ಹೊಲದಿಂದ ಬರ್ತಿದ್ದ ಒಂಟಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಆಸ್ಪತ್ರೆಗೆ ದಾಖಲು
ಕಲಬುರಗಿ, : ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಇದೀಗ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಒಂಟಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಲಿಂಗಮ್ಮ ಹಲ್ಲೆಗೊಳಾದ ಮಹಿಳೆ. ಇವರು ಹೊಲದಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಂತೆ 6 ರಿಂದ 7 ಜನರ ಗುಂಪೊಂದು ಕಬ್ಬಿಣದ ರಾಡ್, ಚಾಕು ಹಾಗೂ ಕಲ್ಲಿನಿಂದ ಲಿಂಗಮ್ಮನ ಮೇಲೆ ಏಕಾಎಕಿ ಹಲ್ಲೆ ನಡೆಸಿದೆ.
ಹಲ್ಲೆಗೆ ಕಾರಣವೇನು?
ನಾರಾಯಣ ಎಂಬುವರ ಹೊಲದಲ್ಲಿ ಪಾಲುದಾರಿಕೆಯಲ್ಲಿ ವ್ಯವಸಾಯ ಮಾಡುತ್ತಿದ್ದ ಹಲ್ಲೆಗೊಳಗಾದ ಲಿಂಗಮ್ಮ, ನಾರಾಯಣ ಅವರ ಹೊಲ, ನಿನ್ಯಾಕೆ ಪಾಲುದಾರಿಕೆಯಲ್ಲಿ ಮಾಡ್ತಿಯಾ ಎಂದು ಅಶೋಕ್ ಅಂಬಲಾಳ, ಮಲ್ಲು ಸಾಸನೂರ, ಸುರೇಶ್ ಸಾಸನೂರ, ಮಹೇಶ್ ಸಾಸನೂರ, ದಂಡವ್ವ ಹಾಗೂ ಜಗದೇವಪ್ಪ ಎಂಬುವವರು ಹಲ್ಲೆ ನಡೆಸಿದ್ದಾರೆ. ಇನ್ನು ಹಲ್ಲೆಗೊಳಗಾದ ಲಿಂಗಮ್ಮನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.