ಕೋಡಿಶ್ರೀ ಹೊಸ, ಸ್ಫೋಟಕ ಭವಿಷ್ಯವಾಣಿ: ಕೋಡಿಶ್ರೀಗಳ ಭವಿಷ್ಯವಾಣಿ ಕರ್ನಾಟಕದಲ್ಲಿ ವಿಶೇಷತೆ ಪಡೆದುಕೊಂಡಿದೆ. ಏನ್‌ ಹೇಳಿದ್ದಾರೆ ನೋಡಿ!

WhatsApp Group Join Now
Telegram Group Join Now

ಕೋಡಿಶ್ರೀಗಳ ಭವಿಷ್ಯವಾಣಿ ಕರ್ನಾಟಕದಲ್ಲಿ ವಿಶೇಷತೆ ಪಡೆದುಕೊಂಡಿದೆ. ಶ್ರೀಗಳು ಇದೀಗ ಹೊಸ ಹಾಗೂ ಸ್ಫೋಟಕ ಭವಿಷ್ಯವಾಣಿಯೊಂದನ್ನು ನುಡಿದಿದ್ದು, ರಾಜ್ಯದ ಜನರಲ್ಲಿ ಹೊಸ ಆತಂಕ ಶುರುವಾಗಿದೆ. ಕೋಡಿಶ್ರೀಗಳು ಹೇಳಿರುವ ಭವಿಷ್ಯವಾಣಿಗಳು ಸುಳ್ಳಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಹಗರಣ ಹಾಗೂ ರೇಣುಕಾಸ್ವಾಮಿ ಕೊಲೆ ಕೇಸ್‌ ಹಾಗೂ ನಟ ದರ್ಶನ್‌ ತೂಗುದೀಪ್ ಅವರ ವಿಚಾರದಲ್ಲಿ ಹೇಳಿರುವ ಮಾತುಗಳು ಸತ್ಯವಾಗಿವೆ.

ಇದೀಗ ಶ್ರೀಗಳು ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ದುರಂತ ಸಂಭವಿಸುವ ಮುನ್ಸೂಚನೆ ನೀಡಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆಯ ಕೋಡಿಮಠ ಸಂಸ್ಥಾನ ಡಾ.ಶಿವನಾಂದ ಶಿವಯೋಗಿ ರಾಜೇಂದ್ರಸ್ವಾಮಿಗಳು ಹೊಸ ಭವಿಷ್ಯವಾಣಿ ನುಡಿದಿದ್ದಾರೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ರಾಜಕೀಯ, ನೈಸರ್ಗಿಕ ಹಾಗೂ ಆರ್ಥಿಕ ಪರಿಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕೋಡಿಶ್ರೀಗಳು ಭವಿಷ್ಯವಾಣಿಯನ್ನು ಹೇಳಿದ್ದು ಇದೆ. ಶ್ರೀಗಳು ಹೇಳುವ ಬಹುತೇಕ ಭವಿಷ್ಯವಾಣಿಗಳು ಸತ್ಯವಾಗುತ್ತಿದ್ದು, ಇದೀಗ ಹೊಸ ಹಾಗೂ ಭಯಾನಕ ಭಬಿಷ್ಯವಾಣಿಯನ್ನೇ ಶ್ರೀಗಳು ಹೇಳಿದ್ದಾರೆ.

ಕೆಲವು ತಿಂಗಳುಗಳ ಮುಂದೆ ಕೋಡಿಶ್ರೀಗಳು ಮುಖ್ಯಮಂತ್ರಿ ಮೇಲೆ ಆರೋಪ ಬಂದಾಗ ಭವಿಷ್ಯವಾಣಿ ನುಡಿದಿದ್ದರು. ಅದರಲ್ಲಿ ಅರಸನ ಮೇಲೆ ಅಪವಾದ ಬರಲಿದೆ. ಆದರೆ, ಅರಸನಿಗೆ ಏನು ಆಗಲ್ಲ. ಅವರನ್ನು ಅಲ್ಲಾಡಿಸಲು ಆಗಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಶ್ರೀಗಳ ಭವಿಷ್ಯವಾಣಿ ಈಗ ಸತ್ಯವಾದಂತಾಗಿದೆ. ಯಾಕೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ)ದಿಂದ ಬದಲಿ ನಿವೇಶನ ಪಡೆದು ಸಂಕಷ್ಟಕ್ಕೆ ಸಿಲುಕಿದ್ದರು. ಇನ್ನೇನು ಅವರು ರಾಜೀನಾಮೆ ಕೊಡಬೇಕು ಎನ್ನುವ ಹಂತವನ್ನು ತಲುಪಿತ್ತು.

ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಅವರು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವಾಗ್ದಾಳಿ ನಡೆಸಿದ್ದರು. ಕರ್ನಾಟಕದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀನು ಕಬಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೊಂದರೆಯಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದರು. ಇದಾದ ಕೆಲವೇ ದಿನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಶನ್ ರಾಜ್ಯಪಾಲರು ಅನುಮತಿ ಕೊಟ್ಟರು. ಆ ಮೇಲೆ ಎಫ್‌ಐಆರ್ ಸಹ ದಾಖಲಾಯಿತು.

