ಬೆಳಗಾವಿ: 7 ಜಲಪಾತಗಳಿಗೆ ಪ್ರವಾಸಿಗರಿಗೆ ನಿಷೇಧ

WhatsApp Group Join Now
Telegram Group Join Now

ಮಹಾರಾಷ್ಟ್ರದ ಲೊನಾವಾಲಾ ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಜಲಪಾತಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಿದೆ. ಮಹಾರಾಷ್ಟ್ರ, ಪಶ್ಚಿಮ ಘಟ್ಟ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ 7 ಜಲಪಾತಗಳಿಗೆ ಪ್ರವಾಸಿಗರಿಗೆ ನಿಷೇಧಿಸಲಾಗಿದೆ.

ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಿಗರು ಈ ಭಾಗದ ಜಲಪಾತಗಳ ವೀಕ್ಷೆಗೆ ಸಾವಿರಾರು ಸಂಖ್ಯೆಗಳಲ್ಲಿ ಆಗಮಿಸುತ್ತಾರೆ. ಬೆಳಗಾವಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿ, ಜಲಪಾತಗಳು ದುಮಿಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಫಾಲ್ಸ್ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.

ಬಟಾವಡೆ ಫಾಲ್ಸ್, ಚಿಕ್ಕಲೆ ಫಾಲ್ಸ್, ಪಾರವಾಡ ಫಾಲ್ಸ್, ಚೋರ್ಲಾ ಫಾಲ್ಸ್, ವಜ್ರಾ ಫಾಲ್ಸ್ ಸೇರಿದಂತೆ 7 ಜಲಪಾತಗಳಿಗೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದ್ದು, ಅರಣ್ಯ ಇಲಾಖೆಯಿಂದ ಗಸ್ತು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.

WhatsApp Group Join Now
Telegram Group Join Now
Back to top button