಡಿದ ಮಕ್ಕಳ ಚಿಲಿಪಿಲಿ ಬಸವ ಕಾಲೋನಿಯಲ್ಲಿ ಸಾಮಾನ್ಯವಾಗಿತ್ತು

ಕಾಕತಿ ಅರಣ್ಯ ಪ್ರದೇಶದಿಂದ ಈ ಆನೆ ಬಹುಶ ನೀರು ಅಥವಾ ಆಹಾರ ಹುಡುಕುತ್ತಾ ಬೆಳಗಾವಿಗೆ ಬಂದಿರಬಹುದು,ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿ ಆನೆಯನ್ಬು ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆ ಶುರು ಮಾಡಿದ್ದಾರೆ.

WhatsApp Group Join Now
Telegram Group Join Now
Back to top button