Bengaluru: 250 ಮಹಿಳೆಯರಿಗೆ ಮದುವೆಯಾಗೋದಾಗಿ ವಂಚಿಸಿದ್ದ ಖತರ್ನಾಕ್​ ಆರೋಪಿ ಅರೆಸ್ಟ್​

WhatsApp Group Join Now
Telegram Group Join Now

ಬೆಂಗಳೂರು: ಬರೋಬ್ಬರಿ 250ಕ್ಕೂ ಹೆಚ್ಚು ಮಹಿಳೆಯರು (Woman), ಯುವತಿಯರಿಗೆ ಮದುವೆಯಾಗೋದಾಗಿ (Marriage) ಹೇಳಿ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರು ರೈಲ್ವೆ ಪೊಲೀಸರು (Bengaluru Railway Police) ಬಂಧಿಸಿದ್ದಾರೆ. ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿ (Airport Customs Officer) ಎಂದು ಹೇಳಿಕೊಂಡು ನರೇಶ್‌‌ ಪುರಿ ಗೋಸ್ವಾಮಿ ಎಂಬಾತ ಮಹಿಳೆಯರಿಗೆ ವಂಚಿಸುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧನ (Arrest) ಮಾಡಲಾಗಿದೆ.

 

ಬಂಧಿತ ಆರೋಪಿ

ಮ್ಯಾಟ್ರಿಮೊನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡು, ವಿಧವೆ, ವಿಚ್ಛೇದಿತ ಮಹಿಳೆಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದನಂತೆ. ಬಳಿಕ ಬೆಂಗಳೂರಿಗೆ ಮಾತುಕತೆಗೆಂದು ಕರೆಸಿಕೊಳ್ತಿದ್ದನಂತೆ. ಈ ವೇಳೆ ಅವರಿಗೆ ವಿವಿಧ ಕಾರಣಗಳನ್ನು ಹೇಳಿ ವಂಚನೆ ಮಾಡಿ ಎಸ್ಕೇಪ್ ಆಗುತ್ತಿದ್ದ ಎನ್ನಲಾಗಿದೆ.

ಆರೋಪಿಯ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಬೆಂಗಳೂರು ರೈಲ್ವೆ ಪೊಲೀಸರ ಕಾರ್ಯಚರಣೆ ನಡೆಸಿದ್ದು, ವಿಚಾರಣೆ ವೇಳೆ 250 ಮಹಿಳೆಯರಿಗೆ- ಯುವತಿಯರಿಗೆ ಮದುವೆಯಾಗುವುದಾಗಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಕೊಯಮತ್ತೂರು ಮೂಲದ ಮಹಿಳೆಯೊಬ್ಬರನ್ನ ಮದುವೆ ಮಾತುಕತೆಗೆ ಬೆಂಗಳೂರಿಗೆ ಕರೆಸಿಕೊಂಡಿದ್ದನಂತೆ. ಈ ವೇಳೆ ಅವರು ಬೆಂಗಳೂರಿಗೆ ಬಂದ ವೇಳೆ ನಾನು ನನ್ನ ಮಾವ ಅವರನ್ನು ಸ್ಟೇಷನ್​​ಗೆ ಕಳುಹಿಸುತ್ತಿದ್ದೇನೆ. ಅವರಿಗೆ ಟಿಕೆಟ್ ರಿಸರ್ವೇಷನ್ ಮಾಡಿಸಬೇಕಿರುವುದರಿಂದ ಪರ್ಸ್ ಮನೆಯಲ್ಲಿಯೇ ಬಿಟ್ಟು ಬಂದಿದ್ದಾರೆ ಎಂದು ಹಣ ಪಡೆದುಕೊಂಡು ಎಸ್ಕೇಪ್​ ಆಗಿದ್ದಾರೆ.

ಆರೋಪಿ ಎರಡು ಸಿಮ್ ಕಾರ್ಡ್ ಗಳನ್ನ ಬ್ಲಾಕ್ ನಲ್ಲಿ ಬಳಸುತ್ತಿದ್ದನಂತೆ. ಹಿಂದಿ ಪತ್ರಿಕೆಯಲ್ಲಿ ಜಾಹೀರಾತಿನಲ್ಲಿ ಬರುವ ವಧು ಮೊಬೈಲ್ ನಂಬರ್​ಗೆ ಕರೆ ಮಾಡಿ ಮಾತನಾಡುತ್ತಿದ್ದನಂತೆ. ಅಲ್ಲದೇ ಅಗರ್ ಸೇನಾಜಿ ವೈವಾಹಿಕ ಮಂಚ್ ಎಂಬ ವಾಟ್ರಾಪ್​ ಗ್ರೂಪ್ ನಲ್ಲೂ ಸೇರ್ಪಡೆಯಾಗಿದ್ದನಂತೆ. ಅಲ್ಲಿ ಮಹಿಳೆಯರನ್ನು ಗುರುತಿಸಿ ಅವರನ್ನ ಫೋನ್ ಮೂಲಕ ಮಾತನಾಡಿ ಅವರೊಂದಿಗೆ ಸಲುಗೆ ಬೆಳಸಿ ಮದುವೆ ಆಗುವುದಾಗಿ ನಂಬಿಸುತ್ತಿದ್ದನಂತೆ.

ವಿಚಾರಣೆ ವೇಳೆ ಆರೋಪಿ ರಾಜಸ್ಥಾನದ 56 , ಉತ್ತರ ಪ್ರದೇಶದ 32 , ದೆಹಲಿಯ 32 , ಕರ್ನಾಟಕದ 17, ಮಧ್ಯಪ್ರದೇಶದ 16, ಮಹಾರಾಷ್ಟ್ರ ದ 13, ಗುಜರಾತ್ 11 ಮಹಿಳೆಯರಿಗೆ ವಂಚನೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. (ವರದಿ: ಮಂಜನಾಥ್, ನ್ಯೂಸ್​18, ಬೆಂಗಳೂರು)

WhatsApp Group Join Now
Telegram Group Join Now
Back to top button