ಫೆ.2ರಿಂದ ಹುಬ್ಬಳ್ಳಿ-ಪುಣೆ ವಿಮಾನಯಾನ ಸೇವೆ ಪುನರಾರಂಭ

WhatsApp Group Join Now
Telegram Group Join Now

ಹುಬ್ಬಳ್ಳಿ: ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ ಫೆಬ್ರವರಿ 2 ರಿಂದ ವಿಮಾನಯಾನ ಸೇವೆ ಪುನರಾರಂಭವಾಗಲಿದೆ. ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ (Hubli to Pune Flight) ವಿಮಾನಯಾನ ಸೇವೆ ಪುನರಾರಂಭಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ.

 

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು, ನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿ – ಪುಣೆ – ಹುಬ್ಬಳ್ಳಿ ಮಾರ್ಗದಲ್ಲಿ ವಿಮಾನಗಳ ಸಂಚಾರ ಪುನರಾರಂಭವಾಗಿದೆ. ಫೆಬ್ರವರಿ 2 ರಿಂದ ವಾರಕ್ಕೆ 4 ವಿಮಾನಗಳು ನಿರಂತರವಾಗಿ ಸಂಚರಿಸಲಿವೆ. ನಮ್ಮ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಲು ಸಹಕರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋ ಆಡಳಿತ ವರ್ಗದವರಿಗೆ ಧನ್ಯವಾದ ತಿಳಿಸಿದ್ದಾರೆ.

WhatsApp Group Join Now
Telegram Group Join Now
Back to top button