ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಡೇಟ್‌ ಫಿಕ್ಸ್: ಯಾವ ಕ್ಷೇತ್ರಗಳು ಫೈನಲ್‌?

WhatsApp Group Join Now
Telegram Group Join Now
ಬೆಂಗಳೂರು, ಮಾರ್ಚ್‌ 05: ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ಬಿಜೆಪಿ ಹೈಕಮಾಂಡ್‌ ಶನಿವಾರ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಪ್ರಕಟಿಸಿದು, ಎರಡನೇ ಪಟ್ಟಿ ಬಿಡುಗಡೆ ಕುರಿತು ಚರ್ಚೆ ನಡೆಯುತ್ತಿದೆ.ಬಿಜೆಪಿ ಹೈಕಮಾಂಡ್‌ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಪೈಕಿ ಕರ್ನಾಟಕದಿಂದ ಮೊದಲ ಪಟ್ಟಿಯಲ್ಲಿ ಯಾರಿಗೂ ಸ್ಥಾನ ನೀಡಿಲ್ಲ.
ಆದರೆ, ಎರಡನೇ ಪಟ್ಟಿಯಲ್ಲಿ ಬಿಜೆಪಿ ಹೈಕಮಾಂಡ್‌ ಕರ್ನಾಟಕದ ಅಭ್ಯರ್ಥಿಗಳನ್ನ ಘೋಷಣೆ ಮಾಡುವ ಕುರಿತು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಫೈನಲ್‌ ಆಗಿಲಿದ್ದು, ಇನ್ನೂ ಉಳಿದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆ. ಈ ಕುರಿತು ಭಾನುವಾರ ಬಿಜೆಪಿ ಪಕ್ಷದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆದಿದ್ದು, ಚುನಾವಣಾ ನಿರ್ವಹಣಾ ಸಮಿತಿಯು ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ.ಇನ್ನೂ ಬಿಜೆಪಿ ಹೈಕಮಾಂಡ್‌ ಎರಡನೇ ಪಟ್ಟಿ ಬಿಡುಗಡೆ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ ಎಸ್‌ ಯಡಿಯೂರಪ್ಪ ಅವರು ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಮಾರ್ಚ್ 2 ರಂದು 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿತು.

ಎರಡನೇ ಪಟ್ಟಿ ಬಿಡುಗಡೆ (ಮಂಗಳವಾರ) ಕುರಿತು ಇಂದು ದೆಹಲಿಯಲ್ಲಿ ಸಭೆ ನಡೆಸಲಿದೆ. ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಬಹುಶಃ ಕರ್ನಾಟಕವನ್ನು ಒಳಗೊಂಡಿರುವ (ಲೋಕಸಭಾ ಅಭ್ಯರ್ಥಿಗಳ) ಎರಡನೇ ಪಟ್ಟಿಯನ್ನು ಅಂತಿಮಗೊಳಿಸಬಹುದು. ಆ ಹಿನ್ನೆಲೆಯಲ್ಲಿ ನಾನು ದೆಹಲಿಗೆ ಹೋಗುತ್ತಿದ್ದೇನೆ.

