ಬೆಳಗಾವಿ ಜನತೆಯ ಮನಸ್ಸು ಗೆದ್ದ ಡಿಸಿ ನಿತೇಶ್‌ ಪಾಟೀಲ ಡಿಸಿ ಕಾರ್ಯವೈಖರಿಗೆ ಸೈ ಎಂದ ಗಡಿ ಕನ್ನಡಿಗರು, ಅಭಿವೃದ್ಧಿ ಕಾಮಗಾರಿ ವೇಗ ನೀಡಿದ ಅಪರೂಪದ ಜಿಲ್ಲಾಧಿಕಾರಿ

WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿಯ ಜಿಲ್ಲಾಧಿಕಾರಿ ಅಧಿಕಾರಿ ವಹಿಸಿಕೊಂಡ 26 ತಿಂಗಳಿನಲ್ಲಿ ನಿತೇಶ್‌ ಪಾಟೀಲ ಅವರು ನಾಡು, ನುಡಿಗೆ  ಅಪಾರ ಕೊಡುಗೆ ನೀಡುವ ಮೂಲಕ ಬೆಳಗಾವಿ ಜನತೆಯ ಮನಸ್ಸು ಗೆದಿದ್ದಾರೆ.

2022 ಮೇ ತಿಂಗಳಿನಲ್ಲಿ ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರ ವಹಿಸಿಕೊಂಡರು.  ಇದಕ್ಕೂ  ಮೊದಲು ಧಾರವಾಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಕೆರೂಟಗಿ ಗ್ರಾಮದ ನಿತೇಶ್ ಅವರು, ಎಸ್ಸೆಸ್ಸೆಲ್ಸಿವರೆಗೆ ವಿಜಯಪುರದಲ್ಲಿ ವ್ಯಾಸಂಗ ಮಾಡಿದ್ದಾರೆ.  ಬೆಂಗಳೂರಿನಲ್ಲಿ ಪಿಯುಸಿ, ಬಳಿಕ ಅಲಹಾಬಾದ್‍ ಎನ್‍ಐಟಿಯಲ್ಲಿ ಬಿಇ (ಕಂಪ್ಯೂಟರ್ ಸೈನ್ಸ್) ಪದವಿ ಪಡೆದಿದ್ದಾರೆ. ಕೆಲ ಕಾಲ ಸಾಫ್ಟವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು.

2012ರಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದರು. ಪ್ರೊಬೇಷನರಿ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ತಹಶೀಲ್ದಾರ್‌, ನಂತರ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಉಪವಿಭಾಗಾಧಿಕಾರಿ, ಬಳಿಕ ಚಿತ್ರದುರ್ಗ ಜಿ.ಪಂ. ಸಿಇಒ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ.

ಅಪರೂಪದ ಜಿಲ್ಲಾಧಿಕಾರಿ  : ನಿತೇಶ್ ಪಾಟೀಲ ಅವರಅಧಿಕಾರ ಅವಧಿಯ 2022-23 ರಲ್ಲಿ ಬೆಳಗಾವಿಗೆ ಭೀಕರ ಬರಗಾಲ ಎದುರಾಗಿದ್ದು, ಇಂತಹ ಸಂದಿಗ್ಧ ಸ್ಥಿತಿಯಲ್ಲಿ  ಡಿಸಿ ಅವರು  ರೈತರ ಬಗ್ಗೆ ವಿಷೇಶ ಕಾಳಜಿ ತೋರಿ,  ರೈತರ ಸಮಸ್ಯೆ ಪರಿಹರಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.

