ಕೆ.ಪಿ.ಸಿ.ಸಿ. (KPCC) ಅಧ್ಯಕ್ಷರ ಅನುಮೋದನೆ ಮೇರೆಗೆ “ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ರಾಜ್ಯ ಕಾರ್ಯದರ್ಶಿಯನ್ನಾಗಿ” ಹಸೀನಾ ರಸೂಲಸಾಹೇಬ್ ಪೀರಜಾದೆ ನೇಮಕ
ಅಖಿಲ ಭಾರತ ಕಾಂಗ್ರೇಸ್ ಸೇವಾದಳದ ಅಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರ ಅನುಮೋದನೆ ಮೇರೆಗೆ ತಮ್ಮನ್ನು “ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ರಾಜ್ಯ ಕಾರ್ಯದರ್ಶಿಯನ್ನಾಗಿ” ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ಹಾಗೂ ಸೇವಾದಳದ ಧೇಯ್ಯೋದ್ದೇಶಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ತಿಳಿಸಲಾಗಿದೆ.
ನೀವು ಪಕ್ಷದ ತತ್ವಸಿದ್ಧಾಂತಗಳಿಗೆ ಬದ್ಧರಾಗಿ ಯಾವುದೇ ಬೇರೆ ರಾಜಕೀಯ ಆಸೆ ಆಮಿಶಗಳಿಗೆ ಒಳಗಾಗದೆ, ಸಾಮಾಜಿಕ ಪಿಡುಗುಗಳಿಂದ ದೂರವಿರಬೇಕು ಹಾಗೂ ಪ್ರಾಮಾಣಿಕತೆ ಮತ್ತು ಜಾರಿತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಈ ಮೂಲಕ ತಮಗೆ ತಿಳಿಸುತ್ತಾ ಜಾತಿ, ಧರ್ಮ, ಮತ ಮೇಲಿ, ಕೀಳು ಹಾಗೂ ಯಾವುದೇ ಕಲಹ ಬಾರದ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಈ ಮೂಲಕ ನಿಮಗೆ ಈ ಜವಾಬ್ದಾರಿಯನ್ನು ನೀಡಿರುತ್ತೇವೆ.
ತಾವುಗಳು ತಕ್ಷಣದಿಂದ ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು ಕೆ.ಪಿ.ಸಿ.ಸಿ.ಯ ಮಾರ್ಗದರ್ಶನದಲ್ಲಿ ರಾಜ್ಯದ ನಾಯಕರು ಮತ್ತು ಜಿಲ್ಲಾ ಅಧ್ಯಕ್ಷರ ಸಹಕಾರದೊಂದಿಗೆ ಕಾಂಗ್ರೇಸ್ ಸೇವಾದಳದ ಸಂಘಟನೆ ಮತ್ತು ಪಕ್ಷದ ಬಲವರ್ಧನೆ ಮಾಡಲು ಕಾಯೋನ್ಮುಖರಾಬೇಕೆಂದು ಕೋರಿದೆ.
BELAGAVI AIRPORT ROAD
NEAR S.C MOTOR MARUTI NAGAR. MOBILE NO:: 9113989261