ನಟ ದರ್ಶನ್‌ ಅವರ ವಿಷಯದಲ್ಲಿ ಶ್ರೀಗಳು ಹೇಳಿದ್ದ ಭವಿಷ್ಯವಾಣಿ ಸಹ ಸತ್ಯವಾಗಿತ್ತು. ದರ್ಶನ್‌ ಹಾಗೂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಕೋಡಿಶ್ರೀ ಹೇಳಿದ ಭವಿಷ್ಯವಾಣಿ ಸತ್ಯವಾದ ಮೇಲೆ ಜನರಲ್ಲಿ ಕೋಡಿಶ್ರೀಗಳ ಭವಿಷ್ಯವಾಣಿಯ ಬಗ್ಗೆ ಇನ್ನಷ್ಟು ನಂಬಿಕೆ ಬಂದಿದೆ.

ಕೋಡಿಶ್ರೀಗಳ ಹೊಸ ಭವಿಷ್ಯವಾಣಿ

ಇದೀಗ ಕೋಡಿಶ್ರೀಗಳು ಹೊಸ ಭವಿಷ್ಯವಾಣಿಯನ್ನು ನುಡಿದಿದ್ದು. ಇದು ರಾಜ್ಯದ ಜನರಲ್ಲಿ ಹೊಸ ಆತಂಕವನ್ನೇ ಸೃಷ್ಟಿ ಮಾಡಿದೆ. ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಇದೀಗ ಹೊಸ ಭವಿಷ್ಯವನ್ನು ಹೇಳಿದ್ದಾರೆ.

ರಾಜ್ಯದಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಶ್ರೀಗಳು ಹೇಳಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಹಿಂಗಾರು ಅವಧಿ ಮುಕ್ತಾಯವಾಗುತ್ತಾ ಬರುತ್ತಿದ್ದರೂ ಮಳೆ ನಿಂತಿಲ್ಲ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗುತ್ತಿರುವುದರಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗ್ತಿದೆ. ಈಗಾಗಲೇ ಅಕಾಲಿಕ ಮಳೆಯಿಂದ ರೈತರು ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸಿದ್ದಾರೆ. ಇದೀಗ ಇನ್ನೂ ಮಳೆ ಆಗಲಿದೆ ಎಂದಾದರೆ, ಅದು ರಾಜ್ಯಕ್ಕೆ ಕೇಡುಗಾಲ ಅಂತಲೇ ಅರ್ಥ. ಮಳೆ ಹೆಚ್ಚಾಗಿ ಬೆಳೆ ಹಾನಿಯಾದರೆ ಎಲ್ಲಾ ವಸ್ತುಗಳ ಬೆಲೆಯೂ ಹೆಚ್ಚಳವಾಗಲಿದೆ.

ಕರ್ನಾಟಕದ ಜನತೆಗೆ ಪರೋಕ್ಷ ಆರ್ಥಿಕ ಹೊರೆ ಆಗಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ನಾಯಿಗಳ ಹಾವಳಿ ಕರ್ನಾಟಕದಲ್ಲಿ ವಿಪರೀತವಾಗಲಿದೆ. ಇದರಿಂದ ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಸಹ ಕಷ್ಟವಾಗಲಿದೆ ಎಂದು ಶ್ರೀಗಳು ಹೇಳಿದ್ದಾರೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ನಾಯಿಗಳ ಹಾವಳಿ ಹಾಗೂ ದಾಳಿ ಹೆಚ್ಚಾಗಿದೆ. ಕೆಲವು ಭಾಗದಲ್ಲಿ ನಾಯಿ ದಾಳಿಯಿಂದ ಸಾವು ಸಂಭವಿಸಿರುವುದು ಸಹ ಇದೆ.

ಅಲ್ಲದೇ ಹುಬ್ಬಳ್ಳಿ ಮಹಾನಗರದಲ್ಲಿ ನಾಯಿಗಳ ಹಾವಳಿ ವಿಪರೀತವಾಗಿತ್ತು. ಒಂದೇ ದಿನ 20ಕ್ಕೂ ಹೆಚ್ಚು ಜನರಿಗೆ ನಾಯಿಗಳು ಕಚ್ಚಿದ್ದವು. ಇದರಿಂದ ಜನ ಕಂಗಾಲಾಗಿದ್ದರು. ಇದೇ ಪರಿಸ್ಥಿತಿ ಮುಂದುವರಿಯಲಿದೆ. ಅಲ್ಲದೇ ಗಂಭೀರ ಪರಿಣಾಮಗಳು ಆಗಲಿವೆ ಎಂದೂ ಶ್ರೀಗಳು ಹೇಳಿದ್ದಾರೆ. ಮುಂದುವರಿದು, ರಾಜ್ಯದಲ್ಲಿ ರೋಗ (ಸಾಂಕ್ರಾಮಿಕ ರೋಗ) ರುಜಿನ ಹೆಚ್ಚಾಗಲಿದೆ ಎಂದಿದ್ದಾರೆ. ನಾಯಿಗಳ ಹಾವಳಿಯ ಜೊತೆ ಜೊತೆಗೆ ಕೋತಿಗಳ ಹಾವಳಿಯೂ ಶುರುವಾಗಲಿದೆ ಎಂದು ಶ್ರೀಗಳು ಹೊಸ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ.

ಧಾರಾಕಾರ ಮಳೆ, ಕೋತಿಗಳ ಹಾವಳಿಯಿಂದ ರೈತರಿಗೆ ಸಂಕಷ್ಟ ಇರಲಿದೆ. ಆದರೆ, ರೈತರು ಬೆಳೆದ ಫಸಲು ಎಲ್ಲವೂ ಹಾಳಾಗುವುದಿಲ್ಲ. ರೈತರಿಗೆ ಹೆಚ್ಚು ನಷ್ಟವಾಗಲ್ಲ. ಹೀಗಾಗಿ, ರೈತರು ಆತಂಕಪಡಬೇಕಿಲ್ಲ ಎಂದೂ ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
Back to top button