ನಾಳೆಯ ನಂತರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು, ರಾಷ್ಟ್ರೀಯ ನಾಯಕರು ಪಟ್ಟಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಯಡಿಯೂರಪ್ಪ ಅವರು ತಿಳಿಸಿದ್ದಾರೆ.ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹುಶಃ ಯಾವುದೇ ವಿಳಂಬವಾಗುವುದಿಲ್ಲ. 28 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಬಹುದು ಎಂದು ಹೇಳಿದಾರೆ. ಕರ್ನಾಟಕದಲ್ಲಿ ಕೆಲವು ಹೊಸ ಮುಖಗಳನ್ನು ಕಣಕ್ಕಿಳಿಸುವ ಸಾಧ್ಯತೆ ಕುರಿತು ಮಾತನಾಡಿ, ಪಕ್ಷದ ರಾಷ್ಟ್ರೀಯ ನಾಯಕರ ಮನಸ್ಸಿನಲ್ಲಿ ಏನಿದೆ ಎಂಬುದರ ಬಗ್ಗೆ ನನಗೆ ಯಾವುದೇ ಸುಳಿವು ಇಲ್ಲ. ಅಂತಿಮ ನಿರ್ಧಾರವನ್ನು ದೆಹಲಿಯಲ್ಲಿರುವ ನಾಯಕರು ತೆಗೆದುಕೊಳ್ಳುತ್ತಾರೆ ಎಂದರು.ರಾಜ್ಯದಲ್ಲಿ ಎನ್‌ಡಿಎ ಪಾಲುದಾರ ಜೆಡಿಎಸ್‌ಗೆ ಎಷ್ಟು ಸ್ಥಾನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಪಕ್ಷದ ವರಿಷ್ಠರು ಹೇಳಲಿಲ್ಲ ಆದರೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ನೇತೃತ್ವದ ಸಭೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಜೆಡಿಎಸ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಗೆ ಸೇರ್ಪಡೆಗೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ ನಾಲ್ಕು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ.ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆಶಿವಮೊಗ್ಗ – ಬಿವೈ ರಾಘವೇಂದ್ರಬೆಂಗಳೂರು ಗ್ರಾಮಾಂತರ – ಡಾ ಸಿಎನ್‌ ಮಂಜುನಾಥ್‌ಚಿಕ್ಕಬಳ್ಳಾಪುರ – ಡಾ ಕೆ ಸುಧಾಕರ್‌ / ಅಲೋಕ್‌ ವಿಶ್ವನಾಥ್‌ಮೈಸೂರು – ಪ್ರತಾಪ್‌ ಸಿಂಹ / ಸಾರಾ ಮಹೇಶ್‌ಚಾಮರಾಜನಗರ – ಡಾ ಮೋಹನ್‌ ಕುಮಾರ್‌ / ಎಸ್‌ ಬಾಲರಾಜ್‌ಬೆಳಗಾವಿ – ಜಗದೀಶ್‌ ಶೆಟ್ಟರ್‌ಚಿಕ್ಕೋಡಿ – ಅಣ್ಣಾ ಸಾಹೇಬ್‌ ಜೊಲ್ಲೆಬೀದರ್‌ – ಭಗವಂತ್‌ ಖೂಬಾಕಲಬುರಗಿ – ಉಮೇಶ್‌ ಜಾಧವ್‌ವಿಜಯಪುರ – ರಮೇಶ್‌ ಜಿಗಜಿಣಗಿಬಾಗಲಕೋಟೆ – ಪಿಸಿ ಗದ್ದಿಗೌಡರ್ರಾಯಚೂರು – ರಾಜಾ ಅಮರೇಶ್ವರ್‌ ನಾಯಕ / ಬಿವಿ ನಾಯಕಕೊಪ್ಪಳ – ಸಂಗಣ್ಣ ಕರಡಿ / ಡಾ ಬಸವರಾಜ್‌ ಕ್ಯಾವಟರ್‌ಧಾರವಾಡ – ಪ್ರಹ್ಲಾದ್‌ ಜೋಶಿಹಾವೇರಿ – ಬಿಸಿ ಪಾಟೀಲ್‌ / ಕೆಇ ಕಾಂತೇಶ್‌ಬಳ್ಳಾರಿ – ಬಿ ಶ್ರೀರಾಮುಲುದಕ್ಷಿಣ ಕನ್ನಡ – ನಳಿನ್‌ ಕುಮಾರ್‌ ಕಟೀಲ್‌ / ನಿರ್ಮಲಾ ಸೀತಾರಾಮನ್‌ಉತ್ತರ ಕನ್ನಡ – ಅನಂತ ಕುಮಾರ್‌ ಹೆಗ್ಡೆ, ವಿಶ್ವೇಶ್ವರ ಹೆಗಡೆ ಕಾಗೇರಿಉಡುಪಿ – ಚಿಕ್ಕಮಗಳೂರು – ಶೋಭಾ ಕರಂದ್ಲಾಜೆಚಿತ್ರದುರ್ಗ – ಎ ನಾರಾಯಣಸ್ವಾಮಿದಾವಣಗೆರೆ – ಜಿಎಂ ಸಿದ್ದೇಶ್ವರ್‌ತುಮಕೂರು – ವಿ ಸೋಮಣ್ಣಬೆಂಗಳೂರು ಉತ್ತರ – ನಿರ್ಮಲಾ ಸೀತಾರಾಮನ್‌ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯಬೆಂಗಳೂರು ಸೆಂಟ್ರಲ್‌ – ಜೈಶಂಕರ್‌ / ಪಿಸಿ ಮೋಹನ್‌
WhatsApp Group Join Now
Telegram Group Join Now
Back to top button