2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

WhatsApp Group Join Now
Telegram Group Join Now

ಬೆಂಗಳೂರು :
2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ಮೌಲ್ಯಾಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನರಹಿತ ಹಾಗೂ ಅನುದಾನಿತ ಶಾಲೆಗಳ 2023–24ನೇ ಸಾಲಿನ 5, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು (ಸಂಕಲನಾತ್ಮಕ ಮೌಲ್ಯಾಂಕನ/ಎಸ್ಎ–2) ಮಾರ್ಚ್ 11ರಿಂದ ಆರಂಭವಾಗಲಿವೆ.

ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ್ದು, 5ನೇ ತರಗತಿಗೆ ಮಾರ್ಚ್ 11ರಿಂದ 14ರವರೆಗೆ, 8 ಹಾಗೂ 9ನೇ ತರಗತಿಗೆ ಮಾರ್ಚ್ 11ರಿಂದ 18ರವರೆಗೆ ಪರೀಕ್ಷೆ ಗಳು ನಡೆಯಲಿವೆ ಎಂದು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಹೇಳಿದೆ.

http://kseab.karnataka.gov.in ನಲ್ಲಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. (2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ಮೌಲ್ಯಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ನೋಡಲು 2023-24_5,8&9thAssessmentTentativeTimeTable ಇಲ್ಲಿ ಕ್ಲಿಕ್‌ ಮಾಡಬಹುದು)

5 ನೇ ತರಗತಿ ವೇಳಾಪಟ್ಟಿ
11-03-2024 (ಸೋಮವಾರ) : ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು.
12-03-2024 (ಮಂಗಳವಾರ) : ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ.
13-03-2024 (ಬುಧವಾರ) : ಪರಿಸರ ಅಧ್ಯಯನ.
14-03-2024 (ಗುರುವಾರ) : ಗಣಿತ

8ನೇ ತರಗತಿ ವೇಳಾಪಟ್ಟಿ
11-03-2024 (ಸೋಮವಾರ): ಪ್ರಥಮ ಭಾಷೆ- ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ.
12-03-2024 (ಮಂಗಳವಾರ) : ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ
13-03-2024 (ಬುಧವಾರ) : ತೃತೀಯ ಭಾಷೆ- ಹಿಂದಿ, ಹಿಂದಿ NCERT, ಕನ್ನಡ, ಇಂಗ್ಲಿಷ್ ,ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
14-03-2024 (ಗುರುವಾರ) : ಗಣಿತ.
15-03-2024 (ಶುಕ್ರವಾರ) : ವಿಜ್ಞಾನ
16-03-2024 ( ಶನಿವಾರ) : ಸಮಾಜ ವಿಜ್ಞಾನ
18-03-2024 (ಸೋಮವಾರ) : ದೈಹಿಕ ಶಿಕ್ಷಣ

9ನೇ ತರಗತಿ ವೇಳಾಪಟ್ಟಿ
11-03-2024 (ಸೋಮವಾರ) : ಪ್ರಥಮ ಭಾಷೆ- ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ.
12-03-2024 (ಮಂಗಳವಾರ): ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ.
13-03-2024 (ಬುಧವಾರ) : ತೃತೀಯ ಭಾಷೆ- ಹಿಂದಿ, ಹಿಂದಿ NCERT, ಕನ್ನಡ, ಇಂಗ್ಲಿಷ್ ,ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
14-03-2024 (ಗುರುವಾರ) : ಗಣಿತ.
15-03-2024 (ಶುಕ್ರವಾರ) : ವಿಜ್ಞಾನ.
16-03-2024 (ಶನಿವಾರ) : ಸಮಾಜ ವಿಜ್ಞಾನ.
18-03-2024 (ಸೋಮವಾರ) : ದೈಹಿಕ ಶಿಕ್ಷಣ.

WhatsApp Group Join Now
Telegram Group Join Now
Back to top button