ಬೆಳಗಾವಿ: ಜೂಜಾಟದಲ್ಲಿ ತೊಡಗಿದ್ದ ಎಂಟು ಜನರ ಬಂಧನ ಜೂಜುಕೋರರನ್ನು ಬಂಧಿಸಿದ ಸಿಸಿಬಿ ತಂಡಕ್ಕೆ 5 ಸಾವಿರ ಬಹುಮಾನ ಘೋಷಿಸಿದ ಪೊಲೀಸ್ ಕಮಿಷನರ್

WhatsApp Group Join Now
Telegram Group Join Now

ಬೆಳಗಾವಿ: ಬಾಚಿ ಗ್ರಾಮದ ಹೊರವಲಯದಲ್ಲಿ ಜೂಜಾಟ ಆಡುತ್ತಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ಬೆಳಗಾವಿ ಸಿಸಿಬಿ ಪೊಲೀಸರು ಎಂಟು ಜೂಜುಕೋರರನ್ನು ಬಂಧಿಸಿ 58.600 ರೂ. ನಗದು ವಶಪಡಿಸಿಕೊಂಡಿದ್ದಾರೆ.‌

ಬಾಚಿ ಗ್ರಾಮದ ಹೊರವಲಯದಲ್ಲಿ  ಕಾರ್ಯಾಚರಣೆ ನಡೆಸಿದಾಗ ಜೂಜಾಡುತ್ತಿರುವ ಗುಂಪು ಕಂಡು ಬಂದಿದೆ. ಜೂಜುಕೋರರ ಮೇಲೆ ದಾಳಿ ನಡೆಸಿದಾಗ  ಎಂಟು ಜನರು ಸಿಕ್ಕು ಬಿದ್ದಿದ್ದಾರೆ. ಜೂಜುಕೋರರನ್ನು ಬಂಧಿಸಿದ ಸಿಸಿಬಿ ತಂಡಕ್ಕೆ ಪೊಲೀಸ್ ಆಯುಕ್ತರು  5 ಸಾವಿರ ಬಹುಮಾನ ಘೋಷಿಸಿದ್ದಾರೆ.

1) ಹರೀಶ ರಾಮಕೃಷ್ಣ ತೋರ್ಪಡೆ, ಸಾ: ದತ್ತ ಮಂದಿರ ಹತ್ತಿರ, ಆಂಜನೇಯ ನಗರ, 2)   ಪ್ರಮೋದ ಮಧುಕರ ಗರಡೆ ಸಾ: ಕಾಮತ ಗಲ್ಲಿ, 3)    ವಿಜಯ ಶ್ರೀಕಾಂತ ತರಳೇಕರ ಸಾ: ರಾಮದೇವ ಗಲ್ಲಿ, ವಡಗಾವಿ, 4)    ಅಯೂಬ ಮೆಹಬೂಬ ಸರ್ಜೇಖಾನ್ ಸಾ: ಕಸಾಯಿ ಗಲ್ಲಿ, ಬೆಳಗಾವಿ, 5)    ಸಂತೋಷ ಸಿದ್ರಾಯಿ ದಮ್ಮಣಗಿ ಸಾ: ರಾಮದೇವ ಗಲ್ಲಿ, ಕಂಗ್ರಾಳಿ ಕೆ.ಎಚ್. 6)    ಜ್ಯೋತಿಬಾ ವಸಂತ ಪವಾರ ಸಾ: ರಾಮದೇವ ಗಲ್ಲಿ, ಕಂಗ್ರಾಳಿ ಕೆ.ಎಚ್. 7)    ಆಸೀಪ್ ಖತಾಲಸಾಬ ಮುಲ್ಲಾ, ಸಾ: ಕೋತ್ವಾಲ್ ಗಲ್ಲಿ ಬೆಳಗಾವಿ 8)    ನಾಗೇಶ ರಮೇಶ ವಾಘೂಕರ ಸಾ: ರಾಮದೇವ ಗಲ್ಲಿ, ವಡಗಾವಿ ಬಂಧಿತ ಆರೋಪಿಗಳು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Back to top button