ಜನಸಾಮಾನ್ಯರಿಗೆ ಬಿಗ್ ಶಾಕ್ : ಕೆಜಿಗೆ 500 ರೂ. ತಲುಪಿದ ʻಬೆಳ್ಳುಳ್ಳಿʼ ದರ
ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಬೆಳ್ಳುಳ್ಳಿ ಬೆಲೆ ಏರಿಕೆಯ ಬಿಸಿ ತಟ್ಟಿದೆ.ಬೆಳ್ಳುಳ್ಳಿ ಕೆಜಿಗೆ 400 ರಿಂದ 500 ರೂ. ತಲುಪಿದೆ.
ಕಳೆದ ವಾರ ಕೆ.ಜಿಗೆ 200 ರಿಂದ 300 ರೂ. ಇದ್ದ ಬೆಳ್ಳುಳ್ಳಿ ದರ ಈಗ 400- 500 ರೂ.ವರೆಗೆ ಏರಿಕೆಯಾಗಿದೆ.
ಸದ್ಯಕ್ಕೆ ಬೆಳ್ಳುಳ್ಳಿ ಬೆಲೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ಫೆಬ್ರವರಿವರೆಗೂ ಬೆಳ್ಳುಳ್ಳಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕಳೆದ ಎರಡು ತಿಂಗಳಿಣಿಂದ ಏರುಗತಿಯಲ್ಲೇ ಇರುವ ಬೆಳ್ಳುಳ್ಳಿ ದರ ಇದೀಗ ಒಂದು ಕೆಜಿಗೆ 400 ರಿಂದ 500 ರೂ. ವರೆಗೆ ಮುಟ್ಟಿದೆ. ಟೊಮೆಟೊ, ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆಯಾಗದ ಕಾರಣ ಮಾರುಕಟ್ಟೆ ಬೇಡಿಕೆಗೆ ಅಗತ್ಯದಷ್ಟು ಬೆಳ್ಳುಳ್ಳಿ ಬಂದಿಲ್ಲ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ಬೆಳ್ಳುಳ್ಳಿ ಬೆಳೆ ನಾಶವಾಗಿರುವುದರಿಂದ ಸಹಜವಾಗಿಯೇ ಬೆಳ್ಳುಳ್ಳಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.