Ramadan 2024: ಈ ಪವಿತ್ರ ತಿಂಗಳಿನಲ್ಲಿ ಯಾವೆಲ್ಲ ಕೆಲಸ ಮಾಡಬೇಕು? ಏನು ಮಾಡಬಾರದು?

WhatsApp Group Join Now
Telegram Group Join Now

ಈ ವರ್ಷ ರಂಜಾನ್‌ ಮಾರ್ಚ್ 12, 2024ಕ್ಕೆ ಪ್ರಾರಂಭವಾಗಿ, ಏಪ್ರಿಲ್ 9, 2024ರಂದು ಮುಕ್ತಾಯಗೊಳ್ಳುತ್ತದೆ. ಈ ಹಬ್ಬ ತುಂಬಾ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತದೆ. ರಂಜಾನ್ ತಿಂಗಳಲ್ಲಿ ಓರ್ವ ಮುಸ್ಲಿಂ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು ಯಾವುವು ಅಂತಾ ಇಲ್ಲಿದೆ ನೋಡಿ.

ಇಸ್ಲಾಂನಲ್ಲಿ ಮಹತ್ವದ ತಿಂಗಳು ಅಂದರೆ ಅದು ರಂಜಾನ್ (Ramadan).‌ ಇಂದಿನಿಂದ ರಂಜಾನ್‌ ಸಂಭ್ರಮ ಶುರುವಾಗಿದೆ. ಈ ಮಾಸವನ್ನು ಅತ್ಯಂತ ಪುಣ್ಯಭರಿತ ಮಾಸವೆಂದು ಮುಸ್ಲಿಂ (Muslims) ಬಾಂಧವರು ಪರಿಗಣಿಸುತ್ತಾರೆ. ಈ ಹಬ್ಬ ಸಹ ಸಮುದಾಯದ ದೊಡ್ಡ ಮತ್ತು ಸಂಭ್ರಮದ ಹಬ್ಬ. ಅಲ್ಲಾಹನಿಗೆ ಅಪಾರ ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಪ್ರಾರ್ಥನೆ ಸಲ್ಲಿಸುವ ಮೂಲಕ ಮತ್ತು ದಾನ ಮಾಡುವ ಮೂಲಕ ಅಥವಾ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

ದಾನ-ಧರ್ಮಗಳನ್ನು ಮಾಡುವ ಮೂಲಕ ತಿಳಿದೋ, ತಿಳಿಯದೆಯೋ ಮಾಡಿದ ಅವರ ಪಾಪ-ಕರ್ಮಗಳನ್ನು ಈ ಮೂಲಕ ತೊಳೆದುಕೊಳ್ಳಬಹುದು ಎಂಬುವುದ ಅವರ ನಂಬಿಕೆ.

ರಂಜಾನ್ 2024 ದಿನಾಂಕ

ಈ ವರ್ಷ ರಂಜಾನ್‌ ಮಾರ್ಚ್ 12, 2024ಕ್ಕೆ ಪ್ರಾರಂಭವಾಗಿ, ಏಪ್ರಿಲ್ 9, 2024ರಂದು ಮುಕ್ತಾಯಗೊಳ್ಳುತ್ತದೆ. ಈ ಹಬ್ಬ ತುಂಬಾ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತದೆ. ರಂಜಾನ್ ತಿಂಗಳಲ್ಲಿ ಓರ್ವ ಮುಸ್ಲಿಂ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು ಯಾವುವು ಅಂತಾ ಇಲ್ಲಿದೆ ನೋಡಿ.

 

ಮಾಡುವಂತಹ ಕೆಲಸಗಳು

ಕುರಾನ್ ಪಠಿಸಿ

ರಂಜಾನ್ ತಿಂಗಳಲ್ಲಿ ನೀವು ಅಲ್ಲಾಗೆ ನಿಮ್ಮ ಧನ್ಯವಾದಗಳನ್ನು ವ್ಯಕ್ತಪಡಿಸಬಹುದು ಮತ್ತು ಭಗವಂತನಿಗೆ ಪ್ರಾರ್ಥನೆ ಸಲ್ಲಿಸಬಹುದು. ಹೀಗಾಗಿ, ರಂಜಾನ್ ತಿಂಗಳಿನಲ್ಲಿ ನಿಮಗೆ ಸಾಧ್ಯವಾದಷ್ಟು ಹೆಚ್ಚಾಗಿ ಕುರಾನ್ ಅನ್ನು ಪಠಿಸಲು ಹೇಳಲಾಗುತ್ತದೆ.

ಪ್ರಾರ್ಥನೆಗಳನ್ನು ಸಲ್ಲಿಸಿ

ರಂಜಾನ್ ತಿಂಗಳಲ್ಲಿ ಎಲ್ಲಾ ಮುಸ್ಲಿಮರು ಸಲಾತ್ ಅಥವಾ ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸಬೇಕು. ಇಸ್ಲಾಂನ ಐದು ಸ್ತಂಭಗಳಲ್ಲಿ ಒಂದಾದ ಸಲಾತ್ ಮುಸ್ಲಿಮರಿಗೆ ಮಾರ್ಗದರ್ಶನ ಮತ್ತು ಕ್ಷಮೆಗಾಗಿ ಅಲ್ಲಾಹನನ್ನು ಪ್ರಾರ್ಥಿಸಿಕೊಳ್ಳುವ ಇರುವ ಸನ್ಮಾರ್ಗವಾಗಿದೆ. ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವ ಜನರು ಅಲ್ಲಾಹನ ಆಶೀರ್ವಾದವನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ.

