ಕಳ್ಳತನದ ಕೋಳಿ ಖರೀದಿಸುತ್ತಿದ್ದ ರೌಡಿಶೀಟರ್, ಪ್ರಶ್ನಿಸಿದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ
ಕೋಲಾರ, ಜ.5: ಕಳ್ಳತನದ ಕೋಳಿಗಳನ್ನು ಖರೀದಿ ಮಾಡುತ್ತಿದ್ದದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ರೌಡಿಶೀಟರ್ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಕೋಲಾರ (Kolar)ನಗರದ ಅಮ್ಮವಾರಪೇಟೆ ವೃತ್ತದಲ್ಲಿ ನಡೆದಿದೆ. ತಾಜ್ಫೀರ್ ಎಂಬಾತ ಹಲ್ಲೆಗೆ ಯತ್ನಿಸಿದ್ದು, ಪೊಲೀಸರು ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಅಮ್ಮವಾರಪೇಟೆ ವೃತ್ತದಲ್ಲಿ ತಾಜ್ಫೀರ್ ಕೋಳಿ ಮಾಂಸದ ಅಂಗಡಿ ಇಟ್ಟುಕೊಂಡಿದ್ದು, ಕಾದರಿಪುರದಲ್ಲಿ ಕಳ್ಳತನ ಮಾಡಿ ತರುತ್ತಿದ್ದ ಕೋಳಿಗಳನ್ನು ಖರೀದಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕಳ್ಳತನದ ಕೋಳಿ ಖರೀದಿ ಬಗ್ಗೆ ತನಗೆ ಗೊತ್ತಿಲ್ಲ ಎನ್ನುತ್ತಿದ್ದಾನೆ. ಆದರೆ, ಇಲ್ಲಿ ಕಳ್ಳತನದ ಕೋಳಿಗಳನ್ನು ಖರೀದಿಸುತ್ತಿರುವುದು ಈತನೊಬ್ಬನೇ ಎಂದು ಕಿರಣ್ ಆರೋಪಿಸಿದ್ದಾರೆ.
ಅಲ್ಲದೆ, ಕಡಿಮೆ ಮೆಲೆಗೆ ಕೋಳಿಗಳನ್ನು ಖರೀದಿಸುತ್ತಿದ್ದಾನೆ ಎಂದು ಆರೋಪಿಸಿದ ಕಿರಣ್, ಒಂದೂವರೆ ಸಾವಿರ ರೂಪಾಯಿ ಕೋಳಿಗಳನ್ನು 800 ರೂಪಾಯಿಗೆ ಖರೀದಿಸುತ್ತಿದ್ದಾನೆ ಎಂದಿದ್ದಾರೆ. ಈ ವೇಳೆ ಕುಪಿತಗೊಂಡ ತಾಜ್ಫೀರ್, ಅಂಗಡಿಯೊಳಗಿದ್ದ ಕೋಳಿ ಮಾಂಸ ಮಾಡಲು ಬಳಸುತ್ತಿದ್ದ ಕತ್ತಿಯಿಂದ ಕಿರಣ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ಕೂಡಲೇ ಹಲ್ಲೆಯಿಂದ ತಪ್ಪಿಸಿಕೊಂಡ ಕಿರಣ್ ತಾಜ್ಫೀರ್ನನ್ನು ಹಿಡಿದು ಥಳಿಸಿದ್ದು, ಅಲ್ಲೇ ಇದ್ದ ಪೊಲೀಸ್ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.