ಬೆಳಗಾವಿಯಲ್ಲಿ ಮತ್ತೆ ‘ಗಿಫ್ಟ್ ಪಾಲಿಟಿಕ್ಸ್’ : ಪದಾಧಿಕಾರಿಗಳಿಗೆ ಹೆಲ್ಮೆಟ್ ವಿತರಣೆ
ಬೆಂಗಳೂರು : ಲೋಕಸಭೆ ಚುನಾವಣೆಗೂ ಮುನ್ನವೇ ಬೆಳಗಾವಿಯಲ್ಲಿ ‘ಗಿಫ್ಟ್ ಪಾಲಿಟಿಕ್ಸ್’ ನಡೆದಿದ್ದು, ಬಿಜೆಪಿ ನಾಯಕರೊಬ್ಬರು ಪದಾಧಿಕಾರಿಗಳಿಗೆ ಹೆಲ್ಮೆಟ್ ವಿತರಿಸಿದ್ದಾರೆ.
ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ವೇಳೆಯೂ ಕೂಡ ಈ ಗಿಫ್ಟ್ ಪಾಲಿಟಿಕ್ಸ್ ಭಾರಿ ಸದ್ದು ಮಾಡಿತ್ತು, ಇದೀಗ ಲೋಕಸಭೆ ಚುನಾವಣೆಗೂ ಮುನ್ನವೇ ಮತ್ತೆ ಗಿಫ್ಟ್ ಪಾಲಿಟಿಕ್ಸ್ ಮುನ್ನೆಲೆಗೆ ಬಂದಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಹೆಲ್ಮೆಟ್ ವಿತರಿಸುತ್ತಿದ್ದಾರೆ. ಸಂಜಯ ಪಾಟೀಲ್ ಭಾವಚಿತ್ರ ಮತ್ತು ಪಕ್ಷದ ಕಮಲದ ಗುರುತಿರುವ ಹೆಲ್ಮೆಟ್ ಅನ್ನು ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಪದಾಧಿಕಾರಿಗಳಿಗೆ ವಿತರಿಸುತ್ತಿದ್ದಾರೆ.
ಸಂಜಯ ಪಾಟೀಲ್ ಈ ಬಾರಿಯ ಬೆಳಗಾವಿ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಚುನಾವಣೆ ಘೋಷಣೆಗೂ ಮುನ್ನವೇ ಮತಕ್ಷೇತ್ರದ ಪಕ್ಷದ ಪದಾಧಿಕಾರಿಗಳನ್ನು ಸೆಳೆಯಲು ಸಂಜಯ್ ಪಾಟೀಲ್ ಹೆಲ್ಮೆಟ್ ವಿತರಿಸುತ್ತಿದ್ದಾರೆ.
Follow Us