ಶ್ರದ್ಧೆಯ ಉಪವಾಸ

ಇಸ್ಲಾಮಿಕ್ ಸಂಪ್ರದಾಯವು ಉಪವಾಸವನ್ನು ಇಟ್ಟುಕೊಳ್ಳುವುದು ಅತ್ಯುತ್ತಮ ಕ್ರಮವಾಗಿದೆ ಎಂದು ಹೇಳುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ, ಉಪವಾಸವು ಸ್ವಯಂ ನಿಯಂತ್ರಣ ಮತ್ತು ಸ್ವಯಂ-ಶಿಸ್ತನ್ನು ಕಲಿಸುತ್ತದೆ.

ಜಾಹೀರಾತು

ಇಚ್ಛಾಶಕ್ತಿ ಇರುವವರಿಗೆ ಉಪವಾಸ ಮಾಡುವ ಸಾಮರ್ಥ್ಯವನ್ನು ಅಲ್ಲಾಹನು ದಯಪಾಲಿಸುತ್ತಾನೆ ಎನ್ನಲಾಗಿದೆ. ಆದ್ದರಿಂದ ರಂಜಾನ್‌ನ ಪ್ರಮುಖ ಭಾಗವಾಗಿರುವ ಉಪವಾಸವನ್ನು ಶಿಸ್ತಿನಿಂದ ಕೈಗೊಳ್ಳಬೇಕು.

ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳಿ

ರಂಜಾನ್ ಅತ್ಯಂತ ಪವಿತ್ರವಾದ ತಿಂಗಳು ಮತ್ತು ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಮಯವಾಗಿದೆ. ಆದ್ದರಿಂದ ಜನರು ಈ ಧಾರ್ಮಿಕ ಅವಧಿಯಲ್ಲಿ ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ.

ಮಾಡಲೇಬಾರದ ಕೆಲಸಗಳು

ಜೋರಾಗಿ ಸಂಗೀತವನ್ನು ಕೇಳಬೇಡಿ

ಜನರು ತಮ್ಮ ಹೆಚ್ಚಿನ ಸಮಯವನ್ನು ಪ್ರಾರ್ಥನೆಗಾಗಿ ವಿನಿಯೋಗಿಸಲು ಮತ್ತು ಎಲ್ಲಾ ಸಮಯದಲ್ಲೂ ಅಲ್ಲಾಹನನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಸಲಹೆ ನೀಡಲಾಗುತ್ತದೆ. ಜೋರಾಗಿ ಸಂಗೀತ ಕೇಳುತ್ತಾ ಪ್ರಾರ್ಥನೆ ಕೇಲುವ ಅಭ್ಯಾಸಗಳನ್ನು ಇಟ್ಟುಕೊಳ್ಳಬಾರದು.

ದ್ವೇಷವನ್ನು ಇಟ್ಟುಕೊಳ್ಳಬೇಡಿ

ಇದು ಅತ್ಯಂತ ಪವಿತ್ರವಾದ ಮಾಸವಾದ್ದರಿಂದ ಜನರು ಯಾರ ಮೇಲೂ ಅಸಮಾಧಾನ, ಕೋಪ, ದ್ವೇಷ ಸಾಧಿಸದೇ ಸ್ನೇಹಿತರಂತೆ ಕಾಣಬೇಕು. ಅವರು ಹಿಂದೆ ನಿಮಗೆ ಅದೇನೇ ಹಾನಿ ಮಾಡಿದ್ದರೂ ಸಹ, ನಿಮ್ಮ ದ್ವೇಷವನ್ನು ಬಿಟ್ಟು, ಬೇಷರತ್ತಾದ ಕ್ಷಮೆಯನ್ನು ಕೇಳಲು ಇದು ಸರಿಯಾದ ಕ್ಷಣವಾಗಿದೆ.

ಅನುಪಯುಕ್ತ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ

ರಂಜಾನ್ ಪವಿತ್ರ ತಿಂಗಳಾಗಿರುವುದರಿಂದ, ಶಾಪಿಂಗ್ ಮಾಡುವ ಮೂಲಕ, ಅತಿಯಾಗಿ ಟಿವಿ ನೋಡುವುದರ ಮೂಲಕ ಅಥವಾ ಅತಿಯಾಗಿ ಮಲಗುವ ಮೂಲಕ ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಬದಲು ನೀವು ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಲ್ಲಾಗೆ ನಿಮ್ಮ ಪ್ರಾರ್ಥನೆಗಳನ್ನು ನೀಡುವ ಮತ್ತು ಸ್ವಯಂ ನಿಯಂತ್ರಣವನ್ನು ಬೆಳೆಸಿಕೊಳ್ಳಿ.

ಉಪವಾಸದ ಸಮಯದಲ್ಲಿ ಏನನ್ನೂ ಸೇವಿಸಬೇಡಿ

ರಂಜಾನ್ ಹೆಚ್ಚಾಗಿ ಉಪವಾಸವನ್ನು ಇಟ್ಟುಕೊಳ್ಳುವುದು, ಅದಕ್ಕಾಗಿಯೇ ಜನರು ಮಗ್ರಿಬ್ ಅಜಾನ್‌ನ ಮೊದಲು ಏನನ್ನೂ ತಿನ್ನುವುದು ಅಥವಾ ಕುಡಿಯುವುದನ್ನು ತಡೆಯುವುದು ಅವಶ್ಯಕ. ಈ ಒಂದು ತಿಂಗಳ ಅವಧಿಯಲ್ಲಿ ಜನರು ಧೂಮಪಾನ ಮಾಡುವುದನ್ನು ಸಹ ನಿಷೇಧಿಸಲಾಗಿದೆ.

WhatsApp Group Join Now
Telegram Group Join Now
Back to top button