ಕಳೆದ ಎರಡು ವರ್ಷಗಳಲ್ಲಿ  ಸ್ಮಾರ್ಟ್‌ ಸಿಟಿ ಅಭಿವೃದ್ಧಿ ಸೇರಿದಂತೆ ಜಿಲ್ಲೆಯಲ್ಲಿ ಕಾಮಗಾರಿ ಕೆಲಸಗಳಿಗೆ  ವೇಗ ನೀಡಿ ಅಪರೂಪದ ಡಿಸಿ ನಿತೇಶ್‌ ಪಾಟೀಲ್‌,  ಗಡಿಯಲ್ಲಿ “ಕನ್ನಡ” ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಭಾಗದ ಹಬ್ಬವೆಂದರೆ ಅದು ಕರ್ನಾಟಕ ರಾಜ್ಯೋತ್ಸವ  ಈ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಿಲ್ಲಾಧಿಕಾರಿಗಳು  ಜಿಲ್ಲಾ  ಪೊಲೀಸ್‌ ಆಯುಕ್ತರು, ವರಿಷ್ಠಾಧಿಕಾರಿಗಳ ಜತೆ ಸೇರಿ  ಕನ್ನಡ ಹಬವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದರು. ರಾಜ್ಯೋತ್ಸವದ ವೇಳೆ  ಎಂಇಎಸ್‌  ಅಟ್ಟಹಾಸಕ್ಕೆ ಬ್ರೇಕ್‌ ಹಾಕಿ ಕನ್ನಡ ರಾಜ್ಯೋತ್ಸವಕ್ಕೆ ಮೆರಗು ನೀಡಿ ಕನ್ನಡಿಗರ ಮನ ಗೆದಿದ್ದರು.  ಇವರ ಕಾರ್ಯವೈಖರಿಗೆ  ಗಡಿ ಕನ್ನಡಿಗರು ಕೂಡ ” ಸೈ”  ಎಂದಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜ್ಞಾನ ದಾಸೋಹ:  ಜಿಲ್ಲೆಯ‌ ವಿವಿಧೆಡೆಯಿಂದ ಸಮಸ್ಯೆಗಳನ್ನು ಹೊತ್ತು ಬರುವ ಜನರಿಗೆ ಸಮಸ್ಯೆ ನಿವಾರಣೆ ಜೊತೆಗೆ ಜ್ಞಾನ ಭಂಡಾರವನ್ನು ಉಣಬಡಿಸುವ ಕೆಲಸವನ್ನು ಇಲ್ಲಿನ ಜಿಲ್ಲಾಧಿಕಾರಿಗಳು ನಿರ್ಮಾಣ ಮಾಡಿದ್ದಾರೆ.

ಒಂದೆಡೆ ಶಿಸ್ತಿನಿಂದ ಆಸನಗಳಲ್ಲಿ ಕುಳಿತುಕೊಂಡು ಪುಸ್ತಕ ಓದುತ್ತಿರುವ ಜನ, ಮತ್ತೊಂದೆಡೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಭಾವಚಿತ್ರಗಳು , ಎಲ್ಲಾ ಮಹನೀಯರ ಪುಸ್ತಕಗಳನ್ನು ಒಂದೇ ಸೂರಿನಡಿಯಲ್ಲಿ ವ್ಯವಸ್ಥೆ ಮಾಡಿದ್ದು ಗಮನ ಸೆಳೆಯುತ್ತಿವೆ.  ಜಿಲ್ಲಾಧಿಕಾರಿ  ಕಾರ್ಯಕ್ಕೆ ಸಾರ್ವಜನಿಕರೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ವಿಶೇಷ ಪಾತ್ರ: 2023 ರಲ್ಲಿ ವಿಧಾನಸಭಾ,  2024 ರಲ್ಲಿ ಲೋಕಸಭಾ ಚುನಾವಣೆಯಲ್ಲಿ  ಚುನಾವಣಾಧಿಕಾರಿಯಾಗಿ ನಿತೇಶ್‌ ಪಾಟೀಲ ವಿಶೇಷ ಪಾತ್ರ ವಹಿಸಿದ್ದರು. ಪ್ರಜಾಪ್ರಭುತ್ವದ ಅತೀ ದೊಡ್ಡ  ಲೋಕಸಭಾ ಚುನಾವಣೆಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ  ಕೀರ್ತಿ ನಿತೇಶ್‌ ಪಾಟೀಲ ಅವರಿಗೆ ಸಲ್ಲುತ್ತದೆ.

ಅವರ, 26 ತಿಂಗಳ ಅವಧಿಯಲ್ಲಿ ಜಿಲ್ಲೆಯ ಸಾವಿರಾರು ಜನರಿಗೆ ಸಮಸ್ಯೆಗಳಿಗೆ ಸ್ಪಂದಿಸಿ, ರೈತರ ಕಷ್ಟ ಸುಖದಲ್ಲಿ ಭಾಗಿಯಾಗಿ, ಚುನಾವಣೆ ಬಗ್ಗೆ  ವಿಶೇಷ ಕಾಳಜಿ ತೋರಿದ್ದಾರೆ.   ನಿತೇಶ ಪಾಟೀಲ ಅವರು ಗಡಿ ಜನರ ಮನ-ಮನದಲ್ಲಿ ಉಳಿದಿದ್ದು, ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದು ಶುಭಕೋರಿದ್ದಾರೆ.

WhatsApp Group Join Now
Telegram Group Join Now
Back to top button