ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್ ವಿದ್ಯುತ್ ದರ ಇಳಿಕೆ

WhatsApp Group Join Now
Telegram Group Join Now

ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ವಿದ್ಯುತ್ ದರ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

ಪರಿಷ್ಕೃತ ದರ ಮಾರ್ಚ್ 1ರಿಂದ ಜಾರಿಗೆ ಬರಲಿದೆ. ಪ್ರತಿ ಯೂನಿಟ್ ಮೇಲೆ 1 ರೂ. 10 ಪೈಸೆ ವಿದ್ಯುತ್ ದರ ಇಳಿಕೆ ಮಾಡಲಾಗಿದೆ.

ವಾಣಿಜ್ಯ ಬಳಕೆ ವಿದ್ಯುತ್ ದರ, ಕೈಗಾರಿಕೆ, ಖಾಸಗಿ, ಆಸ್ಪತ್ರೆಗಳ ವಿದ್ಯುತ್ ದರ ಕೂಡ ಇಳಿಕೆಯಾಗಿದೆ. ವಾಣಿಜ್ಯ ಬಳಕೆ ವಿದ್ಯುತ್ ದರ ಯೂನಿಟ್ ಗೆ 1 ರೂ.25 ಪೈಸೆ ಇಳಿಕೆಯಾಗಿದೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ಯೂನಿಟ್ ಗೆ 40 ಪೈಸೆ ಕಡಿಮೆ ಮಾಡಲಾಗಿದೆ.

ಖಾಸಗಿ ಏತ ನೀರಾವರಿ ಬಳಕೆ ವಿದ್ಯುತ್ ದರ ಯೂನಿಟ್ ಗೆ 2 ರೂಪಾಯಿ, ಕೈಗಾರಿಕೆಗಳ ವಿದ್ಯುತ್ ದರ ಯೂನಿಟ್ ಗೆ 50 ಪೈಸೆ , ಅಪಾರ್ಟ್ ಮೆಂಟ್ ಗಳ ವಿದ್ಯುತ್ ದರದಲ್ಲಿ ಯೂನಿಟ್ ಗೆ 10 ಪೈಸೆ ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

WhatsApp Group Join Now
Telegram Group Join Now
Back to top button